ದೆಹಲಿ:ಜಗತ್ತಿನಾದ್ಯಂತ ಸಾವಿರಾರು ಮಿಲಿಯನ್​ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ವ್ಯಾಟ್ಸ್​ಆ್ಯಪ್ ಕಂಪನಿಯು ತನ್ನ ಬಳಕೆದಾರರಿಗೆ ಹೊಸ ಹೊಸ ಪೀಚರ್​​ಗಳನ್ನು ನೀಡುತ್ತಲೇ ಬಂದಿದೆ. ಸದ್ಯ, ಖಾಸಗಿತನ ಮತ್ತು ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ‘ವ್ಯಾಟ್ಸ್​​ಆ್ಯಪ್ ಚಾಟ್​​ಲಾಕ್’ ಎಂಬ ಫೀಚರ್​ನ್ನು ನೀಡಿದೆ.
ಇದನ್ನೂ ಓದಿ: ಸಮಪರ್ಕ ನೀರು ಪೂರೈಸದಿದ್ದರೆ ಟೆಂಡರ್ ವಾಪಸ್
ಈ ಹೊಸ ಫೀಚರ್​​ ಪ್ರಕಾರ, ಜನರು ತಮ್ಮ ಖಾಸಗಿ ಚಾಟ್‌ಗಳನ್ನು ಸಂರಕ್ಷಿಸಿಕೊಳ್ಳಬಹುದಾಗಿದ್ದು, ತಮಗೆ ಬೇಕಾದ ಚಾಟ್​ಗಳನ್ನು ಮಾತ್ರ ಲಾಕ್​ ಮತ್ತು ಹೈಡ್​ ಮಾಡಬಹುದಾಗಿದೆ. ಹೀಗೆ ಲಾಕ್​ ಅಥವಾ ಹೈಡ್​ ಮಾಡಿದ ಚಾಟ್​​ನ್ನು ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್​ನ ಮೂಲಕ ತೆರೆಯಲು ಸಾಧ್ಯವಾಗುತ್ತದೆ.
ಹಾಗಾಗಿ ಇದನ್ನು ಬೇರೆ ಯಾರೂ ಸಹ ವೀಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಈ ಫೀಚರ್​ ಜತೆ​ ಖಾಸಗಿತನ ರಕ್ಷಿಸುವ ಸಲುವಾಗಿ ಆರ್ಕೈವ್ ಚಾಟ್‌ಗಳು, ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್, ಎನ್‌ಕ್ರಿಪ್ಟ್ ಬ್ಯಾಕಪ್, ಕಣ್ಮರೆಯಾಗುತ್ತಿರುವ ಸಂದೇಶಗಳು(Disappearing messges), ಸ್ಕ್ರೀನ್‌ಶಾಟ್ ನಿರ್ಬಂಧಿಸುವಿಕೆ ಇತರ ವೈಶಿಷ್ಟ್ಯಗಳನ್ನು ವ್ಯಾಟ್ಸ್​​ಆ್ಯಪ್ ಕಂಪನಿಯು ತನ್ನ ಬಳಕೆದಾರರಿಗೆ ನೀಡಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
