ರಾಮನಗರ:ಸಾಲು ಸಾಲು ಅಪಘಾತಗಳಿಂದ ಅಪಖ್ಯಾತಿ ಗುರಿಯಾಗಿರುವ ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ವೇನಲ್ಲಿ ವ್ಹೀಲಿಂಗ್​ ಮಾಡುವ ಮೂಲಕ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ ಪುಂಡರನ್ನು ಕುಂಬಳಗೋಡು ಪೊಲೀಸರು ಬಂಧಿಸಿದ್ದಾರೆ.
ನಾಲ್ವರು ಆರೋಪಿಗಳನ್ನು ಬಂಧಿಸಿ, ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪುಂಡರು ಕಳೆದ ನಾಲ್ಕೈದು ತಿಂಗಳಿಂದ ಎಕ್ಸ್​ಪ್ರೆಸ್​ವೇನಲ್ಲಿ ಆಗಾಗ ವ್ಹೀಲಿಂಗ್ ಮಾಡುತ್ತಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಕುಂಬಳಗೊಡು, ಬಿಡದಿ, ಕೆಂಗೇರಿ ರಸ್ತೆಯಲ್ಲಿ ಪುಂಡರು ವ್ಹೀಲಿಂಗ್​ ಮಾಡಿದ್ದರು.
ಇದನ್ನೂ ಓದಿ:ವಿರೋಧದ ಮಧ್ಯೆಯೂ ಪ್ರಿಯಕರನನ್ನು ವರಿಸಿದ ಯುವತಿ: ರಕ್ಷಣೆ ಕೋರಿ ಠಾಣೆಗೆ ಹೋದವಳಿಗೆ ಕಾದಿತ್ತು ಆಘಾತ!​
ಒನ್ ವೇಯಲ್ಲಿಯೂ ವ್ಹೀಲಿಂಗ್ ಮಾಡಿ ಹುಚ್ಚಾಟ ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿರುವುದನ್ನು ಗಮನಿಸಿ, ಅದರ ಮೂಲ ಹುಡುಕಿ ಪುಂಡರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಮೊಹಮ್ಮದ್ ಹುಸೇನ್, ವಾಸೀಂ ಖಾನ್, ಮುಜಾಮೀನ್ ಹಾಗೂ ಸುಲ್ತಾನ್ ಎಂದು ಗುರುತಿಲಾಗಿದೆ. ಬಂಧಿತರಿಂದ 2 ಬೈಕ್ ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಅತಿಯಾಗಿ ಡ್ರೈಫ್ರೂಟ್ಸ್ ಸೇವಿಸ್ತೀರಾ? ಅದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

ಥ್ರೆಡ್ಸ್​ ಆ್ಯಪ್​ ನಾಗಾಲೋಟಕ್ಕೆ ಬೆಚ್ಚಿಬಿದ್ರಾ ಎಲನ್​ ಮಸ್ಕ್​? ಮೆಟಾ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 16 =
Remember me
