ಬೆಂಗಳೂರು:ಖಾಸಗಿ ಕಂಪನಿ ನೌಕರನ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಕಳ್ಳರು, ಕಾರು ಸಮೇತ ಪರಾರಿಯಾಗಿದ್ದಾರೆ. ಇಸ್ರೋ ಲೇಔಟ್ ಬಳಿಯ ವಿಕ್ರಮ್​ ನಗರದ ರಾಮ್‌ನಾರಾಯಣ ಮಾಳ್ವಿ ಎಂಬುವರು ದೂರು ನೀಡಿದ್ದಾರೆ.
ಖಾಸಗಿ ಕಂಪನಿ ನೌಕರರಾಗಿರುವ ರಾಮ್‌ನಾರಾಯಣ್, ಆ.6ರಂದು ಕುಟುಂಬಸಮೇತ ಮಧ್ಯಪ್ರದೇಶದ ಭೂಪಾಲ್‌ಗೆ ಹೋಗಿದ್ದರು. ಆಗಸ್ಟ್ 11ರ ಬೆಳಗ್ಗೆ ಅವರ ಸ್ನೇಹಿತ ಕರೆ ಮಾಡಿ ಮನೆ ಕಳ್ಳತನ ಆಗಿರುವ ವಿಷಯ ಮುಟ್ಟಿಸಿದ್ದರು. ಬಳಿಕ ರಾಮ್​ನಾರಾಯಣ್​ ಅಲ್ಲಿಂದ ಹೊರಟು ಬೆಂಗಳೂರಿಗೆ ಬಂದು ನೋಡಿದಾಗ ಮನೆಯ ಮುಖ್ಯದ್ವಾರ ತೆರೆದು ಕಳ್ಳರು ಒಳಗೆ ನುಗ್ಗಿ ಚಿನ್ನ-ಬೆಳ್ಳಿ ಆಭರಣ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಅಲ್ಲದೆ, ಮನೆಯಲ್ಲಿದ್ದ ಕಾರಿನ ಕೀ ತೆಗೆದುಕೊಂಡು ಕಾಂಪಾಂಡ್​ನಲ್ಲಿದ್ದ ಟಾಟಾ ಟಿಯಾಗೊ ಕಾರು ಓಡಿಸಿಕೊಂಡು ಹೋಗಿದ್ದಾರೆ.
ಈ ಕಳ್ಳರು ಅಂದೇ ಪಕ್ಕದಲ್ಲಿದ್ದ ಸ್ಟುಡಿಯೋಗೆ ನುಗ್ಗಿ ದುಬಾರಿ ಕ್ಯಾಮರಾ ಸಹ ಕಳ್ಳತನ ಮಾಡಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡಿ ಬೆಲೆ ಬಾಳುವ ವಸ್ತುಗಳನ್ನು ಪತ್ತೆ ಹಚ್ಚಿಕೊಡಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ರಾಮ್​ನಾರಾಯನ್​ ಕೊಟ್ಟ ದೂರಿನ ಮೇರೆಗೆ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈತ ಡೇಟಿಂಗ್ ಕಿಂಗ್: ಇದುವರೆಗೆ 335 ಮಹಿಳೆಯರ ಜತೆ ಡೇಟ್ ಮಾಡಿರುವ ಇವನ ಟಾರ್ಗೆಟ್ ಎಷ್ಟು ಗೊತ್ತೇ?

ಗಂಗಾನದಿಯಲ್ಲೊಂದು ಭಾರಿ ಶಾಕ್​; 30ಕ್ಕೂ ಅಧಿಕ ಮಂದಿಗೆ ಗಾಯ, ಸುಮಾರು 20 ಜನ ನಾಪತ್ತೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 − 3 =
Remember me
