ಬೆಂಗಳೂರು:ಬಿಜೆಪಿ ವಿಪಕ್ಷ ನಾಯಕ ಯಾರಾಗುತ್ತಾರೆ ಎಂಬ ವಿಚಾರ ಕಳೆದ ಕೆಲವು ದಿನಗಳಿಂದ ಭಾರಿ ಕುತೂಹಲ ಕೆರಳಿಸಿದ್ದು, ಆ ಕುತೂಹಲಕ್ಕೆ ಇನ್ನೇನು ತೆರೆ ಬೀಳುವ ಸಮಯ ಬಂದಾಗಿದೆ. ವಿಪಕ್ಷ ನಾಯಕರ ಘೋಷಣೆ ಯಾವಾಗ ಆಗಲಿದೆ ಎಂಬ ಕುರಿತು ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
ವಿಪಕ್ಷ ನಾಯಕ ಆಯ್ಕೆ ಸಂಬಂಧ ವೀಕ್ಷಕರಾಗಿ ಕೇಂದ್ರದ ನಾಯಕರು ಆಗಮಿಸಿ ಹಿರಿಯ ನಾಯಕರ ಅಭಿಪ್ರಾಯ ತೆಗೆದುಕೊಂಡಿದ್ದಾರೆ. ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಎರಡೂ ವಿಚಾರವಾಗಿ ಅಭಿಪ್ರಾಯ ಪಡೆದಿದ್ದು, ನಾವು ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಇಂದು ರಾತ್ರಿ 12 ಗಂಟೆ ಒಳಗಡೆ ವಿಪಕ್ಷ ನಾಯಕರ ಆಯ್ಕೆ ಮಾಡುವ ವಿಶ್ವಾಸ ಇದೆ ಎಂದು ಮಾಜಿ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಇದನ್ನೂ ಓದಿ:40% ಕಮಿಷನ್ ಹಗರಣ ಆರೋಪ ಪ್ರಕರಣ; ನ್ಯಾಯಾಂಗ ತನಿಖೆಗೆ ವಹಿಸಿದ ಸರ್ಕಾರ
ಇದಕ್ಕೂ ಮುನ್ನ ವಿಪಕ್ಷ ನಾಯಕರ ಆಯ್ಕೆ ಸಂಬಂಧ ವೀಕ್ಷಕರಿಂದ ಒನ್ ಟು ಒನ್ ಅಭಿಪ್ರಾಯ ಸಂಗ್ರಹ ಆರಂಭಗೊಂಡಿದೆ. ಕೇಂದ್ರ ಸಚಿವ ಮನ್​ಸುಖ್​ ಮಾಂಡವೀಯ ಹಾಗೂ ವಿನೋದ್ ತಾವ್ಡೆ ವೀಕ್ಷಕರಾಗಿ ಆಗಮಿಸಿದ್ದು, ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆ ಬಳಿಕ ಅವರು ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರ ಭೇಟಿಗೆ ತೆರಳಿದ್ದು, ವಿನೋದ್ ತಾವ್ಡೆ ಸುದ್ದಿಗಾರರಿಗೆ ‘ಅಭಿಪ್ರಾಯ ಸಂಗ್ರಹ ಮುಕ್ತಾಯ ಆಗಿದೆ’ ಎಂದಷ್ಟೇ ಹೇಳಿ ಹೊರಟರು.
ಪಕ್ಷದ ಕಚೇರಿಯಲ್ಲಿ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಮೃತಪಟ್ಟ ಬಿಜೆಪಿ ಮುಖಂಡ!

ಪರಸ್ತ್ರೀ ಜತೆ ಅಪ್ಪನ ದೈಹಿಕ ಸಂಪರ್ಕದ ವಿಡಿಯೋ ವೈರಲ್; ಮನನೊಂದ ಮಗ ಪ್ರಾಣ ಕಳ್ಕೊಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
