ಧಾರವಾಡ:ಕೋವಿಡ್-19 ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಶಾಲಾ-ಕಾಲೇಜುಗಳು ಹಂತಹಂತವಾಗಿ ಆರಂಭವಾಗಿದ್ದರೂ 1ರಿಂದ 5ನೇ ತರಗತಿ ಇನ್ನೂ ಆರಂಭವಾಗಿಲ್ಲ. ಹೀಗಾಗಿ 1ರಿಂದ 5ನೇ ತರಗತಿ ಯಾವಾಗ ಪುನಃ ಶುರುವಾಗಲಿದೆ ಎಂಬ ಕುತೂಹಲ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಲ್ಲಿದೆ. ಅದಕ್ಕೀಗ ಉತ್ತರವನ್ನು ಶಿಕ್ಷಣ ಸಚಿವರೇ ನೀಡಿದ್ದಾರೆ.
ಧಾರವಾಡದಲ್ಲಿ ಶೈಕ್ಷಣಿಕ ವಿಚಾರವಾಗಿ ಮಾತನಾಡಿರುವ ಶಿಕ್ಷಣ ಸಚಿವ ಎಸ್​. ಸುರೇಶ್​ಕುಮಾರ್, ಶೈಕ್ಷಣಿಕ ವರ್ಷಾರಂಭ, ಬಾಕಿ ಇರುವ ತರಗತಿಗಳ ಮರು ಆರಂಭಗಳ ಕುರಿತೂ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜುಲೈ 5ರಂದು ಎಸ್​ಎಸ್​ಎಲ್​ಸಿ ಪರೀಕ್ಷೆ ಮುಗಿಯಲಿದ್ದು, ಜುಲೈ 15ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಆರಂಭಿಸಲಿದ್ದೇವೆ ಎಂಬುದಾಗಿ ಹೇಳಿದ್ದಾರೆ.
ಇನ್ನು 1ರಿಂದ 5ನೇ ತರಗತಿ ಆರಂಭ ವಿಚಾರವಾಗಿಯೂ ಅವರು ಪ್ರತಿಕ್ರಿಯಿಸಿದ್ದಾರೆ. ಸಾಕಷ್ಟು ಜನ ತರಗತಿ ಆರಂಭಿಸಿ ಎಂದು ಕೇಳುತ್ತಿದ್ದಾರೆ, ನಾವು ಕೂಡ ಶಾಲಾರಂಭದ ಬಗ್ಗೆ ತಯಾರಿ ನಡೆಸಿದ್ದೇವೆ. ಎಲ್ಲವೂ ಸರಿಯಾಗಿ ಇದ್ದಿದ್ದರೆ ಇವತ್ತಿನಿಂದಲೇ 1ರಿಂದ 5ನೇ ತರಗತಿಗಳನ್ನು ಮರು ಆರಂಭಿಸಬಹುದಿತ್ತು. ಆದರೆ ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಈ ಪ್ರಮಾಣ ಹೆಚ್ಚಾಗಿದೆ. ಕರ್ನಾಟಕದಲ್ಲೂ ನಿತ್ಯ 300 ಇರುತ್ತಿದ್ದ ಸೋಂಕಿನ ಪ್ರಕರಣಗಳು 500ಕ್ಕೆ ತಲುಪಿವೆ. ಹೀಗಾಗಿ 1ರಿಂದ 5ನೇ ತರಗತಿ ಮರು ಆರಂಭ ಬಗ್ಗೆ ಇನ್ನೊಂದು ವಾರ ಕಾದು, ಆಮೇಲೆ ನಿರ್ಧರಿಸುವುದಾಗಿ ಸುರೇಶ್​ಕುಮಾರ್ ತಿಳಿಸಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಚಿಕ್ಕವಯಸ್ಸಲ್ಲೇ ಬಹಳ ಎತ್ತರಕ್ಕೇರಿದ್ದಾಳೆ ಈ ಬಾಲಕಿ!; ಏಷ್ಯಾದಲ್ಲಷ್ಟೇ ಅಲ್ಲ ಜಾಗತಿಕವಾಗಿಯೂ ಈಕೆ ಈಗ ಸಾಧಕಿ…

ಗಂಡ ಮನೆಯಲ್ಲಿ ಇಲ್ಲವೆಂದು ಪ್ರಿಯತಮನನ್ನು ಕರೆಸಿಕೊಂಡ ಹೆಂಡತಿ! ಅಮೇಲಾಗಿದ್ದು ಏನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
