ಬೆಂಗಳೂರು:ಕೇಂದ್ರ ಸರ್ಕಾರ ರೂಪಿಸಿರುವ ಬಾಡಿಗೆದಾರರ ಅಧಿನಿಯಮ ರಾಜ್ಯದಲ್ಲಿ ಯಾವತ್ತು ಜಾರಿಗೆ ಬರಲಿದೆ ಎಂಬ ಕುರಿತು ಇದ್ದ ಕುತೂಹಲಕ್ಕೆ ಇದೀಗ ಉತ್ತರ ಎಂಬಂತೆ ಕಂದಾಯ ಸಚಿವ ಆರ್. ಅಶೋಕ್ ಒಂದಷ್ಟು ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಅವರು ಈ ವಿಷಯ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಲಕ್ಷ ಫ್ಲ್ಯಾಟ್​ಗಳಿದ್ದು, ಬಾಡಿಗೆದಾರರು ಮತ್ತು ಮಾಲೀಕರ ನಡುವೆ ಜಗಳವಿತ್ತು. ಅವರ ನಡುವಿನ ಗೊಂದಲ ಹಾಗೇ ಉಳಿಯುತ್ತಿತ್ತು. ಮಾತ್ರವಲ್ಲ, ಕೋರ್ಟ್​-ಕಚೇರಿ ಅಲೆಯಬೇಕಾಗುತ್ತಿತ್ತು ಎಂದ ಅಶೋಕ್, ಬಾಡಿಗೆದಾರರ ಅಧಿನಿಯಮಕ್ಕೆ ಪರಿವರ್ತನೆ ತಂದಿಲ್ಲ, ಮನೆ ಮಾಲೀಕರ ಹಿತರಕ್ಷಣೆಗೆ ಮುಂದಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!
ಕೇಂದ್ರ ಸರ್ಕಾರ ಜೂನ್​ 2ರಂದು ಈ ಕಾನೂನನ್ನು ತಂದಿದೆ. ಅದನ್ನೇ ನಾವು ಜಾರಿಗೆ ತರುತ್ತಿದ್ದೇವೆ. ಇದರಿಂದ ಬಾಡಿಗೆದಾರರು ಹಾಗೂ ಮನೆಮಾಲೀಕರು ಇಬ್ಬರಿಗೂ ಅನುಕೂಲವಾಗಲಿದೆ. ಆದರೆ ಈ ಕಾನೂನನ್ನು ಇನ್ನೂ ಜಾರಿಗೊಳಿಸಿಲ್ಲ ಎಂಬುದನ್ನು ಸ್ಪಷ್ಟಗೊಳಿಸಿರುವ ಅವರು, ಅದನ್ನು ಸರ್ಕಾರದ ಆ್ಯಪ್​ನಲ್ಲಿ ಅಪ್​ಲೋಡ್ ಮಾಡಬೇಕಿದೆ. ಆ ಬಗ್ಗೆ ಚಿಂತನೆ ನಡೆಸಿದ್ದು, ಸಲಹೆ-ಸೂಚನೆಗಳನ್ನು ಕೊಟ್ಟ ನಂತರ ಜಾರಿಗೆ ತರಲಿದ್ದೇವೆ ಎಂಬುದಾಗಿ ಹೇಳಿದ್ದಾರೆ.
ಗಂಡ ಮಲಗಿದ್ದಾಗಲೇ ಮನೆಯೊಳಗೆ ನಡೆಯಿತು ದುರಂತ; ಬಾಗಿಲು ಒಡೆದು ಕೋಣೆಗೆ ಹೊಕ್ಕವನಿಗೆ ತೀವ್ರ ಆಘಾತ!

ಬೆರಳೆರಡನ್ನು ಕತ್ತರಿಸಿಕೊಂಡ, ಬಾಯಿಗೆರಡು ಕೋರೆ ಸಿಕ್ಕಿಸಿಕೊಂಡ!; ಮೈಮೇಲಿದೆಂಥ ಆಟ ಈ ಮೈಖೇಲ್​ನದ್ದು!?

ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
