ಬೆಂಗಳೂರು:ಸ್ಟಾರ್​ ನಟರ ಜತೆ ಸ್ಕ್ರೀನ್​ ಶೇರ್​ ಮಾಡಿದ್ದ ನಟಿ ಶ್ರೀದೇವಿ ವಿಜಯಕುಮಾರ್​. ಕನ್ನಡ, ತೆಲಗು,ತಮಿಳು ಸಿನಿಮಾದ ಖ್ಯಾತ ನಟರ ಜತೆ ನಟಿಸಿದ್ದಾರೆ. ಈ ನಟಿ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಶ್ರೀದೇವಿ 29 ಅಕ್ಟೋಬರ್ 1986 ರಂದು ತಮಿಳು ನಟ ವಿಜಯಕುಮಾರ್ ಮತ್ತು ದಕ್ಷಿಣ ಭಾರತದ ಜನಪ್ರಿಯ ನಟಿ ಮಂಜುಳಾ ಅವರ ಕಿರಿಯ ಮಗಳಾಗಿ ಜನಿಸಿದರು. ಶ್ರೀದೇವಿಗೆ ಇಬ್ಬರು ಹಿರಿಯ ಸಹೋದರಿಯರು, ವನಿತಾ ಮತ್ತು ಪ್ರೀತಾ. ಶ್ರೀದೇವಿ   ತಮಿಳು ಚಲನಚಿತ್ರ ರಿಕ್ಷಾ ಮಾಮಾದಲ್ಲಿ ಬಾಲ ಕಲಾವಿದೆಯಾಗಿ ಪ್ರಾರಂಭಿಸಿದರು . ಶ್ರೀದೇವಿ ಅವರು ಕತೀರ್ ಅವರ ರೊಮ್ಯಾಂಟಿಕ್ ಚಿತ್ರ ಕಾದಲ್ ವೈರಸ್ ನಲ್ಲಿ ನಾಯಕಿಯಾಗಿ ತಮಿಳು ಚೊಚ್ಚಲ ಪ್ರವೇಶ ಮಾಡಿದರು . ಅವರು ತೆಲುಗು ಇಂಡಸ್ಟ್ರಿಗೆ ಸ್ಥಳಾಂತರಗೊಂಡರು ಮತ್ತು ಜನಪ್ರಿಯರಾದರು. ವಿಕ್ರಮನ್ ಅವರ AVM ನ ಪ್ರಿಯಮನ ತೋಜಿಯಲ್ಲಿನ ಅಭಿನಯಕ್ಕಾಗಿ ಅವರು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದರು. ನಂತರ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶಿವರಾಜ್ ಕುಮಾರ್ ಜೊತೆಗೆ ಕಾಂಚನ ಗಂಗಾ ಸಿನಿಮಾ ಮತ್ತು ಶ್ರೀಮುರಳಿ ಜತೆ ಪ್ರೀತಿಗಾಗಿ ಸಿನಿಮಾದಲ್ಲಿ ಡುಯೆಟ್ ಹಾಡಿದ ಸುಂದರಿ ಶ್ರೀದೇವಿ ನೆನಪಿದ್ಯಾ ನಿಮಗೆ? ಕನ್ನಡದಲ್ಲಿ ನಟಿಸಿದ್ದು ಎರಡೇ ಚಿತ್ರವಾದರೂ, ತಮ್ಮ ಸೌಂದರ್ಯ ಮತ್ತು ಮುಗ್ಧ ಅಭಿನಯದಿಂದಾಗಿ ಅವರು ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಶ್ರೀದೇವಿ ನಟಿಸಿರುವ ಕಾಂಚನಗಂಗಾ ಚಿತ್ರದ ಸೂರ್ಯನ ಕಿರಣ ಹಾಡು, ಇಂದಿಗೂ ಸಹ ಹೆಚ್ಚಿನ ಜನರ ಫೇವರಿಟ್ ಹಾಡುಗಳಲ್ಲಿ ಒಂದಾಗಿದೆ. ಇದು ಮಾತ್ರವಲ್ಲ, ಶ್ರೀಮುರಳಿಜೊತೆ ಪ್ರೀತಿಗಾಗಿ ಚಿತ್ರದಲ್ಲಿ ಸಹ ಇವರು ನಟಿಸಿದ್ದು, ಚಿತ್ರಗಳು ಅಷ್ಟೊಂದು ಹಿಟ್ ಆಗದಿದ್ದರೂ ಈ ನಟಿ ಅಂದು ಕನ್ನಡಿಗರಿಗೆ ಇಷ್ಟವಾಗಿದ್ದರು. 2016 ರಲ್ಲಿ ಲಕ್ಷ್ಮಣ ಎನ್ನುವ ಕನ್ನಡ ಸಿನಿಮಾದಲ್ಲಿ ನಟಿಸಿದ ಶ್ರೀದೇವಿ ನಂತರ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಸದ್ಯ ಮದುವೆಯಾಗಿ ಫ್ಯಾಮಿಲಿ ಜೊತೆ ಬ್ಯುಸಿಯಾಗಿದ್ದಾರೆ. ರಾಹುಲ್ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಗೆ ಒಬ್ಬ ಮಗಳು ಕೂಡ ಇದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಶ್ರೀದೇವಿ, ಹೆಚ್ಚಾಗಿ ಫೋಟೋ ಶೂಟ್ ಮಾಡಿಸುತ್ತಾ ಫೋಟೋ ಶೇರ್ ಮಾಡುತ್ತಿರುತ್ತಾರೆ. ಇಂದಿಗೂ ಅದೇ ಚಾರ್ಮಿಂಗ್ ಸೌಂದರ್ಯ ಹೊಂದಿರುವ ನಟಿಯನ್ನ ನೋಡಿದ್ರೆ ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದೇ ಇದ್ದರೂ ಇವರು ತೆಲುಗು ಕಿರುತೆರೆಯಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ಶ್ರೀದೇವಿ ತೆಲುಗಿನ ಕಾಮಿಡಿ ಸ್ಟಾರ್ಸ್, ಡ್ರಾಮಾ ಜ್ಯೂನಿಯರ್ಸ್ ಸೇರಿ ಹಲವು ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.
Prabhas 1st Heroine#SrideviVijayKumar❤️‍🔥Eeshwar release ayyi 22 years ayna still they both look good together 😍#PrabhasAnna future movies lo edho okka chinna role lo ayna kanapadithe bagundu ❤️#Kalki2898AD#Spirit#TheRajaSaabpic.twitter.com/o3Hhm7Ne8l
— Ayyo (@AyyAyy0)March 29, 2024

ಈ ನಡುವೆ ಶ್ರೀದೇವಿ ಈಗಲೂ ಅದೇ ಸೌಂದರ್ಯದಿಂದ ಮನಸೆಳೆಯುತ್ತಿದ್ದಾರೆ. ಶ್ರೀದೇವಿ ತೆಲುಗಿನಲ್ಲಿ ನೃತ್ಯ ಕಾರ್ಯಕ್ರಮವೊಂದಕ್ಕೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟಿ ಶ್ರೀದೇವಿ ಟಾಲಿವುಡ್​​ ನಟ ಪ್ರಭಾಸ್ ಜತೆ ಮಾಸ್ ಮಸಾಲಾ ಸಿನಿಮಾದಲ್ಲಿ ನಟಿಸಿದ್ದರು. ಈ ಜೋಡಿ ವೀಕ್ಷಕರಿಗೆ ಇಷ್ಟವಾಗಿತ್ತು.  ಈ ನಡುವೆ ಶ್ರೀದೇವಿಗೆ ಸಂಬಂಧಿಸಿದ ಮುದ್ದಾದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಭಾಸ್ ವಿಡಿಯೋವನ್ನು ಒಟ್ಟಿಗೆ ಎಡಿಟ್ ಮಾಡಲಾಗಿದೆ. ಈ ವಿಡಿಯೋಗೆ ನೆಟಿಜನ್‌ಗಳು ನಾನಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
“ಚಿಕ್ಕೆಜಮಾನ್ರು” ಸಿನಿಮಾ ನಟಿ ಮಗಳು ತಾಯಿಯನ್ನೂ ಮೀರಿಸುವ ಚೆಲುವೆ; ಕಮಲ್ ಹಾಸನ್ ಮಾಜಿ ಪ್ರೇಯಸಿ ಗೌತಮಿ

ರೀಲ್‌ ಜೋಡಿ ರಿಯಲ್‌ ಮದುವೆ; “96” ಚಿತ್ರದ ನಟ,ನಟಿ ರಿಯಲ್‌ ಲೈಫ್​ನಲ್ಲೂ ಗಂಡ-ಹೆಂಡ್ತಿ

ಗೋಮೂತ್ರ ಸ್ನಾನ, ಸಗಣಿ ಸನ್‌ಸ್ಕ್ರೀನ್; ಮೆಷಿನ್ ಗನ್ ಹಿಡಿದು ಜಾನುವಾರುಗಳಿಗೆ ಕಾವಲು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + nine =
Remember me
