ಬೆಂಗಳೂರು:ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಸೆ. 26 ರಂದು ರಾಜ್ಯಾವ್ಯಾಪಿ ಬಂದ್​ಗೆ ಕರೆ ನೀಡಲಾಗಿದ್ದು, ಕನ್ನಡ ಸಂಘಟನೆಗಳು ಒಗ್ಗೂಡಿ ಬಂದ್​ ನಡೆಸಲು ಮುಂದಾಗಿದೆ. ಈ ಪೈಕಿ ಯಾವೆಲ್ಲಾ ಸಂಘಟನೆಗಳು ಅಭೂತಪೂರ್ವ ಬೆಂಬಲ ನೀಡಿದೆ ಎಂಬ ಮಾಹಿತಿ ಹೀಗಿದೆ.
ಇದನ್ನೂ ಓದಿ:ಬಿಜೆಪಿ-ಜೆಡಿಎಸ್ ಮೈತ್ರಿ ಬೆನ್ನಲ್ಲೇ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಿಖಿಲ್
ಮಂಗಳವಾರಕ್ಕೆ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿದ್ದು, ಖಾಸಗಿ ಶಾಲಾ ಸಂಘಟನೆಗಳಿಂದ ಬೆಂಗಳೂರು ಬಂದ್‌ಗೆ ಬೆಂಬಲ ದೊರೆತಿದೆ. “ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ, ಬಂದ್​ಗೆ ನಮ್ಮ ಸಂಪೂರ್ಣ ಪ್ರೋತ್ಸಾಹವಿದೆ” ಎಂದು ಶಾಲಾ ಪೋಷಕರ ಸಂಘಟನೆ ತಿಳಿಸಿದೆ.
ಐಟಿ ಸಂಸ್ಥೆಗಳು ಬೆಂಬಲ ನೀಡಲು ಮುಂದಾಗಿದ್ದು, ಅನ್ಯ ಭಾಷೆಯವರು ಕೂಡ ಬಂದ್​ ದಿನ ಹಾಜರಾಗಲಿದ್ದಾರೆ. ಬೆಂಗಳೂರಿನ 400ಕ್ಕೂ ಹೆಚ್ಚು ಐಟಿ ಕಂಪನಿಯ ಸಂಘಟನೆ ಜತೆ ಬೆಂಬಲಿಸಲು ಮಾತುಕತೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಇದು ಮಹಿಳೆಯರಿಗೆ ಬಿಜೆಪಿ ಮಾಡಿರುವ ಪರಮ ವಂಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಸೆ.26ರ ಬಂದ್​ಗೆ ಆಟೋ, ಓಲಾ-ಊಬರ್, ಕೈಸ್ತಾ ಸಂಘಟನೆಗಳು ಹಾಗೂ ಖಾಸಗಿ ವಾಹನ ಚಾಲಕರ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಲು ಸಜ್ಜಾಗಿದೆ. ಇನ್ನೂ ಈ ಬಗ್ಗೆ ಮಾತನಾಡಿದ ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಸ್ವಾಮಿ, “26ರ ಬೆಂಗಳೂರು ಬಂದ್​ಗೆ ನಮ್ಮ ಬೆಂಬಲವಿದೆ. ಎಲ್ಲಾ ವಾಹನ‌ಗಳನ್ನು ನಿಲ್ಲಿಸಲು ನಾವು ಮನವಿ ಮಾಡಿದ್ದೇವೆ” ಎಂದು ಹೇಳಿದರು.
“ನಾಡು,ನುಡಿ ವಿಚಾರ ಬಂದಾಗ ನಾವು ಮುಂಚೂಣಿಯಲ್ಲಿದ್ದೇವೆ. ಬಂದ್​ ದಿನ ಆಟೋರಿಕ್ಷಾ, ಕ್ಯಾಬ್ ಯಾವುದು ರಸ್ತೆಗಿಳಿಯುವುದಿಲ್ಲ” ಎಂದು ಹೇಳಿದ್ದಾರೆ.
‘ಸ್ಕಂದ’ ರಿಲೀಸ್​ಗೆ ದಿನಗಣನೆ ಆರಂಭ; ಇವರೇ ನನ್ನ ನೆಚ್ಚಿನ ಬಾಲಿವುಡ್​ ನಟ ಎಂದ ರಾಮ್​ ಪೋತಿನೇನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
