ಮೈಸೂರು: ನಾನು ಹೀರೋ ಆಗದಿದ್ದರೂ ಪರವಾಗಿಲ್ಲ, ವಿಲನ್ ಆಗಲು ರೆಡಿ ಇಲ್ಲ ಎಂದು ಶಾಸಕ ಹರ್ಷವರ್ಧನ್​ ಹೇಳಿಕೆ ನೀಡಿ ಜ್ಯುಬಿಲಿಯೆಂಟ್ ವಿವಾದದಲ್ಲಿ ಯೂಟರ್ನ್ ತೆಗೆದುಕೊಂಡಿದ್ದಾರೆ.
ಅಮೆರಿಕಾ ಮೂಲದ ಕಂಪನಿಯೊಂದಿಗೆ ಜ್ಯುಬಿಲಿಯೆಂಟ್ ಕರೊನಾ ವೈರಸ್​ಗೆ ಲಸಿಕೆ ಕಂಡು ಹಿಡಿಯುವ ಒಪ್ಪಂದ ಮಾಡಿಕೊಂಡಿದೆ. ಅಲ್ಲದೆ ಕೆಲವು ಔಷಧಿಗಳನ್ನು ಕಂಪನಿ ತಯಾರಿಸುತ್ತಿದ್ದೂ ಅವುಗಳ ಉತ್ಪಾದನೆಯಾಗಬೇಕಿದೆ. ಈ ಕಾರಣಕ್ಕಾಗಿ ನಾನು ಯೂಟರ್ನ್ ತೆಗೆದುಕೊಳ್ಳಲೇಬೇಕಿದೆ ಎಂದು ಶಾಸಕ ಹರ್ಷವರ್ಧನ್​ ಹೇಳಿದರು.
ಕಾರ್ಖಾನೆ ಆರಂಭಿಸುವ ಬಗ್ಗೆ ಸಿಎಂ ಯಡಿಯೂರಪ್ಪ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಮಾತುಕತೆ ಆಗಿದೆ. ಅವರ ಸೂಚನೆಯಂತೆ ನಾನು ಸುಮ್ಮನಾಗಿದ್ದೇನೆ. ಕಾರ್ಖಾನೆ ಆರಂಭಿಸಲು 3 ಷರತ್ತು ವಿಧಿಸಲಾಗಿದೆ. 10 ಗ್ರಾಮಗಳನ್ನು ದತ್ತುಪಡೆಯಬೇಕು. 50 ಸಾವಿರ ಆಹಾರ ಕಿಟ್​ಗಳನ್ನು ವಿತರಿಸಬೇಕು ಹಾಗೂ ಮುಂದೆ ಅನಾಹುತ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕಾರ್ಖಾನೆ ಆಡಳಿತ ಮಂಡಳಿಗೆ ತಿಳಿಸಲಾಗಿದೆ. ಇದಕ್ಕೆ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ ಎಂದರು.
ಇದನ್ನೂ ಓದಿVIDEO| ಹೈದ್ರಾಬಾದ್​ನ ರಾಜೇಂದ್ರ ನಗರದ ಜನ ನಿಬಿಡ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ
ಸಂಬಂಧ ಇಲ್ಲದವರು ಮಾತನಾಡಿದ್ದರು: ಕಾರ್ಖಾನೆ ಬಗ್ಗೆ ಸಂಬಂಧ ಇಲ್ಲದವರು ಮಾತನಾಡಿದ್ದರು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ 400 ಕಾರ್ಮಿಕರಿಗೆ ಎರಡು ತಿಂಗಳಿಂದ ಸಂಬಳ ಕೊಟ್ಟಿಲ್ಲ. ಕಾರ್ಖಾನೆ ಪರವಾಗಿ ಮಾತನಾಡುತ್ತಿದ್ದ ದೊಡ್ಡವರೆಲ್ಲ ಈಗ ಎಲ್ಲಿಗೆ ಹೋದರು ಎಂದು ಪ್ರಶ್ನಿಸಿದರು.
ಔಷಧಿ ಕಾರ್ಖಾನೆ ಸಿಬ್ಬಂದಿಗೆ ವೈರಸ್​ ಹೇಗೆ ಹರಡಿತು ಎಂಬುದರ ಬಗ್ಗೆ ತನಿಖೆ ನಡೆಸಿದ ಸರ್ಕಾರ ಸರಿಯಾದ ತನಿಖಾ ವರದಿ ನೀಡಿಲ್ಲ. ಇದರಿಂದ ನಿರಾಸೆ ಆಗಿದೆ. ಹರ್ಷಗುಪ್ತ ಅವರಂತ ದಕ್ಷ ಅಧಿಕಾರಿಯೇ ಅಪೂರ್ಣ ವರದಿ ನೀಡಿದರು. ಸರ್ಕಾರದ ಕಡೆಯಿಂದಲೂ ತನಿಖೆ ವಿಳಂಬವಾಗಿದೆ. ನನ್ನ ನಿಲುವಿಗೆ ಈಗಲೂ ನಾನು ಬದ್ಧ. ಕಾರ್ಖಾನೆ ಆರಂಭ ಮಾಡಲು ಒಪ್ಪುವುದರ ಜತೆಗೆ ನಂಜನಗೂಡು ಜನರ ಹಿತ ಕಾಯುವ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು. (ದಿಗ್ವಿಜಯ ನ್ಯೂಸ್​)
ಸೌದೆ ತರಲು ಹೋಗಿದ್ದ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ವಿಡಿಯೋ ವೈರಲ್​ ಮಾಡಿದ ಕಾಮುಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − one =
Remember me
