ಶಿವಮೊಗ್ಗ:ಆನ್​​ಲೈನ್​ ಮೂಲಕ ಗೋಣಿ ಚೀಲ‌ ಖರೀದಿಸಲು ಹೋಗಿ ಶಿಕ್ಷಕಿಯೊಬ್ಬರು ಬರೋಬ್ಬರಿ 1.13 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಶಿಕಾರಿಪುರದ ಶಿಕ್ಷಕಿಯೊಬ್ಬರು ಹೀಗೆ ಮೋಸ ಹೋಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಖಾಲಿ ಗೋಣಿಚೀಲ ಖರೀದಿಗಾಗಿ ಗೂಗಲ್​ನಲ್ಲಿ ಹುಡುಕಾಟ ‌ನಡೆಸಿದ ಈ ಶಿಕ್ಷಕಿಗೆ ಆನ್​ಲೈನ್​ ಟ್ರೇಡಿಂಗ್ ವೆಬ್​ಸೈಟ್​ ಸಿಕ್ಕಿದೆ. ಇವರು ಅದಕ್ಕೆ ಇ-ಮೇಲ್ ಕೂಡ ಮಾಡಿದ್ದರು. ಏಪ್ರಿಲ್​ 11ರಂದು ಆ ಇ-ಮೇಲ್​ಗೆ ಪ್ರತಿಕ್ರಿಯೆ ಬಂದಿತ್ತು. ಇ ಮೇಲ್ ಸಂದೇಶದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂದು ವ್ಯಕ್ತಿಯೊಬ್ಬ ಪರಿಚಯ ಮಾಡಿಕೊಂಡಿದ್ದ. ಆತ ವಾಟ್ಸ್​ಆ್ಯಪ್​ ನಂಬರ್ ಪಡೆದಿದ್ದು, ಬಳಿಕ ಇಬ್ಬರೂ ವಾಟ್ಸ್​ಆ್ಯಪ್​ ಮೂಲಕ ವ್ಯವಹಾರದ ಬಗ್ಗೆ ಚರ್ಚಿಸಿದ್ದರು.
26 ಟನ್ ಖಾಲಿ ಚೀಲ ಬೇಕಿದೆ ಎಂದು ಶಿಕ್ಷಕಿ ಹೇಳಿದ್ದಕ್ಕೆ ಆತ, ಖಾಲಿ ಚೀಲಗಳ ಖರೀದಿಗೆ ಅರ್ಧದಷ್ಟು ಹಣವನ್ನು ಮುಂಗಡವಾಗಿ ಕಳುಹಿಸುವಂತೆ ಸೂಚಿಸಿದ್ದ. ಅದರಂತೆ ದೆಹಲಿಯ ಬ್ಯಾಂಕ್ ಖಾತೆಯೊಂದಕ್ಕೆ 1,13,720 ರೂಪಾಯಿ ಆನ್​ಲೈನ್ ಮೂಲಕ ಶಿಕ್ಷಕಿ ಜಮೆ ಮಾಡಿದ್ದರು. ಆನಂತರ ಆತ ವಾಹನದ ಸಾಗಾಣಿಕೆ ವೆಚ್ಚವಾಗಿ ಮತ್ತಷ್ಟು ಹಣ ಸಂದಾಯ ಮಾಡುವಂತೆ ಸೂಚಿಸಿದ್ದು ಅನುಮಾನಗೊಂಡ ಶಿಕ್ಷಕಿ ಶಿವಮೊಗ್ಗದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ರಾಜ್ಯದಲ್ಲಿ ಇನ್ನೂ ಎರಡು ವಾರ ನೈಟ್​ ಕರ್ಫ್ಯೂ; ಕರೊನಾ ಆತಂಕ ಹೆಚ್ಚಳ, ಮತ್ತಷ್ಟು ಕಟ್ಟುನಿಟ್ಟು…

ಅಳಿಯನಿಂದಲೇ ಮಾವನ ಅಪಹರಣ!; ರಿಯಲ್​ ಎಸ್ಟೇಟ್​ ಉದ್ಯಮಿ ಕಿಡ್ನ್ಯಾಪ್​ ಸಂಬಂಧ ಐವರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
