ಬೆಂಗಳೂರು:ರಾಜ್ಯದ ನಿಗಮ-ಮಂಡಳಿಗಳ ಆರ್ಥಿಕ ಸ್ಥಿತಿಗತಿ ಕುರಿತು ಸ್ವತಂತ್ರ ಸಂಸ್ಥೆ ಆಡಿಟ್ ಮಾಡಿಸಿ, ಹಣಕಾಸು ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಕಾಂಗ್ರೆಸ್ ಸರ್ಕಾರಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ರಾಜ್ಯದಲ್ಲಿರುವ ಎಟಿಎಂ ಸರ್ಕಾರಕ್ಕೆ ನಿಗಮ-ಮಂಡಳಿಗಳೇ ಎಟಿಎಂ ಆಗಿದೆ ಎಂಬ ತಮ್ಮಹೇಳಿಕೆಯನ್ನು ಮತ್ತೆ ಪ್ರಸ್ತಾಪಿಸಿದ್ದಾರೆ.
ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿಯಲ್ಲಿ 6,700 ಕೋಟಿ ರೂ. ಬಳಕೆ ಕುರಿತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದ್ದನ್ನು ಆರ್.ಅಶೋಕ್ ಉಲ್ಲೇಖಿಸಿದ್ದಾರೆ.
ನಿಗಮ-ಮಂಡಳಿಗಳ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಉಚ್ಛ ನ್ಯಾಯಾಲಯಕ್ಕೂ ಅನುಮಾನ ಮೂಡಿದ್ದು, ಇದೇ ಕಾರಣಕ್ಕೆ ಖರ್ಚಾದ ಹಣಕ್ಕೆ ಲೆಕ್ಕ ಕೊಡಲು ಸರ್ಕಾರಕ್ಕೆ ತಾಕಿತು ಮಾಡಿದೆ ಎಂದಿದ್ದಾರೆ.
ಛಾಯಾ ಮುಖ್ಯಮಂತ್ರಿ ಎಂದೇ ಕರೆಯಲ್ಪಡುವ ವಿಧಾನಸಭೆ ಪ್ರತಿಪಕ್ಷ ನಾಯಕನಿಗೆ ಆರು ತಿಂಗಳು ಕಳೆದರೂ ಸರ್ಕಾರಿ ವಸತಿ ಗೃಹ ಹಂಚಿಕೆ ಮಾಡದಿರುವುದು ಬೆಳಕಿಗೆ ಬಂದಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಕಳೆದ ನವೆಂಬರ್‌ನಿಂದ ಮೂರು ಬಾರಿ ಪತ್ರ ಬರೆದರೂ ಸ್ಪಂದಿಸಿಲ್ಲ.
ಕುಮಾರಕೃಪಾ ಪೂರ್ವ ನಿವಾಸ, ರೇಸ್‌ವ್ಯೆವ್ ಕಾಟೇಜ್ ನಂ.1 ಹಾಗೂ 2. ಈ ಮೂರರಲ್ಲಿ ಯಾವುದಾದರೂ ಒಂದನ್ನು ಹಂಚಿಕೆ ಮಾಡಲು ಕೋರಿದ್ದಾರೆ. ಆದರೆ ಕುಮಾರಕೃಪಾ ಪೂರ್ವ ನಿವಾಸ ಡಿಸಿಎಂ ಡಿ.ಕೆ.ಶಿವಕುಮಾರ್, ರೇಸ್‌ವ್ಯೆವ್ ಕಾಟೇಜ್ 1 ಹಾಗೂ 2 ಸಚಿವರಾದ ಎಂ.ಬಿ.ಪಾಟೀಲ, ಕೆ.ಜೆ.ಜಾರ್ಜ್ ಅವರಿಗೆ ಹಂಚಿಕೆಯಾಗಿವೆ.
ವಿಪಕ್ಷ ನಾಯಕ ಕೇಳಿದ ಮೂರು ಮನೆಗಳು ಖಾಲಿಯಿಲ್ಲದ ಕಾರಣ ಜಯಮಹಲ್ ನಿವಾಸ ಕೊಡಲು ಸಿಎಸ್ ಮುಂದಾಗಿದ್ದರು. ಆದರೆ ಸಾರ್ವಜನಿಕರ ಭೇಟಿಗೆ ಬಹಳ ದೂರವಾಗಲಿದ್ದು, ವಿಧಾನಸೌಧ ಸಮೀಪದ ವಸತಿ ಗೃಹವನ್ನೇ ಹಂಚಿಕೆ ಮಾಡಲು ಆರ್.ಅಶೋಕ್ ಕೋರಿದ್ದಾರೆ.
ಸಚಿವರಿಗೆ ಮನೆ ಖಾಲಿ ಮಾಡುವಂತೆ ಹೇಳಲಾಗದು. ಜಯಮಹಲ್ ಹತ್ತಿರದ ನಿವಾಸವನ್ನು ಆರ್.ಅಶೋಕ್ ನಿರಾಕರಿಸಿದ್ದು, ಮುಖ್ಯ ಕಾರ್ಯದರ್ಶಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ವಿಧಾನಸಭೆ ಪ್ರತಿಪಕ್ಷ ನಾಯಕನ ಆಯ್ಕೆ ಐದಾರು ತಿಂಗಳು ವಿಳಂಬವಾಯಿತು. ಅಷ್ಟರಲ್ಲಾಗಲೇ ಡಿಸಿಎಂ, ಸಚಿವರಿಗೆ ಅಧಿಕೃತ ವಸತಿ ಗೃಹಗಳು ಹಂಚಿರುವುದು ಸಮಸ್ಯೆಯ ಮೂಲ.
ಸಿಎಂ ಸಮಾನ ಹುದ್ದೆಯಲ್ಲಿರುವ ಪ್ರತಿಪಕ್ಷ ನಾಯಕ ಕೋರಿದ ವಸತಿ ಗೃಹವನ್ನು ಹಂಚಿಕೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ಸಾಂವಿಧಾನಿಕ ಹುದ್ದೆ ಜವಾಬ್ದಾರಿಯನ್ನು ಖಾಸಗಿ ನಿವಾಸದಲ್ಲಿ ನಿರ್ವಹಿಸುವುದು ಕಷ್ಟವೆಂಬ ಕಾರಣಕ್ಕೆ ಸರ್ಕಾರಿ ನಿವಾಸ ಹಂಚಿಕೆ ಮಾಡಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
