ಬೆಂಗಳೂರು:ಯಾರು ಹಿತವರು ಈ ಮೂವರೊಳಗೆ? ಎಂಬುದು ಲೋಕೋಕ್ತಿ. ಸಂದರ್ಭಾನುಸಾರ ಈ ಮಾತು ಆಗಾಗ ಕೇಳಿ ಬರುತ್ತಿರುತ್ತದೆ. ಆದರೆ ಇದೀಗ ಖ್ಯಾತ ಚಿತ್ರನಿರ್ದೇಶಕರೊಬ್ಬರು ಈ ಮಾತನ್ನು ಹೇಳಿರುವುದು ಗಮನ ಸೆಳೆದಿದೆ. ಅದರಲ್ಲೂ ಅವರು ರಾಜಕೀಯ ಪಕ್ಷಗಳನ್ನು ಗುರಿಯಾಗಿಸಿ ಈ ಮಾತು ಹೇಳಿದ್ದರಿಂದ ಇದು ಕುತೂಹಲ ಕೆರಳಿಸಿದೆ.
ಅಂದಹಾಗೆ ಈ ಮಾತನ್ನು ಹೇಳಿರುವುದು ರಾಜ್ಯದಲ್ಲಿನ ಮೂರು ಪ್ರಮುಖ ರಾಜಕೀಯ ಪಕ್ಷಗಳಾಗಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್​ ಬಗ್ಗೆ.. ಈ ಮಾತನ್ನು ಹೇಳಿರುವುದು ಬೇರಾರೂ ಅಲ್ಲ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. ಇಂದು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಬರೆದು ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ:ಕಾರಿನ ಚಕ್ರಗಳ ಗಾಳಿ ತೆಗೀತಿದ್ರಂತೆ ಸಚಿನ್; ಮಕ್ಕಳ ದಿನಾಚರಣೆ ಪ್ರಯುಕ್ತ ಬಾಲ್ಯದ ತುಂಟತನ ನೆನಪಿಸಿಕೊಂಡ ತೆಂಡುಲ್ಕರ್
“ಯಾರು ಹಿತವರು ಈ ಮೂವರೊಳಗೆ?ಬಹುಮತವಿದ್ದೂ ಬಾಳಲು ಬರದ ಕಾಂಗ್ರೆಸ್ಸೋ?ಸೋತರೂ ಆತ್ಮಾವಲೋಕನ ಮಾಡಿಕೊಳ್ಳದ ಬಿಜೆಪಿಯೋ?ಅಸ್ತಿತ್ವಕ್ಕಾಗಿ ಆತ್ಮವನ್ನೇ ಮಾರಿಕೊಳ್ಳುತ್ತಿರುವ ಜೆಡಿಎಸ್ಸೋ?ಯಾರು ಹಿತವರು ಈ ಮೂವರೊಳಗೆ?”ಎಂದು ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಹೀಗೆ ವಿಭಿನ್ನವಾದ ಒಂದು ಪೋಸ್ಟ್ ಮೂಲಕ ಅವರು ರಾಜ್ಯದ ಜನತೆ ಚಿಂತನೆ ನಡೆಸುವಂತೆ ಮಾಡಿದ್ದಾರೆ. ಇನ್ನೇನು ಲೋಕಸಭೆ ಚುನಾವಣೆ ಹತ್ತಿರ ಇರುವ ಸಂದರ್ಭದಲ್ಲಿ ಅವರು ಹೀಗಂದಿರುವುದು ವಿಶೇಷ ಎನಿಸಿಕೊಂಡಿದೆ.
ಯಾರು ಹಿತವರು ಈ ಮೂವರೊಳಗೆ?ಬಹುಮತವಿದ್ದೂ ಬಾಳಲು ಬರದ ಕಾಂಗ್ರೆಸ್ಸೊ?ಸೋತರೂ ಆತ್ಮಾವಲೋಕನ ಮಾಡಿಕೊಳ್ಳದ ಬಿಜೆಪಿಯೋ?ಅಸ್ತಿತ್ವಕ್ಕಾಗಿ ಆತ್ಮವನ್ನೇ ಮಾರಿಕೊಳ್ಳುತ್ತಿರುವ ಜೆಡಿಎಸ್ಸೊ?ಯಾರು ಹಿತವರು ಈ ಮೂವರೊಳಗೆ?
ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nineteen − 2 =
Remember me
