|ಗಂಗಾಧರ್ ಬೈರಾಪಟ್ಟಣರಾಮನಗರ
ಬೊಂಬೆನಾಡು ಚನ್ನಪಟ್ಟಣದಲ್ಲಿ ಈಗಾಗಲೆ ಚುನಾವಣೆ ಕಾವು ಏರಿದೆ. ಕಳೆದುಕೊಂಡ ಸ್ಥಾನವನ್ನು ಮರಳಿ ಪಡೆಯುವ ಯತ್ನ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರದಾದರೆ, ಕ್ಷೇತ್ರವನ್ನು ಉಳಿಸಿಕೊಳ್ಳಲೇ ಬೇಕು ಎನ್ನುವ ಹಠ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರದು. ಇದರಿಂದಾಗಿ ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಚನ್ನಪಟ್ಟಣವೂ ಒಂದಾಗಿದ್ದು, ವಿಧಾನಸಭಾ ಚುನಾವಣೆ ರಂಗು ಪಡೆದುಕೊಂಡಿದೆ.
ಕಳೆದ ಚುನಾವಣೆಯಲ್ಲಿ ನೀರಾವರಿ ವಿಚಾರ ಮುನ್ನೆಲೆಗೆ ಬಂದಿತ್ತು. ಆದರೆ, ಈ ಬಾರಿ ನೀರಾವರಿ ವಿಷಯ ಸಂಪೂರ್ಣವಾಗಿ ಮಾಸಿ ಹೋಗಿದೆ. ರಾಜ್ಯ ಸರ್ಕಾರದಿಂದ ಅನುದಾನ ತರುವ ವಿಚಾರದಲ್ಲಿ ಇಬ್ಬರ ನಡುವೆ ದೊಡ್ಡ ಫೈಟ್ ಕೂಡ ನಡೆದಿದೆ. ಎಚ್​ಡಿಕೆ ತಮ್ಮ ಪ್ರಭಾವದ ಮೂಲಕ ಮತ್ತು ಸಿ.ಪಿ.ಯೋಗೇಶ್ವರ್ ತಮ್ಮ ಶಕ್ತಿ ಕಡಿಮೆ ಇಲ್ಲ ಎನ್ನುವಂತೆ ಕ್ಷೇತ್ರಕ್ಕೆ ಅನುದಾನದ ಹೊಳೆ ಹರಿಸುತ್ತಿದ್ದಾರೆ. ಇದು ಇಬ್ಬರ ನಡುವಿನ ಜಂಗೀಕುಸ್ತಿಗೆ ಕಾರಣವಾಗಿದೆ.
ರಾಮನಗರ ಕ್ಷೇತ್ರವನ್ನು ಕುಟುಂಬ ಸದಸ್ಯರಿಗೆ ತ್ಯಾಗ ಮಾಡಿದ್ದ ಎಚ್​ಡಿಕೆ, ಕಳೆದ ಚುನಾವಣೆಯಲ್ಲಿಯೇ ಚನ್ನ ಪಟ್ಟಣಕ್ಕೆ ವಲಸೆ ಬಂದರು. ಇದಕ್ಕೆ ಕ್ಷೇತ್ರದ ಜನತೆಯೂ ಅಭೂತ ಪೂರ್ವ ಬೆಂಬಲ ನೀಡಿ ಅವರನ್ನು ಸ್ವೀಕಾರ ಮಾಡಿದ್ದಾರೆ. ಇದನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಕುಮಾರಸ್ವಾಮಿ ಈ ಬಾರಿ ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ಕ್ಷೇತ್ರಕ್ಕೆ ಅನುದಾನ ತರುವ ಜತೆಗೆ, ಮುನಿಸಿಕೊಂಡು ಪಕ್ಷದಿಂದ ದೂರವೇ ಉಳಿದಿದ್ದ ಮುಖಂಡರ ಮನೆಗಳಿಗೆ ಭೇಟಿ ನೀಡುವ ಮೂಲಕ ಮುಂದೆ ಎದುರಾಗಬಹುದಾದ ಡ್ಯಾಮೇಜ್ ಕಂಟ್ರೋಲ್​ಗೆ ಯತ್ನಿಸಿದ್ದಾರೆ. ಜತೆಗೆ ಮಂಗಳವಾರ ಚನ್ನಪಟ್ಟಣದಲ್ಲಿ ಭಾರಿ ಜನಸ್ತೋಮದೊಂದಿಗೆ ಪಂಚರತ್ನ ರಥಯಾತ್ರೆ ನಡೆಸಿ ಎದುರಾಳಿ ಯೋಗೇಶ್ವರ್​ಗೆ ಪಂಥಾಹ್ವಾನ ನೀಡಿದ್ದಾರೆ.
ಮತ್ತೊಂದೆಡೆ ಸಿ.ಪಿ.ಯೋಗೇಶ್ವರ್ ತಾನೇನು ಕಡಿಮೆ ಇಲ್ಲ ಎನ್ನುವಂತೆ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದಾರೆ. ಪ್ರತಿ ಹಳ್ಳಿಗೂ ಭೇಟಿ ನೀಡುತ್ತಿರುವ ಅವರು, ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಜತೆಗೆ ಸರ್ಕಾರದಿಂದ ವಸತಿ ಸೇರಿ, ಇತರ ಅನುದಾನಗಳನ್ನು ತರುವ ಮೂಲಕ ಸರ್ಕಾರದಲ್ಲಿ ತಾವೊಬ್ಬ ಪ್ರಭಾವಿ ಎನ್ನುವುದನ್ನು ತೋರಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಯೋಗೇಶ್ವರ್ ಓಡಾಟ ಜೆಡಿಎಸ್ ಪಾಲಿಗೆ ಕೊಂಚ ಕಸಿವಿಸಿ ಉಂಟು ಮಾಡಿದ್ದು, ಮತ್ತಷ್ಟು ಪ್ರಮುಖ ಲೀಡರ್​ಗಳನ್ನು ತಮ್ಮೊಟ್ಟಿಗೆ ಕರೆದುಕೊಳ್ಳುವ ಯೋಜನೆಯೊಂದಿಗೆ ಚುನಾವಣೆ ಎದುರಿಸಲು ಸಿದ್ಧರಾಗುತ್ತಿದೆ.
ಕಾಂಗ್ರೆಸ್ ವಶಕ್ಕೆ ಯತ್ನ:ಯೋಗೇಶ್ವರ್ ಪಕ್ಷಾಂತರದ ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಮಂಕಾಗಿದೆ. ಕಳೆದ ಚುನಾವಣೆಯಲ್ಲಿ ಮಾಗಡಿಯ ಎಚ್.ಎಂ. ರೇವಣ್ಣ ಅನಿರೀಕ್ಷಿತವಾಗಿ ಸ್ಪರ್ಧೆ ಮಾಡುವ ಮೂಲಕ ಮತಗಳ ಸಂಖ್ಯೆಯನ್ನು 30 ಸಾವಿರದ ಆಸುಪಾಸಿಗೆ ತಂದು ನಿಲ್ಲಿಸಿದ್ದರು. ಆದರೆ ಈ ಬಾರಿ ಏನಾದರೂ ಮಾಡಿ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲೇಬೇಕೆನ್ನುವುದು ಸಂಸದ ಡಿ.ಕೆ.ಸುರೇಶ್ ಅವರ ಪ್ರಯತ್ನ. ಇದಕ್ಕಾಗಿ ಓರ್ವ ಹುರಿಯಾಳನ್ನು ಸಿದ್ಧಪಡಿಸಿಕೊಂಡಿದ್ದು, ಉದ್ಯಮಿ ಪ್ರಸನ್ನ ಪಿ.ಗೌಡ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜತೆಗೆ ಡಿಕೆಶಿ ಸಹೋದರಿ ಪತಿ ಶರತ್​ಚಂದ್ರ ಸೇರಿ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಪ್ರಸನ್ನಗೌಡ ಅಂತಿಮ ಅಭ್ಯರ್ಥಿ ಆಗುವುದು ಬಹುತೇಕ ಖಚಿತವಾಗಿದೆ.
ಕೈ ಪಡೆವ ಮತಗಳೇ ನಿರ್ಣಾಯಕ:ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಚುನಾವಣಾ ಫಲಿತಾಂಶ ನಿರ್ಧರಿಸುವ ಶಕ್ತಿ ಇದೆ ಎನ್ನುವುದು 2013ರ ಚುನಾವಣೆಯಲ್ಲಿ ಸಾಬೀತಾಗಿದೆ. ಅಹಿಂದ ಮತಗಳ ಮೇಲೆ ಕಾಂಗ್ರೆಸ್ ಪ್ರಭಾವ ಈಗಲೂ ಇರುವುದರಿಂದ ಇವುಗಳನ್ನು ಹೆಚ್ಚಾಗಿ ಸೆಳೆದಂತೆ ಚನ್ನಪಟ್ಟಣ ಕ್ಷೇತ್ರದ ಫಲಿತಾಂಶದ ಚಿತ್ರಣವೂ ಬದಲಾವಣೆ ಆಗುತ್ತದೆ ಎನ್ನುವ ಚರ್ಚೆಗಳು ನಡೆದಿವೆ. ಇದರಿಂದಾಗಿಯೇ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚುರುಕಾದಷ್ಟು ಅಹಿಂದ ಹೊರತುಪಡಿಸಿ ಉಳಿದ ಸಮುದಾಯದ ಮತಗಳನ್ನು ಹೆಚ್ಚು ಸೆಳೆದವರು ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿದೆ.

ಉಂಗುರದಲ್ಲೇ ಸಿಂಹ-ಸಿಂಹಿಣಿ: ಹರಿಪ್ರಿಯಾಗೆ ವಸಿಷ್ಟ ಯಾಕಿಷ್ಟ?

ಎಲ್ಲರೂ ಕರೊನಾ ಲಸಿಕೆ ಮೂರನೇ ಡೋಸ್ ಪಡೆಯಬೇಕು; ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಶೀಘ್ರ ಬಿಡುಗಡೆ: ಸಚಿವ ಸುಧಾಕರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
