ಬೆಂಗಳೂರು:ರಾಜ್ಯ ಸರ್ಕಾರದ ಮುಂದಿನ ಮುಖ್ಯ ಕಾರ್ಯದರ್ಶಿ ಯಾರಾಗಬಹುದು ಎಂಬುದು ಅಧಿಕಾರಶಾಹಿ ವಲಯದಲ್ಲಿ ಕುತೂಲಹದ ಚರ್ಚೆಗೆ ಗ್ರಾಸವಾಗಿದೆ. ಪ್ರಸ್ತುತ ಮುಖ್ಯ ಕಾರ್ಯದರ್ಶಿ ಆಗಿರುವ ವಿಜಯಭಾಸ್ಕರ್ ಅವಧಿ ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದೆ. ಇವರು ಜುಲೈ 2018ರಲ್ಲಿ ರತ್ನಪ್ರಭಾ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ರಾಜ್ಯದಲ್ಲಿ ಈ ಹುದ್ದೆಗೆ ಸೇವಾ ಹಿರಿತನ ಪರಿಗಣಿಸಿ ನೇಮಕ ಮಾಡುವ ಸಂಪ್ರದಾಯ ಪಾಲಿಸಿಕೊಂಡು ಬರಲಾಗಿದೆ. ಹಾಗಾಗಿ ಸೇವಾ ಜೇಷ್ಠತೆಯನ್ನೇ ಮಾನದಂಡವಾಗಿ ಇಟ್ಟುಕೊಂಡರೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿರುವ ಪಿ.ರವಿಕುಮಾರ್ ನೇಮಕ ಸಾಧ್ಯತೆಗಳು ದಟ್ಟವಾಗಿವೆ. ರವಿಕುಮಾರ್ ನೇಮಕಗೊಂಡರೂ, ಒಂದೂವರೆ ವರ್ಷ ಅಧಿಕಾರದಲ್ಲಿದ್ದು ನಿವೃತ್ತರಾಗುತ್ತಾರೆ.
ಹಿರಿಯರು ಇವರು: ಪಿ.ರವಿಕುಮಾರ್ ನಂತರ ಸೇವಾ ಜೇಷ್ಠತೆ ಯಲ್ಲಿ ಪ್ರದೀಪ್ ಸಿಂಗ್ ಕರೊಲಾ, ಮಹೇಂದ್ರ ಜೈನ್, ವಂದಿತಾ ಶರ್ವ, ಐಎಸ್​ಎನ್ ಪ್ರಸಾದ್, ರಜನೀಶ್ ಗೋಯಲ್ ಹೆಸರುಗಳಿವೆ. ಸೇವಾ ಜೇಷ್ಠತೆ ಕಡೆಗಣಿಸಿ ಸಿಎಸ್ ನೇಮಕ ಮಾಡಿದ ಉದಾಹರಣೆಗಳು ಹಲವು ರಾಜ್ಯಗಳಲ್ಲಿವೆ.
6 ತಿಂಗಳು ಅವಧಿ ವಿಸ್ತರಣೆ:ಹಾಲಿ ಇರುವ ಮುಖ್ಯ ಕಾರ್ಯದರ್ಶಿಗಳನ್ನು ನಿವೃತ್ತಿ ನಂತರವೂ ಆರು ತಿಂಗಳ ಕಾಲ ವಿಸ್ತರಿಸುವ ಅಧಿಕಾರ ಸರ್ಕಾರಕ್ಕಿದೆ. ಹಾಗೊಂದು ವೇಳೆ ಅವಧಿ ವಿಸ್ತರಿಸುವ ಪ್ರಶ್ನೆ ಬಂದಲ್ಲಿ ಹುದ್ದೆ ಆಕಾಂಕ್ಷಿಗಳಾಗಿರುವ ಹಿರಿಯ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಬಹುದು.
ದಕ್ಷತೆಗೆ ಮನ್ನಣೆ ಸಿಗಲಿ:ಸರ್ಕಾರದ ಉನ್ನತ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಸರ್ಕಾರ ಸೇವಾ ಹಿರಿತನ, ರಾಜಕೀಯ ಲಾಬಿಗೆ ಮಣಿಯದೆ ದಕ್ಷತೆಯಿಂದ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಮನ್ನಣೆ ನೀಡಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 1 =
Remember me
