ಬೆಂಗಳೂರು:ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ನಿವೃತ್ತಿ ಹಿನ್ನೆಲೆಯಲ್ಲಿ ಶುಕ್ರವಾರ ಹೊಸ ಡಿಜಿ-ಐಜಿಪಿ ನೇಮಕವಾಗಲಿದೆ. ಸೇವಾ ಹಿರಿತನ ಆಧಾರದ ಮೇಲೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಎ.ಎಂ.ಪ್ರಸಾದ್ ಮತ್ತು ಪ್ರವೀಣ್ ಸೂದ್, ಪಿ.ಕೆ.ಗರ್ಗ್ ಹೆಸರು ಪಟ್ಟಿಯಲ್ಲಿವೆ.
ಈ ಮೂವರ ಪೈಕಿ ದಂಡನಾಯಕನ ಪಟ್ಟ ರಾಜ್ಯ ಆತಂರಿಕ ಭದ್ರತಾ ವಿಭಾಗ ಡಿಜಿಪಿ ಆಗಿರುವ ಬಿಹಾರ ಮೂಲದ 1985ನೇ ಬ್ಯಾಚ್​ನ ಎ.ಎಂ.ಪ್ರಸಾದ್​ಗೆ
ಸೇವಾ ಹಿರಿತನದ ಮೇಲೆ ಸಿಗುವ ಸಾಧ್ಯತೆಗಳು ಹೆಚ್ಚಾಗಿದೆ. ಸಿಐಡಿ ಡಿಜಿಪಿಯಾಗಿರುವ ಹಿಮಾಚಲಪ್ರದೇಶ ಮೂಲದ 1986ನೇ ಬ್ಯಾಚ್​ನ ಪ್ರವೀಣ್ ಸೂದ್ ಪ್ರಬಲ ಪೈಪೋಟಿಯಲ್ಲಿದ್ದಾರೆ. 9 ತಿಂಗಳ ಸೇವಾವಧಿ ಇರುವ ಪ್ರಸಾದ್, ಅಕ್ಟೋಬರ್​ನಲ್ಲಿ ನಿವೃತ್ತರಾಗಲಿದ್ದಾರೆ. ಸೂದ್​ಗೆ
4 ವರ್ಷಗಳ ಸೇವಾವಧಿ ಇದೆ. ಹೀಗಾಗಿ ಡಿಜಿಪಿ ಹುದ್ದೆಗೆ ಇವರ ಹೆಸರುಗಳು ಮುಂಚೂಣೆಯಲ್ಲಿವೆ. ಇನ್ನು ರಾಜಸ್ಥಾನ ಮೂಲದ 1986ನೇ ಬ್ಯಾಚ್​ನ ಪಿ.ಕೆ.ಗರ್ಗ್ ಅರ್ಹತೆ ಹೊಂದಿದ್ದರೂ ಇವರಿಬ್ಬರ ನಡುವೆ ಅವಕಾಶ ಸಾಧ್ಯತೆ ಕಡಿಮೆ. ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ವಿವಾದದ ಬಳಿಕ ರಾಜ್ಯದಲ್ಲಿ ಸೇವಾ ಹಿರಿತನದ ಮೇಲೆಯೇ ಡಿಜಿ-ಐಜಿಪಿ ನೇಮಕ ನಡೆದುಕೊಂಡು ಬಂದಿದೆ. ಈ ಬಾರಿಯೂ ಸೇವಾ ಹಿರಿತನ ಮಾನದಂಡದ ಮೇಲೆ ನೇಮಕಾತಿ ನಡೆಯಲಿದೆ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + seven =
Remember me
