ಬಾಗಲಕೋಟೆ:ಕೋವಿಡ್​ ರಣಕೇಕೆಯ ನಡುವೆಯೂ ನಿಯಮ ಉಲ್ಲಂಘಿಸಿ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದ ನವವಿವಾಹಿತನಿಗೆ ಕಾನೂನು ಸಂಕಷ್ಟ ಎದುರಾಗಿದೆ. ಇನ್ನು ಈ ಮದುವೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಸಂಬಂಧಿಕರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.
ತಾಲೂಕಿನ ಕಲಾದಗಿಯಲ್ಲಿ ಕರೊನಾ ರಣಕೇಕೆ ಹಾಕುತ್ತಿದೆ. ಇದಕ್ಕೆಲ್ಲ ಕಾರಣ ಬಾಗಲಕೋಟೆಯಲ್ಲಿ ಜೂ.12ರಂದು ನೆರವೇರಿದ್ದ ಹಾವೇರಿ ಜಿಲ್ಲೆಯ ಅಬಕಾರಿ ಇನ್​ಪೆಕ್ಟರ್​ವೊಬ್ಬರ ಮದುವೆ ಸಮಾರಂಭ. ಈ ಮದುವೆಯಲ್ಲಿ ಕರೊನಾ ನಿಯಮಾವಳಿಯನ್ನು ಉಲ್ಲಂಘಿಸಲಾಗಿತ್ತು. ವರ ಕಲಾದಗಿ ಗ್ರಾಮದ ನಿವಾಸಿ ಆಗಿದ್ದರಿಂದ ವಿವಾಹ ಸಮಾರಂಭದಲ್ಲಿ ಈ ಊರಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮದುವೆ ನಂತರ ವರನಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಇದೀಗ ಮದುವೆಯಲ್ಲಿ ಪಾಲ್ಗೊಂಡ ಅನೇಕರಿಗೆ ಸೋಂಕು ಪತ್ತೆ ಆಗುತ್ತಲೇ ಇದೆ. ಈಗಾಗಲೇ 20ಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದೆ.ಇದನ್ನೂ ಓದಿರಿಇಡೀ ರಾಜ್ಯ ಮತ್ತೆ ಸ್ತಬ್ಧ! ವೀಕೆಂಡ್​ ಲಾಕ್​ಡೌನ್​ಗೆ ಕ್ಷಣಗಣನೆ
ಮದುವೆ ಬಗ್ಗೆ, ಎಷ್ಟು ಜನರು ಭಾಗವಹಿಸಬೇಕು ಎನ್ನುವ ಬಗ್ಗೆ ನಿಯಮ ಉಲ್ಲಂಘನೆ ಆರೋಪದಡಿ ನವವಿವಾಹಿತ ಮತ್ತು ಕುಟುಂಬದ ಇತರರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವರನ ವಿರುದ್ಧ ಕೇಸ್​ ದಾಖಲಾಗಿರುವ ಬಗ್ಗೆ ಎಸ್ಪಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿದ್ದಾರೆ.
ನವವಿವಾಹಿತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಿಂದಲೇ 20ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, ಮದುವೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಕರೊನಾ ಭೀತಿಯ ಛಾಯೆ ಆವರಿಸಿದೆ.
ಕೋವಿಡ್​ಗೆ ಔಷಧಿ ಕೊಡಿಸುವ ನೆಪದಲ್ಲಿ ಅತ್ಯಾಚಾರ! ಸೋಂಕಿನ ಹೆಸರಲ್ಲಿ ಕಾಮುಕರ ಅಟ್ಟಹಾಸ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 9 =
Remember me
