ಬೆಂಗಳೂರು:ಧರ್ಮವನ್ನು ಮಾನವೀಯ ನೆಲೆಯಲ್ಲಿ ನೋಡುತ್ತಿದ್ದ ಲಂಕೇಶ್, ದೇವರನ್ನು ಶಾಸ್ತ್ರೋಕ್ತವಾಗಿ ನಂಬದಿದ್ದರೂ ದೇವರು ಮತ್ತು ಧರ್ಮದ ಬಗ್ಗೆ ಕಟ್ಟಾ ವಿರೋಧಿಯಾಗಿರಲಿಲ್ಲ ಎಂದು ಹಿರಿಯ ಸಾಹಿತಿ ಪ್ರೊ. ಕೆ. ಮರಳ ಸಿದ್ಧಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾಗವತರು ಸಾಂಸ್ಕೃತಿಕ ಸಂಘಟನೆಯು ಭಾನುವಾರ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಲಂಕೇಶ್-90 ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಲಂಕೇಶ್ ಮತ್ತು ಕುವೆಂಪು ಹೋಲಿಕೆಗೆ ಸಿಗುವ ವ್ಯಕ್ತಿತ್ವ. ಇಬ್ಬರೂ ಮಲೆನಾಡಿನಿಂದ ಬಂದವರು, ಕಟ್ಟಾ ಜಾತಿ ವಿರೋಧಿಗಳು, ಮೂಢನಂಬಿಕೆಗಳನ್ನು ವಿರೋಧಿಸಿ ವೈಜ್ಞಾನಿಕತೆ ಪ್ರತಿಪಾದನೆ ಮಾಡಿದವರು. ಧರ್ಮ ಮತ್ತು ದೇವರ ಬಗ್ಗೆ ಕುವೆಂಪು ವಿರೋಧಿಸಿದರೂ ದೇವರು ಮತ್ತು ಪುನರ್ಜನ್ಮದ ಬಗ್ಗೆ ಗಾಢವಾಗಿ ನಂಬಿದ್ದರು. ಧರ್ಮವನ್ನು ಮಾನವೀಯ ನೆಲೆಯಲ್ಲಿ ನೋಡುತ್ತಿದ್ದಲಂಕೇಶ್ ಕೂಡ ದೇವರು ಮತ್ತು ಧರ್ಮದ ಬಗ್ಗೆ ಕಟ್ಟಾ ವಿರೋಧಿಯಾಗಿರಲಿಲ್ಲ ಎಂದರು.
ಶೂದ್ರ ಪ್ರಜ್ಞೆ ಹುಟ್ಟಿಹಾಕಿದ 70ರ ದಶಕ:
70ರ ದಶಕದಲ್ಲಿ ವೈದಿಕ ಪ್ರಜ್ಞೆ ವಿರೋಧಿಯಾಗಿ ಶೂದ್ರ ಪ್ರಜ್ಞೆ ಹುಟ್ಟಿಕೊಂಡಿತು. ಕುವೆಂಪು ಅವರು ಹೊಸ ವೈಚಾರಿಕತೆ ಹುಟ್ಟಿಹಾಕಿದ್ದರಿಂದ ಪ್ರಬಲವಾಯಿತು. ಅದನ್ನು ಲಂಕೇಶ್ ಅವರು ಕ್ರಿಯಾಶೀಲ ಬರಹಗಾರರಾಗಿ ಪತ್ರಿಕೆ ಮೂಲಕ ಕುವೆಂಪು ವಿಚಾರಗಳನ್ನು ಜನರಿಗೆ ಮುಟ್ಟಿಸಿದರು. ಇದಕ್ಕೆ ಅನಂತಮೂರ್ತಿ ಮತ್ತು ತೇಜಸ್ವಿ ಕೂಡ ಕೈಜೋಡಿಸಿದರು ಎಂದು ಹೇಳಿದರು.
ಕನ್ನಡ ನಾಡಿನ ಸಾಂಸ್ಕೃತಿಕ ಬದುಕಿನಲ್ಲಿ 70ರ ದಶಕವು ವಿಶಿಷ್ಟ ದಶಕವಾಗಿತ್ತು. ರಂಗಭೂಮಿ, ಸಮಾಜವಾದಿ ಚಳವಳಿ ಸೇರಿ ಅನೇಕ ಚಳವಳಿಗಳು ಕ್ರಿಯಾಶಿಲವಾಗಿದ್ದವು. ಇದೆಲ್ಲದರಲ್ಲಿಯೂ ಲಂಕೇಶ್ ಮುಖ್ಯ ಪಾತ್ರ ವಹಿಸುತ್ತಿದ್ದರು. ಈ ಮೂಲಕ ನನ್ನ ಬದುಕಿಗೂ ಹೊಸ ತಿರುವು ಸಿಕ್ಕಿತು ಎಂಬ ಪ್ರೊ. ಮರಳಸಿದ್ಧಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆಯೋಜಕರಾದ ಕೆ. ರೇವಣ್ಣ, ಡಾ. ಎಂ.ಎಸ್. ಆಶಾದೇವಿ, ಲೇಖಕ ಅಗ್ರಹಾರ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
