ಇವತ್ತಿನ ಬಹುಮುಖ್ಯ ಕೊರತೆಯೆಂದರೆ, ನಾವು ತಿನ್ನುವ ಆಹಾರ ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುತ್ತಿರುವುದು. ಆಹಾರವು ಮಣ್ಣಿನಿಂದ ಉತ್ಪತ್ತಿಯಾಗಬೇಕು. ಏಕೆಂದರೆ, ಈ ಶರೀರವೂ ಮಣ್ಣಿನಿಂದಲೇ ಆಗಿರುವುದು. ಶರೀರವು ಭೂಮಿಯೊಂದಿಗೆ ಲಯಬದ್ಧವಾಗಿ ಇರಬೇಕು. ಅಷ್ಟೇ ಅಲ್ಲ, ಅಲರ್ಜಿಗಳು ಹೆಚ್ಚಾಗಿ ಮಾಂಸಾಹಾರಿಗಳಲ್ಲಿಯೇ ಕಾಣಿಸಿಕೊಳ್ಳುವುದು. ಜನರು ಮಾಂಸಾಹಾರವನ್ನು ಸೇವಿಸಿದಾಗ, ಒಂದೇ ಪ್ರಾಣಿಯ ಮಾಂಸವನ್ನು ಸೇವಿಸಿರುವುದಿಲ್ಲ- ಚೆನ್ನಾಗಿ ಜಜ್ಜಿದ-ಕಿವುಚಿದ ಎಲ್ಲ ರೀತಿಯ ಪ್ರಾಣಿಗಳ, ಎಲ್ಲ ರೀತಿಯ ಭಾಗಗಳನ್ನೂ ಸೇವಿಸಿರುತ್ತಾರೆ. ಇಂತಹ ಆಹಾರ ಸೇವನೆಯಿಂದ ಆರೋಗ್ಯವಾಗಿರಲು ಸಾಧ್ಯವಿಲ್ಲ. ಆದರೆ, ಅದರಲ್ಲಿರುವ ಪ್ರೊಟೀನ್ ಮತ್ತು ಇತರ ಅಂಶಗಳ ಪಟ್ಟಿ ಮಾಡುವವರಿರುವ ತನಕ ಜನ ಇದನ್ನು ತಿನ್ನುತ್ತಾರೆ.
ನಾನು ಸಣ್ಣವನಿದ್ದಾಗ ಒಂದು ನಿರ್ದಿಷ್ಟ ಹಸುವಿನ ಹಾಲನ್ನು ಮಾತ್ರ ಕೊಡುತ್ತಿದ್ದರು. ಆದರೆ ಇಂದು ಮಾರುಕಟ್ಟೆಯಲ್ಲಿ ತರುವ ಹಾಲು ಸಾವಿರಾರು ಹಸುಗಳಿಂದ ಉತ್ಪತ್ತಿಯಾಗಿ, ಕಲಬೆರಕೆಯಾಗಿ ಸಂಸ್ಕರಣಗೊಂಡಿರುವ ಹಾಲು. ಮುಖ್ಯವಾಗಿ ಅಮೆರಿಕದಲ್ಲಿ ಜನರು ಹೈನು, ಕೋಳಿ ಮತ್ತು ಇತರ ಮಾಂಸಗಳ ಅಧಿಕೋತ್ಪನ್ನಗಳ ಸೇವನೆಯಿಂದ ಅಧಿಕ ಪ್ರಮಾಣದಲ್ಲಿ ಪ್ರಾಣಿ-ಹಾರ್ವೇನ್​ಗಳನ್ನು ಸೇವಿಸುತ್ತಾರೆ. ಪ್ರತಿಯೊಂದಕ್ಕೂ ಎಲ್ಲ ರೀತಿಯ ಸೇರ್ಪಡೆ(ಅಡಿಟಿವ್ಸ್)ಗಳಾಗಿರುತ್ತವೆ. ನಿಮ್ಮ ದೇಹ ಒಂದು ಜೀವಿ- ಅದು ಭೂಮಿಯ ಮೇಲಿನ ಜೈವಿಕಾಂಶಗಳನ್ನು ಹೀರಿಕೊಂಡು ಅದರದೇ ಒಂದು ಭಾಗವಾಗುವಂತೆ ರೂಪುಗೊಂಡಿದೆ. ಶರೀರವು ಅಮೈನೋ ಆಮ್ಲಗಳು, ಪೊ›ಟೀನ್​ಗಳು ಮುಂತಾದವುಗಳಿಂದ ರಚಿತವಾಗಿದೆ. ಹಾಗೆಂದು ಇವನ್ನೆಲ್ಲ ಒಂದು ಟೆಸ್ಟ್​ಟ್ಯೂಬ್​ನಲ್ಲಿ ಹಾಕಿ ಕಲುಕಿದರೆ ಮಾನವಜೀವಿಯಾಗಲು ಸಾಧ್ಯವಿಲ್ಲ.
ಕಲಸುಮೇಲೋಗರ ಮಾಡಬೇಡಿ: ಅಮೆರಿಕದಲ್ಲಿ ಎಲ್ಲೆಲ್ಲೂ ಆಹಾರವೇ ಆಹಾರವಿದೆ. ಅಷ್ಟೊಂದು ಆಹಾರವಿರುವುದರಿಂದ, ಜನರು ಅದನ್ನು ಸರಿಯಾಗಿ ಗಮನಿಸುವುದೂ ಇಲ್ಲ ಮತ್ತು ಅಗತ್ಯವಿರುವ ಗೌರವ ಹಾಗೂ ಕಾಳಜಿಯನ್ನೂ ತೋರಿಸುವುದಿಲ್ಲ. ಭಾರತದಲ್ಲೂ ಇತ್ತೀಚೆಗೆ ಈ ಅಭ್ಯಾಸ ರೂಢಿಯಾಗುತ್ತಿದೆ. ಸಮೃದ್ಧವಾದ ಶ್ರೀಮಂತ ಜಾಗಗಳಲ್ಲಿ ಅನೇಕ ರೀತಿಯ ಬಗೆಬಗೆಯ ಆಹಾರವನ್ನು ತಟ್ಟೆಯಲ್ಲಿ ಕಾಣುತ್ತೀರಿ. ಜನರು ಎಲ್ಲವನ್ನೂ ಕಲೆಸಿ ತಿನ್ನುತ್ತಾರೆ. ನಾವು ಚಿಕ್ಕವರಿದ್ದಾಗ ಎರಡು ರೀತಿಯ ತಿನಿಸುಗಳನ್ನು ಬೆರಸಿದರೆ ನಮ್ಮ ಹಿರಿಯರು, ‘ಭಿಕ್ಷುಕನಂತೆ ಏಕೆ ತಿನ್ನುತ್ತಿದ್ದೀಯಾ?’ ಎಂದು ಬೈಯುತ್ತಿದ್ದರು. ಏಕೆಂದರೆ, ಭಿಕ್ಷುಕನು ತನ್ನ ಭಿಕ್ಷಾಪಾತ್ರೆಯಲ್ಲಿ ಸಿಗುವುದೆಲ್ಲವನ್ನೂ ಕಲೆಸಿಯೇ ತಿನ್ನುತ್ತಾನೆ.
ಪ್ರತಿಯೊಂದು ಪದಾರ್ಥವನ್ನೂ ಬೇರೆ ಬೇರೆಯಾಗಿಯೇ ತಿನ್ನಬೇಕು, ಏಕೆಂದರೆ ಹೊಟ್ಟೆ ಪ್ರತಿಯೊಂದನ್ನೂ ಅದರದೇ ರೀತಿಯಲ್ಲಿ ನಿಭಾಯಿಸುತ್ತದೆ. ಎಲ್ಲವನ್ನೂ ಬೆರೆಸಿ ತಿಂದಾಗ ವ್ಯವಸ್ಥೆಯೂ ಗಲಿಬಿಲಿಗೊಳ್ಳುತ್ತದೆ ಮತ್ತು ಕಾಲಕ್ರಮೇಣ ನಾನಾ ರೀತಿಯ ಅಲರ್ಜಿಗಳೂ ಉಂಟಾಗುತ್ತವೆ. ನಾನು ಒಬ್ಬನೇ ಇದ್ದರೆ, ಒಂದೇ ಬಗೆಯ ಆಹಾರ ಸೇವಿಸುತ್ತೇನೆ. ಏಕೆ ಹಾಗೆ ಮಾಡುತ್ತೇನೆ ಎಂದರೆ, ನನ್ನ ನಾಲಿಗೆಯಷ್ಟೇ ಅಲ್ಲದೆ ನನ್ನ ದೇಹವೂ ಆ ಆಹಾರವನ್ನು ಹೇಗೆ ಸ್ವಾಗತಿಸುತ್ತದೆ ಮತ್ತು ಯಾವ ರೀತಿಯಲ್ಲಿ ಅದು ನನ್ನ ದೇಹದಲ್ಲಿ ವರ್ತಿಸುತ್ತದೆ ಎಂಬುದರ ಅರಿವು ನನಗಿದೆ. ಇದು ಮಿತವ್ಯಯ ಅಥವಾ ಹತೋಟಿಯಿಂದ ಇರುವುದಲ್ಲ- ಇದು ಪ್ರಜ್ಞಾಪೂರ್ವಕವಾಗಿ ಇರುವುದು ಅಷ್ಟೇ. ಪ್ರಜ್ಞಾಪೂರ್ವಕವಾಗಿ ಇರದಿದ್ದರೆ, ಸೌಖ್ಯವಾಗಿರುವುದು ಸಾಧ್ಯವಿಲ್ಲ.
ವಿಪರೀತವಾಗಿರುವ ಅಲರ್ಜಿಗಳು:ದುರದೃಷ್ಟವೆಂದರೆ, ಇನ್ನೆರಡು ಪೀಳಿಗೆಗಳಲ್ಲಿ ಜನರು ಅರ್ಧದಷ್ಟು ಆಹಾರ ಪದಾರ್ಥಗಳಿಗೆ ಅಲರ್ಜಿ ಬೆಳೆಸಿಕೊಂಡಿರುತ್ತಾರೆ. ಸೂರ್ಯನ ಬೆಳಕು ಮತ್ತು ಮಳೆಯ ನೀರಿಗೂ ಅಲರ್ಜಿಯಾಗುವಷ್ಟು. ಆಗ ನೀವು ಇನ್ನೆಲ್ಲಿ ಬದುಕಲು ಸಾಧ್ಯ? ಉಸಿರಾಡುವ ಗಾಳಿಗೂ ಅಸಹಿಷ್ಣುವಾಗಿಬಿಟ್ಟರೆ ಹೇಗೆ? ತಮಾಷೆ ಎನಿಸಬಹುದು, ಆದರೆ ಜನರು ನೀರು, ಬೆಳಕು, ಉಸಿರಾಡುವ ಗಾಳಿ ಎಲ್ಲದಕ್ಕೂ ಅಸಹಿಷ್ಣುವಾಗುವ ಕಾಲ ದೂರವಿಲ್ಲ. ಡಾಕ್ಟರ್ ಹತ್ತಿರ ಹೋಗಿ ಯಾವ ಅಲರ್ಜಿಯಿಂದ ಬಳಲುತ್ತಿದ್ದೀರಿ ಎಂದು ತಿಳಿದುಕೊಳ್ಳುವುದು ಸಮಸ್ಯೆಗೆ ಪರಿಹಾರ ಅಲ್ಲವೇ ಅಲ್ಲ. ಸಮಸ್ಯೆಯ ಮೂಲವನ್ನು ಕಂಡುಕೊಳ್ಳಬೇಕು. ಒಂದು ನಿರ್ದಿಷ್ಟ ವಸ್ತುವಿಗೆ ದೇಹ ಅಸಹಿಷ್ಣುತೆಯನ್ನು ಹೊಂದಿರುವುದಷ್ಟೇ ವಿಷಯವಲ್ಲ. ಅಗತ್ಯವಾಗಿ ದೇಹವು ಇಡೀ ಜೀವನಕ್ಕೇ ಸ್ಪಂದಿಸುತ್ತಿರುತ್ತದೆ.
ಜೀವನಶೈಲಿಯ ಆಯ್ಕೆ:ಆಹಾರವನ್ನು ಸೇವಿಸುವ ರೀತಿ ಕೂಡ ಗಣನೆಗೆ ಬರುತ್ತದೆ. ನಾನು ಅಮೆರಿಕದ ಬಹಳಷ್ಟು ನಗರಗಳಲ್ಲಿ ಗಮನಿಸಿರುವುದೇನೆಂದರೆ, ಹಲವಾರು ಯಶಸ್ವಿ ವೃತಿಪರರೂ ರಸ್ತೆಯಂಚಿನಲ್ಲಿ ಮಾರುವವರ ಬಳಿ ನಿಂತು ಸಿಕ್ಕಿದ್ದೆಲ್ಲವನ್ನೂ ತುರುಕಿಕೊಳ್ಳುತ್ತಿರುತ್ತಾರೆ. ಈ ರೀತಿ ತಿನ್ನುವುದು ಸರಿಯಲ್ಲ. ನನಗೆ ಅವರ ಬಗ್ಗೆ ಕನಿಕರವಾಗುತ್ತದೆ. ಅವರ ಮುಖದಲ್ಲಿ ಸಂತಸದ ಒಂದೇ ಒಂದು ಎಳೆಯೂ ಇರುವುದಿಲ್ಲ. ಅವರು ಅರ್ಧಗಂಟೆಯಲ್ಲಿ ಅಲ್ಲಿ ಹೋಗಿ ಊಟ ಮಾಡಿ ವಾಪಸು ಕೆಲಸಕ್ಕೆ ಹಿಂದಿರುಗಿ ಮತ್ತಷ್ಟು ದುಡ್ಡು ಮಾಡಬೇಕು. ಈ ರೀತಿ ಬದುಕಿದರೆ, ಬಳಲದೆ ಇರಲು ಹೇಗೆ ಸಾಧ್ಯ?
ಇಂದಿನ ದಿನಗಳಲ್ಲಿ ಮಕ್ಕಳಿಗೆ ಹಾಲಿನಿಂದಲೂ ಅಲರ್ಜಿಯಾಗುತ್ತದೆ! ಹಿಂದಿನ ಯಾವುದೇ ಪೀಳಿಗೆಯವರಲ್ಲಾಗಲಿ ಅಥವಾ ಹಳ್ಳಿಗಾಡಿನ ಬುಡಕಟ್ಟಿನ ಜನಾಂಗದವರಲ್ಲಾಗಲಿ ಯಾವತ್ತೂ ಹಾಲಿನ ಅಲರ್ಜಿ ಕಂಡಿರಲಿಲ್ಲ. ಜನರಿಗೆ ನೆಲಗಡಲೆ ಕೂಡ ಅಲರ್ಜಿ. ಒಂದು ಸಣ್ಣ ನೆಲಗಡಲೆ ಕೂಡ ಹೇಳುತ್ತಿದೆ, ‘ನೀವು ಸರಿಯಾಗಿ ಬದುಕುತ್ತಿಲ್ಲ’ ಎಂದು. ನೀವು ಈ ಸಂದೇಶವನ್ನು ಅರ್ಥ ಮಾಡಿಕೊಳ್ಳುಬೇಕು. ನೆಲಗಡಲೆ ಅಲರ್ಜಿ ಮಾರಣಾಂತಿಕ. ಒಮ್ಮೆ ನಾನು ಅಮೆರಿಕನ್ ಏರ್​ಲೈನ್​ನಲ್ಲಿ ಪ್ರಯಾಣಿಸುತ್ತಿದ್ದೆ, ಆಗ ಪ್ರಯಾಣಿಕರಿಗೆ ಒಂದು ಸಂದೇಶವನ್ನು ಬಿತ್ತರಿಸಿದರು.
‘ಇಂದು ನಾವು ಪ್ರಯಾಣಿಕರಿಗೆ ನೆಲಗಡಲೆಯನ್ನು ನೀಡುವುದಿಲ್ಲ, ಪ್ರಯಾಣಿಕರಲ್ಲಿ ಒಬ್ಬರು ನೆಲಗಡಲೆಯ ಅಲರ್ಜಿಯಿಂದ ಬಳಲುತ್ತಿದ್ದಾರೆ’ ಎಂದು. ನಾನು, ಯಾರಿಗೋ ಅಲರ್ಜಿಯಾದರೆ, ನಾನೇಕೆ ತಿನ್ನಬಾರದು? ಎಂದು ಚಕಿತನಾದೆ. ನಿಜ ಏನೆಂದರೆ, ಯಾರಾದರೂ ನೆಲಗಡಲೆಯ ತಿನಿಸಿನ ಪೊಟ್ಟಣವನ್ನು ತೆರೆದಾಗ ಬರುವ ವಾಸನೆಯಿಂದಲೇ ಅವನು ತೀವ್ರವಾದ ಅಲರ್ಜಿಯಿಂದ ಪ್ರತಿಕ್ರಿಯಿಸುತ್ತಾನೆ ಎಂದು ತಿಳಿಯಿತು. ಹಿಂದಿನ ಪೀಳಿಗೆಯವರ ಪೌಷ್ಠಿಕ ಆಹಾರಗಳಲ್ಲಿ ಒಂದಾಗಿದ್ದ ಈ ನೆಲಗಡಲೆ ಇಂದು ಪ್ರಪಂಚದಾದ್ಯಂತ ಹಲವರಿಗೆ ಅಲರ್ಜಿಯನ್ನು ಸೃಷ್ಟಿ ಮಾಡಿರುವುದು ಜನರು ಎಚ್ಚೆತ್ತುಕೊಳ್ಳುವಂತೆ ಮಾಡಲಿ ಎಂಬುದು ನನ್ನ ಆಶಯ. ಜನರು ಇನ್ನಾದರೂ ಎಚ್ಚೆತ್ತುಕೊಂಡು ಈ ಅಲರ್ಜಿಗಳಿಗೆ ಮೂಲಕಾರಣವೇನು ಎಂದು ತಿಳಿದುಕೊಂಡು, ಅದಕ್ಕೆ ತಕ್ಕ ಪರಿಹಾರವೇನು ಎಂದು ಗಂಭೀರವಾಗಿ ಪರಿಗಣಿಸಬೇಕಿದೆ.
ದೇಹದ ಎಚ್ಚರಿಕೆಯ ಸಂದೇಶ:ಮತ್ತೊಂದು ಅಂಶವೆಂದರೆ ನಾವಿರುವ ವಾತಾವರಣ. ನಾವು ಯಾವಾಗಲೂ ವಿಷವನ್ನೇ ಉಸಿರಾಡುತ್ತ ನಮಗೆ ಹಾನಿಕಾರಕವಾದ ಆಹಾರವನ್ನೇ ಸೇವಿಸುತ್ತಿದ್ದರೆ, ಖಂಡಿತ ನಮ್ಮ ದೇಹವು ಪ್ರತಿಕ್ರಿಯಿಸುತ್ತದೆ. ಇದು ಬರೀ ಅಲರ್ಜಿಗಷ್ಟೇ ಅನ್ವಯವಾಗುವುದಿಲ್ಲ. ನಮ್ಮ ದೇಹರಚನೆಯ ಸಮಯದಲ್ಲಿ ಆದ ಯಾವುದೋ ತಪ್ಪಿನಿಂದಲೂ ಒಂದು ನಿರ್ದಿಷ್ಟ ಪದಾರ್ಥಕ್ಕೆ ಅಲರ್ಜಿ ಉಂಟಾಗಬಹುದು. ಹಾಗಾದಾಗ, ನೀವು ಆ ಒಂದು ಪದಾರ್ಥವನ್ನು ತ್ಯಜಿಸಬಹುದು. ಆದರೆ ಇಂದು ಈ ಅಲರ್ಜಿ ಸಾಂಕ್ರಾಮಿಕ ಪ್ರಮಾಣದಲ್ಲಿ ಹರಡುತ್ತಿದೆ. ಮೂಲತಃ ನಮ್ಮ ಶರೀರವು ನಮ್ಮ ಸುತ್ತಲಿನ ವಾತಾವರಣಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತಿರುತ್ತದೆ.
ಅಲರ್ಜಿಯಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರೆ, ನಾವು ಮೂಲತಃ ಏನೋ ವಿಪರೀತವಾದ ತಪ್ಪನ್ನು ಮಾಡುತ್ತಿದ್ದೇವೆ ಎಂದು ಅರ್ಥ. ಸಂಸ್ಕರಿಸಿದ ಆಹಾರ ಪದಾರ್ಥಗಳು ಆರೋಗ್ಯವನ್ನು ಹಾಳುಮಾಡುತ್ತಿವೆ, ವಿಪರ್ಯಾಸವೆಂದರೆ, ಅದೇ ಇಂದಿನ ಪ್ರಬಲ ಉದ್ಯಮ!
ಯೋಗ ಹೇಗೆ ಸಹಾಯಕವಾಗಿದೆ?:ಈ ಅಲರ್ಜಿಗಳಿಗೆ ಏನು ಮಾಡಬಹುದು? ಯೋಗವು ಈ ಅಲರ್ಜಿಯನ್ನು ಖಂಡಿತವಾಗಿಯೂ ಹಿಮ್ಮೆಟ್ಟಿಸುತ್ತದೆ. ಸಾವಿರಾರು ಜನರು ಶಕ್ತಿಸಂಚಲನ ಮತ್ತು ಶಾಂಭವಿ ಮಹಾಮುದ್ರ, ಇವುಗಳ ಅಭ್ಯಾಸದಿಂದ ಅಲರ್ಜಿಗಳಿಂದ ಮುಕ್ತರಾಗಿದ್ದಾರೆ, ಅದರಲ್ಲೂ ಅತಿ ಹೆಚ್ಚಾಗಿರುವ ಪರಾಗ ಅಲರ್ಜಿ (ಪೋಲೇನ್ ಅಲರ್ಜಿ)ಯಿಂದ. ನಿಮ್ಮ ಸುತ್ತಮುತ್ತ ಯಾರಾದರೂ ಅಲರ್ಜಿಯಿಂದ ಬಳಲುತ್ತಿದ್ದು, ಅದಕ್ಕೇನಾದರೂ ಮಾಡಲು ತಯಾರಾಗಿದ್ದರೆ, ಅವರಿಗೆ ಹೇಳಬಹುದಾದ ಸರಳ ಉಪಾಯವೆಂದರೆ, ಒಂದು ಚಿಟಿಕೆ ವಿಭೂತಿಯನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಮತ್ತು ಹೀಗೆ ವಿಭೂತಿ ಬೆರೆಸಿದ ನೀರನ್ನು ದಿನಕ್ಕೆ ಐದು ಲೀಟರ್​ನಂತೆ ಸೇವಿಸಬೇಕು ಎಂದು. ಜೊತೆಗೆ ಕೆಲವು ಯೋಗಾಭ್ಯಾಸಗಳನ್ನೂ ಮಾಡುವುದರಿಂದ ಖಂಡಿತ ಅಲರ್ಜಿಗಳು ಮಾಯವಾಗುತ್ತವೆ. ಈಗ ಅತ್ಯಗತ್ಯವಿರುವುದು ಇದೇ- ಶುದ್ಧೀಕರಣ.
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
