|ಗುರುಸಿಂಹ ಆರ್.ಎನ್​.ಮ್ಯೂಚುವಲ್ ಫಂಡ್​ ವಿತರಕಸಾಮಾನ್ಯ ವರ್ಗಗಳಾದ ಇಕ್ವಿಟಿ, ಸಾಲ, ಚಿನ್ನ ಮತ್ತು ರಿಯಲ್ ಎಸ್ಟೇಟ್‌ ಸೇರಿ ಪ್ರತಿ ಹೂಡಿಕೆಯ ಪ್ರಯಾಣದಲ್ಲೂ ನಾವು ಒಂದು ವಿನೂತನ ಹಾಗೂ ಅದ್ವಿತೀಯವಾದ ಹೂಡಿಕೆ ಅವಕಾಶಕ್ಕಾಗಿ ನೋಡುವ ಸಮಯವೊಂದು ಬರುತ್ತದೆ. ನೀವು ಅಂಥ ಸಂದರ್ಭದಲ್ಲಿದ್ದರೆ ಅಥವಾ ಒಂದು ಪರ್ಯಾಯವಾದ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವ ಯೋಚನೆಯಲ್ಲಿದ್ದರೆ ಮಾಸ್ಲೋಸ್​ ಹೈಯರಾರ್ಕಿ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಅಬ್ರಹಾಂ ಮಾಸ್ಲೋ ಪ್ರತಿಪಾದಿಸಿದ ಮನಃಶಾಸ್ತ್ರದ ಯೋಚನೆ ಮಾಸ್ಲೋಸ್ ಅಗತ್ಯಗಳ ಶ್ರೇಣಿಯು ಎಲ್ಲ ವರ್ಗ ಮತ್ತು ಸ್ತರಗಳ ವ್ಯಕ್ತಿಗಳ ಅಗತ್ಯ, ಸುರಕ್ಷತೆ, ಆಶ್ರಯಕ್ಕೆ ಬೇಕಾದ ಮನೋವೈಜ್ಆನಾಕಿ ಅಗತ್ಯಗಳನ್ನು ದೃಶ್ಯೀಕರಿಸುತ್ತದೆ. ಇದು ನಮ್ಮಲ್ಲಿ ಹೆಚ್ಚಿನವರು ನಮ್ಮದೇ ಆದ ಮನೆ ಖರೀದಿಸುವುದನ್ನು ಪರಿಗಣಿಸಲು ಪ್ರೇರೇಪಿಸುತ್ತದೆ. ಸುರಕ್ಷತೆ ಮತ್ತು ಭದ್ರತೆಯ ಭಾವನೆಯಿಂದ ಪರಂಪರೆಯ ರಚನೆಯವರೆಗೆ ಮನೆಯು ಜನರಿಗೆ ಹೆಮ್ಮೆಯ ಸ್ಥಾನವನ್ನು ಒದಗಿಸುತ್ತದೆ.
ಮನೆಗಳನ್ನು ಹೊಂದಲು ಜನರ ಒಲವನ್ನು ಗಮನಿಸಿದರೆ, ಹೌಸಿಂಗ್ ಫಂಡ್​ನಲ್ಲಿ ಅಂದರೆ ಗೃಹ ನಿಧಿಯಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸುವುದು ತಾರ್ಕಿಕ ತೀರ್ಮಾನವಲ್ಲವೇ? ಭಾರತವು ಹಲವು ವರ್ಷಗಳಿಂದ ಕೃಷಿಯ ಶಕ್ತಿಕೇಂದ್ರ ಮತ್ತು ಅತ್ಯಧಿಕ ಜವಳಿ ಉತ್ಪಾದನೆಯನ್ನು ಹೊಂದಿದ್ದರೂ ಜೀವನದ ಮೂರನೇ ಅತಿ ಅಗತ್ಯವಾದ ಹಾಗೂ ಬೆಳವಣಿಗೆಗೆ ಪ್ರಚಂಡ ಸಾಮರ್ಥ್ಯ ಇವರು ಮನೆಯ ವಿಚಾರದಲ್ಲಿ ಹಿಂದೆ ಉಳಿದಿದೆ. ಭಾರತದ ರಿಯಲ್ ಎಸ್ಟೇಟ್ ಉದ್ಯಮವು 2030ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ಮೌಲ್ಯವನ್ನು ಮುಟ್ಟಲಿದೆ ಎಂದು ಸಂಶೋಧನೆ ಸೂಚಿಸುತ್ತದೆ, ಮುಂದಿನ ಮೂರು ವರ್ಷಗಳಲ್ಲಿ ಜಿಡಿಪಿಗೆ ಸುಮಾರು ಶೇ. 13 ಕೊಡುಗೆ ನೀಡುತ್ತದೆ. ಸಾಂಕ್ರಾಮಿಕ ರೋಗದಿಂದಾಗಿ ಜನರನ್ನು ತಮ್ಮ ಊರುಗಳಿಗೆ ಮರಳಲು ಪ್ರೇರೇಪಿಸಿದ್ದರೂ ನಗರ ಪ್ರದೇಶಗಳಲ್ಲಿ ವಾಸಿಸುವ ಭಾರತೀಯರ ಸಂಖ್ಯೆ 2025ರ ವೇಳೆಗೆ 525 ಮಿಲಿಯನ್ ಮತ್ತು 2036ರ ವೇಳೆಗೆ 600 ಮಿಲಿಯನ್ ತಲುಪುವ ನಿರೀಕ್ಷೆಯಿದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಅಷ್ಟೇ ಅಲ್ಲ.. ಪ್ರಮುಖ ನಗರಗಳು ಮತ್ತು ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ವಸತಿ ಮಾರಾಟದ ಪ್ರಮಾಣವು ಹೆಚ್ಚುತ್ತಿದೆ. ಅಲ್ಲದೆ ಈ ಯೋಜನೆಯು ಅಗಾಧವಾದ ಬೆಳವಣಿಗೆ ಉಂಟುಮಾಡುವ ನಿರೀಕ್ಷೆಯಿದೆ.
ಈಗ ಹೂಡಿಕೆ ಏಕೆ?:ಪ್ರತಿಯೊಂದು ಉದ್ಯಮದಂತೆ ವಸತಿ ಕ್ಷೇತ್ರವೂ ಹೆಚ್ಚಿನ ಮತ್ತು ಕಡಿಮೆ ವರ್ತುಲಗಳ ಮೂಲಕ ಹೋಗುತ್ತದೆ. ಈ ಕೆಳಗಿನ ಕಾರಣಗಳಿಂದಾಗಿ ವಸತಿ ಒಂದು ಬಲವಾದ ಪ್ರಗತಿಯ ವರ್ತುಲಕ್ಕೆ ಸಿದ್ಧವಾಗಿದೆ ಎಂದು ಸಂಶೋಧನೆ ಹೇಳುತ್ತದೆ. ಆ ಕಾರಣಗಳಲ್ಲಿ ಜನಸಂಖ್ಯಾ ಬೆಳವಣಿಗೆ, ಜನಸಂಖ್ಯಾ ಪ್ರಯೋಜನ, ನಗರೀಕರಣದ ಪ್ರವೃತ್ತಿಗಳು, ಸಂಪತ್ತಿನ ಪರಿಣಾಮ, ಕೈಗೆಟುಕುವ ಬೆಲೆ ಮತ್ತು ಸಮಂಜಸವಾದ ಮೌಲ್ಯಮಾಪನಗಳು ಮತ್ತು ಸುಲಭ ಹಣಕಾಸು ಪ್ರಮುಖವಾದವು.
ನೀವು ಎಲ್ಲಿ ಹೂಡಿಕೆ ಮಾಡಬೇಕು?:ಗೃಹವಲಯದ ಅಲೆಯನ್ನು ಪರಿಗಣಿಸಿದರೆ ಐಸಿಐಸಿಐ ಪ್ರುಡೆನ್ಶಿಯಲ್ ಬಿಡುಗಡೆ ಮಾಡಿದ ವಸತಿ ಅವಕಾಶಗಳ ನಿಧಿಯು ಕಾರ್ಯಸಾಧ್ಯವಾದ ಆಯ್ಕೆಯಾಗಿದೆ.
ಕಾರು ಓವರ್​​ಟೇಕ್​​ ಮಾಡಿದ್ದಕ್ಕೆ ಕುಟುಂಬದ ಮೇಲೆ ಹಲ್ಲೆ; ವಿಡಿಯೋ ಮೂಲಕ ಮಹಿಳೆ ಅಳಲು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + fifteen =
Remember me
