ಹುಬ್ಬಳಿ:ನೇಹಾ ಹಿರೇಮಠ್ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಹೀನಾಕೃತ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಮಧ್ಯೆ ಹುಬ್ಬಳ್ಳಿಯಲ್ಲಿರುವ ನೇಹಾ ಹಿರೇಮಠ್ ಕುಟುಂಬಸ್ಥರನ್ನು ‘ಬಿಗ್ ಬಾಸ್‌’ ಖ್ಯಾತಿಯ ನಟ ಪ್ರಥಮ್ ಭೇಟಿಯಾಗಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿಯ ನೇಹಾ ಹತ್ಯೆ ಕೇಸ್​: ಆರೋಪಿ ಫಯಾಜ್ ತಲೆ ಕಡಿದವರಿಗೆ 10 ಲಕ್ಷ ರೂ. ಬಹುಮಾನ
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಥಮ್​, ವಿದ್ಯಾರ್ಥಿನಿ ನೇಹಾ ಹತ್ಯೆ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ಇಡೀ ದೇಶವೇ ದುಃಖ ಪಡುವಂತೆ ಆಗಿದೆ. ಆದರೆ ಸರ್ಕಾರ ಆರೋಪಿ ಮನೆಗೆ ಭದ್ರತೆ ಕೊಟ್ಟಿದ್ದಾರೆ. ಈ ದೇಶದಲ್ಲಿ ಕಸಬ್‌ಗೆ ರಕ್ಷಣೆ ನೀಡಲಾಗಿತ್ತು ಬಿಡಿ. ನಮಗಂತೂ ನೇಹಾ ಅವರ ಹತ್ಯೆ ತುಂಬ ನೋವು ನೀಡಿದೆ ಎಂದರು.
ನೇಹಾ ಹಿರೇಮಠ್​ ನಿಧನದಿಂದ ಚಿತ್ರರಂಗದ ಎಲ್ಲರಿಗೂ ನೋವಾಗಿದೆ. ಪ್ರಹ್ಲಾದ್​ ಜೋಶಿ ಅವರೇ ನೀವು 10 ವರ್ಷದಿಂದ ಅಧಿಕಾರದಲ್ಲಿ ಇದ್ದೀರಿ. ಅಂತರ್​ ಧರ್ಮೀಯ ವಿವಾಹದ ಬಗ್ಗೆ ಕಠಿಣ ನಿಯಮ ತೆಗೆದುಕೊಂಡು ಬನ್ನಿ’ ಎಂದು ಪ್ರಥಮ್​ ಒತ್ತಾಯಿಸಿದರು.
ಹಿಂದೂ ಹುಡುಗಿಯರ ತಂಟೆಗೆ ಬರಬೇಡಿ:ಹಿಂದೂ ಧರ್ಮದ ಹುಡುಗಿಯರನ್ನು ಬೇರೆ ಧರ್ಮದವರು ಮದುವೆ ಆಗಲೇಬಾರದು. ಯಾಕೆ ಆಗಬೇಕು..? ಎಂದು ಪ್ರಶ್ನೆ ಮಾಡಿದ್ದಾರೆ. ಹಿಂದೂ ಹುಡುಗಿಯರ ಜೊತೆ ನೀವು ಲವ್​ಯಾಕೆ ಮಾಡುತ್ತೀರಿ..? ಅದರಿಂದಲೇ ತಾನೆ ಇಷ್ಟೆಲ್ಲ ಕ್ರೌರ್ಯ ಆಗುತ್ತಿರುವುದು. ನಿಮ್ಮ ಪಾಡಿಗೆ, ನಿಮ್ಮ ಸಮುದಾಯದವರನ್ನೇ ಮದುವೆ ಆಗಿ. ಹಿಂದೂ ಹುಡುಗಿಯರ ಜೊತೆ ನಿಮಗೆ ಏನು ಕೆಲಸ? ನಿಮ್ಮ ಸಮುದಾಯದಲ್ಲೇ ಬೇಕಾದರೆ ಒಂದಲ್ಲ ಎರಡಲ್ಲ 5 ಮದುವೆ ಮಾಡಿಕೊಳ್ಳಿ. ನಿಮ್ಮನ್ನು ಯಾರು ಕೇಳ್ತಾರೆ? ಇನ್ನೊಮ್ಮೆ ಹಿಂದೂಗಳ ತಂಟೆಗೆ ಬರಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೋಷಕರಿಗೆ ಕಿವಿಮಾತು ಹೇಳಿದ ಪ್ರಥಮ್, ನಿಮ್ಮ ಮಕ್ಕಳು ಯಾರ ಜೊತೆ ಇರುತ್ತಾರೆ, ಎಲ್ಲಿಗೆ ಹೋಗುತ್ತಾರೆ ಎಂಬುದನ್ನು ಗಮನಿಸಿ. ಅವನು 9 ಸಲ ಚುಚ್ಚಿದ್ದಾನೆ ಎಂದರೆ ಅವನ ಮನಸ್ಥಿತಿ ಎಷ್ಟು ವಿಕೃತ ಆಗಿದೆ ನೋಡಿ. ಈ ವಿಚಾರದಲ್ಲಿ ರಾಜಕೀಯ ಬೇಡ ಎಂದು ಹೇಳಿದ್ದಾರೆ.
ನೇಹಾ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಿದ ಜೆ.ಪಿ ನಡ್ಡಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 14 =
Remember me
