ಮಂಗಳೂರು: ‘ಹಿಂದೂ ಧರ್ಮ ಯಾವಾಗ ಹುಟ್ಟಿತು‌‌‌.. ಯಾರು ಹುಟ್ಟಿಸಿದ್ದರು ಎಂಬುದೇ ಪ್ರಶ್ನೆ?’ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ ನಿನ್ನೆ ನೀಡಿದ್ದ ಹೇಳಿಕೆಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇದೀಗ ಆರ್​ಎಸ್​ಎಸ್​ ಹಿರಿಯ ನಾಯಕ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಕೂಡ ಪರಮೇಶ್ವರ್ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಇಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ಇದೊಂದು ಹುಚ್ಚು ಶುರುವಾಗಿದೆ. ಸನಾತನ ಧರ್ಮದ ಬಗ್ಗೆ ದೂಷಣೆ ಮಾಡಿದರೆ ಅಲ್ಪಸಂಖ್ಯಾತರ ಮತ ಸಿಗುತ್ತದೆ, ಅಧಿಕಾರ ಸಿಗುತ್ತದೆ ಎನ್ನುವ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುತ್ತಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸನಾತನ ಧರ್ಮದ ಹುಟ್ಟು ಯಾರಿಗೂ ತಿಳಿದಿಲ್ಲ. ಸನಾತನ ಧರ್ಮಕ್ಕೆ ಹುಟ್ಟೂ ಇಲ್ಲ, ನಾಶವೂ ಇಲ್ಲ. ಕ್ರಿಶ್ಚಿಯನ್, ಇಸ್ಲಾಂ ಇತ್ತೀಚೆಗೆ ಹುಟ್ಟಿಕೊಂಡಿರುವ ಮತಗಳು, ಅವು ಧರ್ಮ ಅಲ್ಲ. ಸನಾತನ ಧರ್ಮ ನಿತ್ಯನೂತನ, ಎಲ್ಲ ಕಾಲಕ್ಕೂ, ಎಲ್ಲವನ್ನೂ ಒಪ್ಪಿಕೊಳ್ಳುವ ಧರ್ಮ. ಕಾಲಕ್ಕೆ ತಕ್ಕಂತೆ ತನ್ನಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಕಾಶವಿರುವ ಧರ್ಮ ಎಂದು ಹೇಳಿದರು.
ಇದನ್ನೂ ಓದಿ:ಹಿಂದೂ ಧರ್ಮ ಯಾವಾಗ ಹುಟ್ಟಿತು‌‌‌.. ಯಾರು ಹುಟ್ಟಿಸಿದ್ದರು?: ಗೃಹ ಸಚಿವ ಡಾ.ಜಿ.ಪರಮೇಶ್ವರ್​
ಸನಾತನ ಧರ್ಮದಲ್ಲಿ ಹಿಂದೆ ಇದ್ದ ಬಾಲ್ಯವಿವಾಹ, ವರದಕ್ಷಿಣೆ ಮೊದಲಾದ ಪಿಡುಗನ್ನು ತೆಗೆದು ಹಾಕಲಾಗಿದೆ. ಮೂಢನಂಬಿಕೆಯನ್ನು ತೊಡೆದು‌ ಹಾಕುವ ಕೆಲಸವನ್ನು ಮಹಾಪುರುಷರು ಮಾಡಿದ್ದಾರೆ. ಈ ರೀತಿಯ ಬದಲಾವಣೆಗಳನ್ನು ನಾವು ಮಾಡಿಕೊಂಡೇ ಬಂದಿದ್ದೇವೆ. ಆದರೆ ಇಸ್ಲಾಂ ಮತ್ತು ಕ್ರಿಶ್ಚಿಯನ್ ಮತದಲ್ಲಿ ಇಂತಹ ಅವಕಾಶವಿಲ್ಲ. ಆ ಕಾರಣಕ್ಕಾಗಿಯೇ ಆ ಮತದ ಜನರೇ ತಮ್ಮ ಮತವನ್ನು ಒಪ್ಪಿಕೊಳ್ಳುತ್ತಿಲ್ಲ ಎಂದರು.
ಇದನ್ನೂ ಓದಿ:ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್​ಫರ್’​ ಅಸಾಧ್ಯ ಅನಿಸುತ್ತೆ!
ಅಮೆರಿಕ ಮತ್ತು ಬ್ರಿಟನ್ ಚರ್ಚುಗಳಿಗೆ ಜನರೇ ಬರುತ್ತಿಲ್ಲ. ಅಮೆರಿಕದಲ್ಲಿ ಚರ್ಚುಗಳನ್ನು ಹರಾಜಿಗೆ ಇಡುವಂತಹ ಸ್ಥಿತಿ ಬಂದಿದೆ. ಚಂದ್ರನ ಬಗ್ಗೆ ಸನಾತನ ಧರ್ಮದಲ್ಲಿ ಉಲ್ಲೇಖವಿದೆ. ಚಂದ್ರನಲ್ಲಿನ ಕಾಲದ ಬಗ್ಗೆ ಕೃಷ್ಣ ಪರ್ವ, ಶ್ವೇತ ಪರ್ವದ ಉಲ್ಲೇಖವಿದೆ. ಆ ಸತ್ಯ ಈಗ ಚಂದ್ರಯಾನ ಉಡಾವಣೆ ಯಶಸ್ವಿಯಾದಾಗ ಬೆಳಕಿಗೆ ಬಂದಿದೆ. ಸನಾತನ ಧರ್ಮ ಮತ್ತು ವಿಜ್ಞಾನ ಪರಸ್ಪರ ಒಪ್ಪಿಕೊಂಡಿವೆ. ಹಿಂದೂ ಧರ್ಮ ಮತ್ತು ವಿಜ್ಞಾನ ಒಟ್ಟೊಟ್ಟಿಗೆ ಹೋಗುತ್ತದೆ. ಸನಾತನ ಧರ್ಮದ ಬಗ್ಗೆ ಮಾತನಾಡುವವರು ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಅವರು ಹೇಳಿದರು.
ಇದ್ದ ದೇವಸ್ಥಾನಕ್ಕೆಲ್ಲ ಭೇಟಿ ನೀಡುವ ಗೃಹಸಚಿವ ಡಾ.ಜಿ. ಪರಮೇಶ್ವರ್ ಹೊರಗೆ ಬಂದ ಬಳಿಕ ಈ ರೀತಿ ಹೇಳಿಕೆ ನೀಡುತ್ತಾರೆ. ಅವರಿಗೆ ಸ್ಟಾಲಿನ್ ಎಂದು ಹೆಸರಿಡಬಹುದಿತ್ತಲ್ಲಾ? ಹಿಂದು ಧರ್ಮದ ಹುಟ್ಟು ಗೊತ್ತಿಲ್ಲದ ಪರಮೇಶ್ವರ್ ಹೆಸರನ್ನು ಇಸ್ಮಾಯಿಲ್ ಅಂತ ಯಾಕೆ ಇಟ್ಟಿಲ್ಲ ಎಂದೂ ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿಕಾರಿದ್ದಾರೆ.
ಮಗು ಅಳುತ್ತಿದೆ ಅಂತ ಮೂಗು-ಬಾಯಿ ಒತ್ತಿ ಹಿಡಿದ ಅಪ್ಪ; ಉಸಿರುಗಟ್ಟಿ ಸಾವಿಗೀಡಾದ 14 ತಿಂಗಳ ಮಗ

ಚಂದ್ರಯಾನ-3 ಮಹಾಕ್ವಿಜ್​: ಇಲ್ಲಿದೆ ಒಂದು ಲಕ್ಷ ರೂ. ಗೆಲ್ಲುವ ಅವಕಾಶ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 11 =
Remember me
