ಬೆಂಗಳೂರು:ಅನ್ಯ ಪಕ್ಷದ ನಾಯಕರ ಹಗರಣಗಳನ್ನು ಎಸ್‌ಐಟಿ ತನಿಖೆಗೆ ವಹಿಸುವ ಮತ್ತು ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡುವ ಬಗ್ಗೆ ರಾಜ್ಯಪಾಲರನ್ನು ಒತ್ತಾಯಿಸುವ ಸಿಎಂ ಸಿದ್ಧರಾಮಯ್ಯ, ತಮ್ಮ ವಿರುದ್ಧ ದಾಖಲಾಗಿರುವ 73 ಹಗರಣಗಳನ್ನು ತನಿಖೆಗೆ ಆದೇಶಿಸಲು ಹಿಂಜರಿಯುತ್ತಿರುವುದು ಏಕೆ ? ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಪ್ರಶ್ನಿಸಿದ್ದಾರೆ.
2013ರಿಂದ 2018 ರವರೆಗಿನ 5 ವರ್ಷಗಳ ಅವಧಿಯಲ್ಲಿ ರಾಜ್ಯದ ಸಿಎಂ ಆಗಿ ಕಾರ್ಯ ನಿರ್ವಹಿಸಿರುವ ಸಿದ್ಧರಾಮಯ್ಯನವರ ಆಡಳಿತಾವಧಿಯಲ್ಲಿ 120ಕ್ಕೂ ಹೆಚ್ಚು ಹಗರಣಗಳು ನಡೆದಿವೆ. ಇವುಗಳ ಪೈಕಿ 73 ಹಗರಣಗಳಲ್ಲಿ ಖುದ್ದಾಗಿ ಸಿದ್ಧರಾಮಯ್ಯನವರೇ ಭಾಗಿಯಾಗಿರುವ ಬಗ್ಗೆ ದಾಖಲೆಗಳ ಸಹಿತ ಸಿಎಂ ಅಧಿಕೃತ ಕಚೇರಿಗೆ ದೂರು ಸಲ್ಲಿಸಲಾಗಿತ್ತು. ಜತೆಗೆ, ಲೋಕಾಯುಕ್ತ, ಎಸಿಬಿ, ಬಿಎಂಟಿಎಫ್​ ನಂತಹ ತನಿಖಾ ಸಂಸ್ಥೆಗಳಲ್ಲಿಯೂ ದಾಖಲೆಗಳ ಸಹಿತ ದೂರು ಸಲ್ಲಿಸಲಾಗಿದೆ. ಈ ಹಗರಣಗಳಿಗೆ ಸಂಬಧಿಸಿದಂತೆ 1,17,236 ಪುಟಗಳ ದಾಖಲೆಗಳನ್ನು ಆಯಾ ಹಗರಣಗಳನ್ನು ಬಯಲಿಗೆಳೆದ ದಿನವೇ ಸಿಎಂ ಕಚೇರಿಗೆ ತಲುಪಿಸಿ ಸ್ವೀಕೃತಿ ಪತ್ರವನ್ನು ಪಡೆದಿರುವುದಾಗಿ ಎನ್.ಆರ್.ರಮೇಶ್ ತಿಳಿಸಿದ್ದಾರೆ.
54 ಪ್ರಕರಣ ಲೋಕಾಯುಕ್ತದಲ್ಲಿ ಬಾಕಿ:
ಸಿದ್ಧರಾಮಯ್ಯ ಭಾಗಿಯಾಗಿರುವ ಹಗರಣಗಳ ಪೈಕಿ ಅವರ ರಾಜಕೀಯ ಪ್ರಭಾವವನ್ನು ಬಳಸಿ ಅಥವಾ ಅಧಿಕಾರದ ಪ್ರಭಾವಕ್ಕೆ ಒಳಗಾಗಿ ಲೋಕಾಯುಕ್ತ, ಎಸಿಬಿ, ಬಿಎಂಟಿಎಫ್​ ಪೋಲೀಸರು ಬಿ ರಿಪೋರ್ಟ್ ಸಲ್ಲಿಸಿರುತ್ತಾರೆ ಅಥವಾ 19 ಪ್ರಕರಣಗಳನ್ನು ಮುಕ್ತಾಯಗೊಳಿಸಿರುತ್ತಾರೆ. ಈ 19ರ ಪೈಕಿ 1.30 ಕೋಟಿ ರೂ. ಮೊತ್ತವನ್ನು ಚೆಕ್ ರೂಪದಲ್ಲಿ ಪಡೆದು ಸಿದ್ಧರಾಮಯ್ಯ ಆಪ್ತ ಸ್ನೇಹಿತ ಎಲ್. ವಿವೇಕಾನಂದ್‌ಗೆ ಬಿಟಿಸಿಯಲ್ಲಿ ಸ್ಟೀವರ್ಡ್ ಹುದ್ದೆಗೆ ನಿಯೋಜನೆ ಮಾಡಿರುವ ಸಂಬಂಧ ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಕಳೆದ ಫೆ.21ರಂದು ಜನಪ್ರತಿನಿಧಿಗಳ ಕೋರ್ಟ್‌ನ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. 18 ಪ್ರಕರಣಗಳಿಗೆ ಸಂಬಂಧಿಸಿ ಲೋಕಾಯುಕ್ತ, ಎಸಿಬಿ ಪೋಲೀಸರು ಬಿ ರಿಪೋಟರ್ ಸಲ್ಲಿಸಿರುವ ಪ್ರಕರಣಗಳ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಹೂಡಲಾಗಿದೆ. 54 ಪ್ರಕರಣಗಳು ಲೋಕಾಯುಕ್ತದಲ್ಲಿ ಚಾಲ್ತಿಯಲ್ಲಿವೆ ಎಂದು ಹೇಳಿದ್ದಾರೆ.
ಸಿದ್ಧರಾಮಯ್ಯ ಅವರು ನಿಜಕ್ಕೂ ಪರಿಶುದ್ಧ ರಾಜಕಾರಣಿಯೇ ಆಗಿದ್ದರೆ ಹಾಗೂ ಯಾವುದೇ ಹಗರಣದಲ್ಲಿ ಭಾಗಿಯಾಗಿರದಿದ್ದರೆ ಈ ಹಗರಣಗಳ ತನಿಖೆಯನ್ನು ಕೂಡಲೇ ಸಿಬಿಐ, ಸಿಐಡಿ ಅಥವಾ ಲೋಕಾಯುಕ್ತಕ್ಕೆ ವಹಿಸುವ ಸಂಬಂಧ ಆದೇಶ ಹೊರಡಿಸಬೇಕು ಎಂದು ಎನ್.ಆರ್. ರಮೇಶ್ ಆಗ್ರಹಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + twelve =
Remember me
