ಧಾರವಾಡ:ಎಲ್ಲಿಯೇ ಕೊಲೆಯಾದರೂ ವಿನಯ್​ ಕುಲಕರ್ಣಿ ಹೆಸರು ಹೇಳುವುದ್ಯಾಕೆ? ಎಂದು ಪತ್ನಿ ಶಿವಲೀಲಾ‌ ಕುಲಕರ್ಣಿ ಪ್ರಶ್ನೆ ಮಾಡಿದರು.
ನಿನ್ನೆ (ಏಪ್ರಿಲ್​ 25) ಧಾರವಾಡದ ಗರಗ ಗ್ರಾಮದಲ್ಲಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಿವಲೀಲಾ, ವಿನಯ್​ ಕುಲಕರ್ಣಿ ಅವರೇನು ರೌಡಿ ಶೀಟರ್ ಅಲ್ಲ ಎಂದರು.ಇದನ್ನೂ ಓದಿ:ನನ್ನ ಮೊದಲ ಗೆಳೆಯ; ‘ಅಭಿ’ ಚಿತ್ರದ ನೆನಪುಗಳ ಬುತ್ತಿ ಬಿಚ್ಚಿಟ್ಟ ನಟಿ ರಮ್ಯಾ
ಧಾರವಾಡ ಗ್ರಾಮೀಣಕ್ಕೆ ಯಾರೋ ಹೊರಗಿನವರು ಬಂದು ಅಪಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಎಲ್ಲಿಯೇ ಕೆಟ್ಟ ಕೆಲಸವಾದರೆ ಅದರ ಹಣಪಟ್ಟಿ ವಿನಯ ಕುಲಕರ್ಣಿಗೆ ಹಚ್ಚುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.
ಕಳೆದ ಐದು ವರ್ಷದಿದ ಬಿಜೆಪಿಯವರೇ ಶಾಸಕರಿದ್ದಾರೆ. ಹತ್ತು ವರ್ಷದಿಂದ ಬಿಜೆಪಿಯವರೇ ಎಂಪಿ ಇದಾರೆ. ಆದರೆ ಎಲ್ಲಿಯೇ ಕೊಲೆ ನಡೆದರೂ ವಿನಯ್​ ಕುಲಕರ್ಣಿ ಹೆಸರು ಹೇಳುವುದ್ಯಾಕೆ? ಅವರು ನಮ್ಮ ಜೊತೆಗೆ ಇರಬೇಕಿತ್ತು. ಅವರೇನು ರೌಡಿ ಶೀಟರ್ ಅಲ್ಲ ಎಂದು ಹೇಳಿದರು.ಇದನ್ನೂ ಓದಿ:ರಕ್ತದಲ್ಲಿ ಬರೆದುಕೊಡುತ್ತೇನೆ, ನಂಬಿಕೆದ್ರೋಹಿ ಶೆಟ್ಟರ್ ಗೆಲ್ಲಲು ಸಾಧ್ಯವಿಲ್ಲ, ಅವರನ್ನು ಸೋಲಿಸುವುದೊಂದೇ ಗುರಿ: ಬಿಎಸ್​ವೈ
ಅಂದಹಾಗೆ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ವಿನಯ್​ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾ ಮಾಡಿದೆ. ಬಿಜೆಪಿ ಮುಖಂಡ ಯೋಗೇಶ್​​ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಪ್ರವೇಶಿಸದಂತೆ ವಿನಯ್​ ಕುಲಕರ್ಣಿಗೆ ಸುಪ್ರೀಂ ಕೋರ್ಟ್​ ಈ ಹಿಂದೆ ನಿರ್ಬಂಧ ಹೇರಿತ್ತು.(ದಿಗ್ವಿಜಯ ನ್ಯೂಸ್​)
ಕಿವಿಯ ಕೂದಲು ಉಲ್ಲೇಖಿಸಿ ನಿರ್ಮಾಪಕನಿಗೆ ತಿರುಗೇಟು ನೀಡಿದ ಸಮಂತಾ!

ಹೊಟ್ಟೆಪಾಡಿಗಾಗಿ ಸಾಬೂನು ಮಾರಲು ಬಿಡದ ಕಾಮುಕರು: ವಿಡಿಯೋ ಮೂಲಕ ನಟಿ ಐಶ್ವರ್ಯಾ ಬೇಸರ

ಮದುವೆ ಆಗಲು ಇಷ್ಟವಿಲ್ಲ ಆದರೆ ಇದು ಓಕೆ! ಸೌಂದರ್ಯದ ಗಣಿ ಹನಿ ರೋಸ್​ ಅಚ್ಚರಿಯ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + eleven =
Remember me
