ಬೆಂಗಳೂರು:ರಾಜಧಾನಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಬೆಡ್ ಬ್ಲಾಕಿಂಗ್ ದಂಧೆಯನ್ನು ಬಯಲಿಗೆಳೆದ ಸಂಸದ-ಶಾಸಕರು ಆ ನಂತರ ಕೋವಿಡ್​ ವಾರ್​ ರೂಮ್​ಗೆ ನೇಮಿಸಲಾಗಿರುವ ಸಿಬ್ಬಂದಿಯ ಪಟ್ಟಿ ನೋಡಿ ಕೆಂಡಾಮಂಡಲವಾಗಿದ್ದಾರೆ. ಅವರನ್ನೆಲ್ಲ ನೇಮಿಸಿದ್ದು ಯಾರು, ಹೇಗೆ ನೇಮಿಸಿಕೊಳ್ಳಲಾಗಿದೆ ಎಂದು ಹೆಲ್ಪ್​ಲೈನ್ ಉಸ್ತುವಾರಿಗಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೋವಿಡ್ ವಾರ್ ರೂಮ್​ಗೆ ನೇಮಿಸಲ್ಪಟ್ಟಿರುವ 17 ಮಂದಿಯ ಪಟ್ಟಿಯಲ್ಲಿದ್ದ ಹೆಸರುಗಳನ್ನು ಸಂಸದ ತೇಜಸ್ವಿ ಸೂರ್ಯ ಓದಿದ್ದಾರೆ. ಆ ಪಟ್ಟಿಯಲ್ಲಿ ಇದ್ದ ಹೆಸರುಗಳನ್ನು ಓದಿದ ತೇಜಸ್ವಿ ಸೂರ್ಯ, ಅಲ್ಲಿ ಬರೀ ಒಂದೇ ಸಮುದಾಯಕ್ಕೆ ಸೇರಿರುವವರು ಮಾತ್ರ ಇದ್ದಿದ್ದನ್ನು ಗಮನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ, ಉದಯ್ ಗರುಡಾಚಾರ್ ಕೂಡ ದನಿಗೂಡಿಸಿದ್ದು, ನಂತರ ನಾಲ್ವರೂ ಕೆಂಡಾಮಂಡಲರಾಗಿ ಆ ಕೇಂದ್ರದ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇವರೆಲ್ಲ ಯಾರು, ಇವರನ್ನು ನೇಮಿಸಿಕೊಳ್ಳಲು ಯಾವ ಮಾನದಂಡ ಅನುಸರಿಸಲಾಗಿದೆ. ನೇಮಿಸಿಕೊಂಡಿದ್ದು ಯಾರು, ಕರೆಸಿ ಆ ಏಜೆನ್ಸಿಯವರನ್ನು ಎಂದು ತೇಜಸ್ವಿ ಸೂರ್ಯ ಗದರಿದ್ದಾರೆ. ಇದೇನು ನೀವು ಮದರಸಗೆ ಅಪಾಯಿಂಟ್ ಮಾಡಿದ್ದೀರಾ ಇಲ್ಲ ಕಾರ್ಪೋರೇಷನ್​ಗೆ? ಎಂದು ಶಾಸಕ ರವಿಸುಬ್ರಹ್ಮಣ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬರೀ ಇವರೇ ಬಿಟ್ಟರೆ ನಿಮಗೆ ಬೇರೆ ಯಾರೂ ಸಿಗಲೇ ಇಲ್ವಾ ಎಂದು ಶಾಸಕ ಸತೀಶ್ ರೆಡ್ಡಿ ಕೋಪದಿಂದಲೇ ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವೆಲ್ಲ ದೃಶ್ಯಗಳನ್ನು ಒಳಗೊಂಡಿರುವ ವಿಡಿಯೋ ತುಣುಕೊಂದು ವೈರಲ್​ ಆಗುತ್ತಿದೆ.
1. ಮನ್ಸೂರ್ ಅಲಿ2. ತಾಹಿರ್ ಅಲಿ ಖಾನ್3. ಸಾದಿಕ್ ಪಾಷಾ4. ಮೊಹಮದ್ ಜಾಯೆದ್5. ಅಸ್ಲಯಿ ಸಹೀರ್6. ಉಮೇರ್ ಖಾನ್7. ಸಲ್ಮಾನ್ ಉರಿಫ್8. ಜಮೀರ್ ಪಾಷಾ9. ಜಬೀವುಲ್ಲಾ ಖಾನ್10. ಸಯ್ಯದ್ ಹುಸೇನ್11. ಸಯೇದ್ ಶಾಹಿದ್12. ಸಯೀದ್ ಶಹಬಾಜ್13. ಮಹಮದ್ ಯೂನುಸ್14. ಸೈಯದ್ ಮೊಹಿನ್ ಷಾ15. ಸೈಯಸ್ ಮೌಯೇಷ್ ಷಾ16. ಅಲಿ ಸಾಹಿಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 2 =
Remember me
