ಬೆಂಗಳೂರು:ಕರೊನಾ ಸೋಂಕನ್ನು ತಡೆಗಟ್ಟಲು ಅತ್ಯಗತ್ಯವಾಗಿರುವ ಸಾಮಾಜಿಕ ಅಂತರದ ಅಭ್ಯಾಸವನ್ನು ಜನರಲ್ಲಿ ಮೂಡಿಸುವುದು ಹಾಗೂ ಮುಂದಿನ ಕೆಟ್ಟ ದಿನಗಳಿಗೆ ಜನರನ್ನು ಸಿದ್ಧಪಡಿಸುವುದು ಭಾನುವಾರ ದೇಶಾದ್ಯಂತ ಕರೆ ನೀಡಲಾಗಿರುವ ‘ಜನತಾ ಕರ್ಫ್ಯೂ’ ಉದ್ದೇಶ.
ಇದರ ಜತೆಗೇ, ಸಂಜೆ 5 ಗಂಟೆಗೆ ಮನೆಯ ಬಾಲ್ಕನಿಯಲ್ಲಿ ನಿಂತು ವೈದ್ಯರು, ಶುಶ್ರೂಶಕರು ಸೇರಿ ವೈದ್ಯಕೀಯ ಸಿಬ್ಬಂದಿಗೆ ಅಭಿನಂದಿಸಿ ಚಪ್ಪಾಳೆ ತಟ್ಟುವಂತೆ ಪ್ರಧಾನಿ ಕರೆ ನೀಡಿದ್ದಾರೆ. ಕರೊನಾ ಸೋಂಕು ಆವರಿಸಿದಂದಿನಿಂದ ತಮ್ಮೆಲ್ಲ ರಜೆಯನ್ನೂ ರದ್ದುಪಡಿಸಿ ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇರಾನ್​ನಲ್ಲೂ ವೈದ್ಯಕೀಯ ವ್ಯವಸ್ಥೆ ಹಾಗೂ ಸಿಬ್ಬಂದಿ ಕಡಿಮೆಯಿರುವ ಕಾರಣ ವೈದ್ಯರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಇರಾನ್​ನಲ್ಲಿ ವೈದ್ಯರ ಕೊರತೆ ಇರುವುದರಿಂದ ವೈದ್ಯೆ ಶಿರೀನ್ ರೌಹಾನಿ ಶುಶ್ರೂಶೆಯಲ್ಲಿ ತೊಡಗಿದ್ದರು. ಇದರಿಂದಾಗಿ ಸ್ವತಃ ವೈದ್ಯರಿಗೇ ಕರೊನಾ ತಗುಲಿತು. ಇದನ್ನೂ ಲೆಕ್ಕಿಸದೆ, ತಮಗೆ ಚಿಕಿತ್ಸೆ ಪಡೆಯುವ ಜತೆಗೆ ಶುಶ್ರೂಶೆಯನ್ನೂ ಮುಂದುವರಿಸಿದ್ದರು. ಆದರೆ ವೈರಾಣುವಿನ ದಾಳಿಗೆ ತುತ್ತಾಗಿ ಎರಡು ದಿನದ ಹಿಂದೆ ರೌಹಾನಿ ನಿಧನರಾಗಿದ್ದಾರೆ.
ಕರೊನಾ ಮಣಿಸೋಣ: ಜನತಾ ಕರ್ಫ್ಯೂ ಬೆಂಬಲಿಸಿ, ವೈರಸ್ ಬಡಿದೋಡಿಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
