ರಾಮನಗರ:ಒಬ್ಬರ ಜೀವ ಉಳಿಸಲು ಇನ್ನೊಬ್ಬರು ಧಾವಿಸಿ, ಕೊನೆಗೆ ಪತಿ-ಪತ್ನಿ ಇಬ್ಬರೂ ಪ್ರಾಣ ಕಳೆದುಕೊಂಡ ದುರಂತವೊಂದು ಸಂಭವಿಸಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ.
ಕೂಡ್ಲೂರು ಗ್ರಾಮದ ವೆಂಕಟೇಶ್ (48) ಮತ್ತು ಪಾರ್ವತಮ್ಮ (42) ಸಾವಿಗೀಡಾದ ದಂಪತಿ. ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಗ್ರಾಮದ ಕೆರೆಯೊಂದರಲ್ಲಿ ಇವರಿಬ್ಬರೂ ಮುಳುಗಿ ನೀರುಪಾಲಾಗಿ ಮೃತಪಟ್ಟಿದ್ದಾರೆ.
ಈ ದಂಪತಿ ಕುರಿಗಳ ಮೈ ತೊಳೆಯಲು ಕೆರೆ ಬಳಿಗೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ಪತ್ನಿ ಜಾರಿ ನೀರಲ್ಲಿ ಮುಳುಗಲಾರಂಭಿಸಿದ್ದರು. ಆಕೆಯನ್ನು ರಕ್ಷಿಸಲೆಂದು ಪತಿಯೂ ನೀರಿಗೆ ಧುಮುಕಿದ್ದು, ಬಳಿಕ ಇಬ್ಬರೂ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಶವಗಳನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಳ್ಳೆಕ್ಯಾತ ಎಂದು ಸುಳ್ಳೇ ಹೇಳಿದ್ದ ನಗರಸಭೆ ಸದಸ್ಯೆಯ ಬಂಧನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + seven =
Remember me
