ಕೋಲಾರ:ಆಕೆಯದ್ದು ಮದುವೆ ಮೀರಿದ ಪ್ರೇಮ. ತಂದೆ-ತಾಯಿ, ಗಂಡ-ಮಗಳನ್ನೂ ದಾಟಿ ಪ್ರಿಯಕರನ ಜತೆ ಎರಡನೇ ಮದುವೆಯಾಗಿದ್ದಳು. ಆದರೀಗ ಇಷ್ಟಪಟ್ಟು ಮದುವೆಯಾದ ಗಂಡನ ಜತೆ ಆಕೆಯೂ ಕೃಷಿಹೊಂಡಕ್ಕೆ ಬಿದ್ದು ಪ್ರಾಣ ಬಿಟ್ಟಿದ್ದಾಳೆ!
ಬಂಗಾರಪೇಟೆ ತಾಲೂಕಿನ ಮುಗಳಬೆಲೆ ಗ್ರಾಮದ ದಂಪತಿಯ ಪ್ರೇಮ ಕಥೆ ಶುಕ್ರವಾರ ದುರಂತ ಅಂತ್ಯ ಕಂಡಿದೆ. ಸುರೇಶ್​(28) ಮತ್ತು ರೂಪಾ(26) ಮೃತ ದಂಪತಿ. ಮಾಲೂರು ತಾಲೂಕಿನ ದ್ಯಾಪಸಂದ್ರ ಗ್ರಾಮದ ರೂಪಾ ಈ ಹಿಂದೆ ಬಂಗಾರಪೇಟೆ ತಾಲೂಕಿನ ಕಾರಹಳ್ಳಿಯ ಯುವಕನೊಂದಿಗೆ 8 ವರ್ಷದ ಹಿಂದೆ ಮದುವೆಯಾಗಿದ್ದಳು. ಈ ದಂಪತಿಗೆ ಒಂದು ಹೆಣ್ಣುಮಗು ಕೂಡ ಇತ್ತು. ಹೀಗಿರುವಾಗಲೇ ತನ್ನ ಗಂಡ ಸರಿ ಇಲ್ಲ ಎಂದು ನೊಂದುಕೊಂಡಿದ್ದ ರೂಪಾಗೆ ನಿತ್ಯ ಕೆಲಸಕ್ಕೆ ಹೋಗಿಬರುತ್ತಿದ್ದ ವೇಳೆ ರೈಲಿನಲ್ಲಿ ಮಾದಮಂಗಲ ಗ್ರಾಮದ ಗಾರೆಕೆಲಸಗಾರ ಸುರೇಶನ ಪರಿಚಯವಾಗಿತ್ತು. ಪರಿಚಯ ಪ್ರೇಮವಾಗಿ ತಿರುಗಿ, ಒಂದೂವರೆ ವರ್ಷದ ಹಿಂದೆ ಗಂಡನನ್ನು ಬಿಟ್ಟು ಬಂದ ರೂಪಾ ಸುರೇಶನೊಂದಿಗೆ ಮದುವೆಯಾಗಿದ್ದಳು.
ಕಳೆದ ಹದಿನೈದು ದಿನದ ಹಿಂದೆ ತವರು ಮನೆಗೆ ರೂಪಾ ಹೋಗಿದ್ದಳು. ಗುರುವಾರ ಮದ್ಯಾಹ್ನ ಪತ್ನಿಯನ್ನು ಕರೆದುಕೊಂಡು ಬರುವುದಾಗಿ ಹೋಗಿದ್ದ ಸುರೇಶ್​ ಕೂಡ ಮನೆಗೆ ರಾತ್ರಿ ವಾಪಸ್​ ಬಂದಿರಲಿಲ್ಲ. ಆದ್ರೆ ಶುಕ್ರವಾರ ಬೆಳಗ್ಗೆ ಮುಗಳಬೆಲೆ ಗ್ರಾಮದ ಕೃಷಿಹೊಂಡದಲ್ಲಿ ಇಬ್ಬರೂ ಒಂದೇ ವೇಲಿನಲ್ಲಿ ಕಟ್ಟಿಕೊಂಡು ಕೃಷಿಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಸುರೇಶ್​ ಮತ್ತು ರೂಪಾ ನಡುವೆ ಸಾಂಸಾರಿಕ ಜಗಳದಿಂದಾಗಿ ರೂಪಾ ತಮ್ಮ ತವರು ಮನೆಗೆ ಹೋಗಿದ್ದಳು ಎನ್ನಲಾಗಿದೆ. ಪ್ರೀತಿಸಿ ಮದುವೆಯಾದ ರೂಪಾ ಹಾಗೂ ಸುರೇಶ್ ಸರಿಯಾದ​ ಹೊಂದಾಣಿಕೆ ಇಲ್ಲದೆ, ಅಂದುಕೊಂಡಂತೆ ಬದುಕಲಾಗದೆ ಆತ್ಮಹತ್ಯೆ ಮೂಲಕ ಬದುಕಿಗೆ ವಿದಾಯ ಹೇಳಿದ್ದು ಮಾತ್ರ ದುರಂತ.
ರಾತ್ರೋರಾತ್ರಿ ಮನೆಯಲ್ಲೇ ಪತ್ನಿಯನ್ನು ಕೊಚ್ಚಿ ಹಾಕಿದ ಭೂಪ! ಮಗನ ಕೃತ್ಯಕ್ಕೆ ಬೆಚ್ಚಿದ ತಾಯಿಯೂ ಬದುಕಲಿಲ್ಲ

ನಾಲೆ ಬಳಿ ಬೈಕ್-ಚಪ್ಪಲಿ ಬಿಟ್ಟು ಹೋದ ಪ್ರೇಮಿಗಳು ಶವವಾಗಿ ಪತ್ತೆ: ಡೆತ್​ನೋಟ್​ನಲ್ಲಿತ್ತು ಯುವತಿಯ ಆಕ್ರೋಶ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 2 =
Remember me
