ಮೈಸೂರು:ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿಸಿದ್ದು, ಪ್ರಕರಣ ನಡೆದ 9 ತಿಂಗಳ ಬಳಿಕ ಇಬ್ಬರೂ ಸಿಕ್ಕಿಬಿದ್ದಿದ್ದಾರೆ. 2020ರ ಅಕ್ಟೋಬರ್​ನಲ್ಲಿ ಈ ಪ್ರಕರಣ ನಡೆದಿದ್ದು, ಇದೀಗ ಪತ್ನಿ ಉಮಾ, ಪ್ರಿಯಕರ ಅವಿನಾಶ್ ಬಂಧನಕ್ಕೊಳಗಾಗಿದ್ದಾರೆ.
ಮಂಡ್ಯ ಜಿಲ್ಲೆ ಹೊನಗಾನಹಳ್ಳಿ ಗ್ರಾಮದ ವೆಂಕಟರಾಜು (50) ಕೊಲೆಗೀಡಾಗಿದ್ದ ವ್ಯಕ್ತಿ. ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಹುಣಸಗಳ್ಳಿ ಗ್ರಾಮದಲ್ಲಿ ಈ ಕೊಲೆ ನಡೆದಿತ್ತು. ಬನ್ನೂರು ಠಾಣೆ ಪೊಲೀಸರು ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಇದನ್ನೂ ಓದಿ:ಮದುವೆಯಾಗಿದ್ದರೂ ಇನ್ನೊಬ್ಬರ ಜತೆ ಪ್ರೇಮ: ಮನೆಬಿಟ್ಟು ಬಂದವರ ಪರಿಸ್ಥಿತಿ ಗಂಭೀರ
ಶ್ರೀರಂಗಪಟ್ಟಣದ ಬಳ್ಳೆಕೆರೆ ಗ್ರಾಮದ ಉಮಾ ಹತ್ತು ವರ್ಷಗಳ ಹಿಂದೆ ವೆಂಕಟರಾಜುವನ್ನು ಮದುವೆಯಾಗಿದ್ದಳು. ಈ ದಂಪತಿಗೆ 8 ವರ್ಷದ ಹೆಣ್ಣು ಹಾಗೂ 6 ವರ್ಷದ ಗಂಡು ಮಕ್ಕಳಿದ್ದಾರೆ. ಆದರೆ ವಯಸ್ಸಿನ ಅಂತರದಿಂದಾಗಿ ಇಬ್ಬರ ಮಧ್ಯೆ ವಿರಸ ಉಂಟಾಗಿತ್ತು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಪತ್ನಿ ಉಮಾಗೆ, ಪಕ್ಕದ ಮನೆಯ ಅವಿನಾಶ್ ಪರಿಚಿತನಾಗಿದ್ದಾನೆ.
ಇದನ್ನೂ ಓದಿ:ಪ್ರವಾಸಿಗರೇ ಎಚ್ಚರ.. ಇಲ್ಲಿ ಮಾಸ್ಕ್​ ಧರಿಸದಿದ್ದರೆ 5 ಸಾವಿರ ರೂ. ದಂಡ ಇಲ್ಲವೇ 8 ದಿನ ಜೈಲುಶಿಕ್ಷೆ!
ಉಮಾ ತನ್ನ ಪ್ರಿಯಕರ ಅವಿನಾಶ್ ಜೊತೆ ಸೇರಿ ಪತಿ ವೆಂಕಟರಾಜು ಕೊಲೆಗೆ ಸಂಚು ರೂಪಿಸಿದ್ದಳು. ವೆಂಕಟರಾಜುವನ್ನು ಅವಿನಾಶ್ ಅಜ್ಜಿ ಮನೆ ಹುಣಸಗಳ್ಳಿಗೆ ಕರೆಸಿಕೊಂಡಿದ್ದು, ಕಾಫಿಯಲ್ಲಿ ನಿದ್ರೆ ಮಾತ್ರೆ ಬೆರೆಸಿ ಕುಡಿಸಿದ್ದರು. ವೆಂಕಟರಾಜು ಗಾಢನಿದ್ರಾವಸ್ಥೆಗೆ ತೆರಳಿದ್ದಾಗ ಮರ್ಮಾಂಗಕ್ಕೆ ಹಲ್ಲೆ ಮಾಡಿ, ಉಸಿರುಗಟ್ಟಿಸಿ ಸಾಯಿಸಿದ್ದರು. ನಂತರ ಸ್ವಾಭಾವಿಕ ಸಾವು ಎಂಬಂತೆ ಬಿಂಬಿಸಿದ್ದರು. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿಎಂ ಹುದ್ದೆಗೆ ಮತ್ತೆ ಕತ್ತಿ ವರಸೆ | ಮುಖ್ಯಮಂತ್ರಿ ಸ್ಥಾನ ಖಾಲಿಯಾದರೆ ನೆಕ್ಸ್ಟ್​ ನಾನೇ ಇದ್ದೇನೆ: ಸಚಿವ ಉಮೇಶ್​ ಕತ್ತಿ

ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + five =
Remember me
