ಬೆಂಗಳೂರು:ಪತಿ ಮೇಲಿನ ಸಿಟ್ಟಿಗೆ ಹೆತ್ತ ಮಗನನ್ನು ಸ್ನೇಹಿತನ ಜತೆಗೂಡಿ ತಾಯಿಯೇ ಕಿಡ್ನ್ಯಾಪ್​ ಮಾಡಿರುವ ಘಟನೆ ಬೆಂಗಳೂರು ನಗರದ ಕೆ.ಆರ್​. ಪುರಂನಲ್ಲಿ ನಡೆದಿದೆ. ಕೆಆರ್‌ ಪುರಂನ ಕ್ಯಾಸ ಗ್ರ್ಯಾಂಡ್ ರಾಯ್ಸಿ ಅಪಾರ್ಟ್​ಮೆಂಟ್​ನ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಅಪಹರಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಂದು (ಆಗಸ್ಟ್​ 02) ಬೆಳಿಗ್ಗೆ ಸಿದ್ಧಾರ್ಥ್ ತಂದೆ ಮಗುವನ್ನು ಶಾಲೆಗೆ ಬಿಡಲು ಅಪಾರ್ಟ್​​ಮೆಂಟ್​ ಮುಂಭಾಗ ನಿಂತಿದ್ದರು. ಈ ವೇಳೆ ತನ್ನ ಸ್ನೇಹಿತನೊಂದಿಗೆ ಬಂದ ತಾಯಿ ಅನುಪಮ ಸಿದ್ಧಾರ್ಥ್​ರಿಂದ ಮಗುವನ್ನು ಕಿತ್ತುಕೊಂಡು ಎಸ್ಕೇಪ್​ ಆಗಿದ್ದಾರೆ. ಮಗುವಿನ ತಾಯಿ ಅನುಪಮ ಮತ್ತು ಆತನ ಸ್ನೇಹಿತನ ವಿರುದ್ಧ ತಂದೆ ಸಿದ್ದಾರ್ಥ್​ ಪೊಲೀಸರಿಗೆ ದೂರು ನೀಡಿದ್ದಾರೆ.
2014ರಲ್ಲಿ ಮದುವೆಯಾಗಿದ್ದ ಸಿದ್ದಾರ್ಥ್​ ಹಾಗೂ ಅನುಪಮ ಆ ಬಳಿಕ ಕೌಟುಂಬಿಕ ಕಲಹದಿಂದ ವಿಚ್ಛೇದನ ಪಡೆದಿದ್ದರು. ಪತಿಯಿಂದ ದೂರಾದ ಬಳಿಕ ಅನುಪಮ ಬೇರೊಬ್ಬ ವ್ಯಕ್ತಿ ಜತೆಗೆ ಮದುವೆ ಆಗಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಮಗುವನ್ನು ಪತಿ ಸಿದ್ದಾರ್ಥ್‌ ವಶಕ್ಕೆ ಒಪ್ಪಿಸಿತ್ತು. ಆದರೆ, ಅನುಪಮ ಸ್ನೇಹಿತನ ಜತೆ ಸೇರಿ ಮಗುವನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮಗುವನ್ನು ಕಿಡ್ನ್ಯಾಪ್‌ ಮಾಡುವ ದೃಶ್ಯವು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 6 =
Remember me
