ಕೋಲಾರ:ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಗ್ರಾಮ ದೇವತೆಗೆ ಮಹಿಳೆಯೊಬ್ಬರು ಹರಕೆ ಹೊತ್ತುಕೊಂಡಿದ್ದು ದೇವಿಗೆ ಬರೆದ ಪತ್ರದಲ್ಲಿ, ಗಂಡನನ್ನು ಶಾಸಕನನ್ನಾಗಿ ಮಾಡು ಎಂದು ಬೇಡಿಕೊಂಡಿದ್ದಾರೆ.
ಮಾಲೂರು ಬಿಜೆಪಿ ಟಿಕೆಟ್ ಆಕಾಂಕ್ಷಿ ಹೂಡಿ ವಿಜಯ್ ಕುಮಾರ್ ಅವರ ಪತ್ನಿ ಶ್ವೇತಾ, ಮಾರಿಕಾಂಬಾ ದೇವಿಗೆ ಹರಕೆ ಹೊತ್ತಿದ್ದಾರೆ. ಮಾರಿಕಾಂಬಾ ದೇವಿಗೆ ಭಕ್ತಿಯಿಂದ ಹರಕೆ ಹೊತ್ತಾರೆ ಎಲ್ಲವೂ ನೆರವೇರುತ್ತೆ ಅನ್ನುವ ಪ್ರತೀತಿ ಇರುವ ಕಾರಣ ಶ್ವೇತಾ ಈ ರೀತಿ ಪತ್ರ ಮುಖೇನ ಹರಕೆ ಹೊತ್ತುಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಶ್ವೇತಾ, ನೂರಾರು ಮಹಿಳೆಯರಿಗೆ ಅರಿಶಿನ-ಕುಂಕುಮ, ಹಾಗೂ ಸೀರೆ ನೀಡಿದ್ದಾರೆ. ಅದಲ್ಲದೇ ಸೊಣ್ಣಪ್ಪನಹಟ್ಟಿ ಗ್ರಾಮದಲ್ಲಿ ಬಯಲುಭಸವೇಶ್ವರ ಸ್ವಾಮಿಗೆ ಹರಕೆ ಹೊತ್ತ ಇವರು ಪತಿಗೆ ಮಾಲೂರು ತಾಲೂಕಿನ ಜನರ ಸೇವೆ ಮಾಡುವ ಅವಕಾಶ ಕರುಣಿಸಿ ಎಂದು ಬಾಳೆ ಹಣ್ಣಿನ ಮೇಲೆ ಬರೆದು ತೇರಿನ ಮೇಲೆ ಶ್ವೇತಾ ಹೂಡ ವಿಜಯ್ ಕುಮಾರ್ ಎಸೆದಿದ್ದಾರೆ. ಹೀಗೆ ಮಾಡುವುದರಿಂದ ಅಂದುಕೊಂಡದ್ದು ನಡೆಯುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 9 =
Remember me
