ಬೆಳಗಾವಿ:ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯೊಬ್ಬನ ಪಾರ್ಥಿವ ಶರೀರಕ್ಕೆ ಹೆಗಲು ಕೊಡಲು ಸಂಬಂಧಿಕರಾಗಲಿ, ಅಕ್ಕಪಕ್ಕದ ಮನೆಯವರಾಗಲಿ.. ಯಾರೊಬ್ಬರೂ ಬರಲಿಲ್ಲ. ಕೊನೆಗೆ ಮೃತನ ಪತ್ನಿಯೇ ತಳ್ಳುವ ಗಾಡಿಯಲ್ಲಿ ಶವ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಕರುಣಾಜಕ ಘಟನೆ ಇಂದು(ಶುಕ್ರವಾರ) ಅಥಣಿ ನಗರದಲ್ಲಿ ಸಂಭವಿಸಿದೆ.
ಅಥಣಿಯ ಬಸ್​ ನಿಲ್ದಾಣ ಸಮೀಪದ ಅಂಬೇಡ್ಕರ್​ ಕಾಲನಿ ನಿವಾಸಿ ಸದಾಶಿವ ಹಿರಟ್ಟಿ (55) ಮೃತರು. ಆಸ್ಪತ್ರೆಯೊಂದರ ಮುಂಭಾಗ ಅನೇಕ ವರ್ಷಗಳಿಂದ ಪಾದರಕ್ಷೆ ಹೊಲಿಯುತ್ತ ಕುಟುಂಬ ನಿರ್ವಹಣೆ ನಡೆಸುತ್ತಿದ್ದ ಸದಾಶಿವ ಹಿರಟ್ಟಿ ಕ್ಷಯ ರೋಗದಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ(ಗುರುವಾರ) ಮನೆಯಲ್ಲಿ ಮಲಗಿದ್ದಲ್ಲೇ ಅವರು ಮೃತಪಟ್ಟಿದ್ದರು.
ಇದನ್ನೂ ಓದಿರಿಡ್ರೋನ್​ ಪ್ರತಾಪ್​ ವಿರುದ್ಧ ಡಿಜಿಪಿ, ಪೊಲೀಸ್ ಕಮಿಷನರ್​ಗೆ ದೂರು
ಕರೊನಾ ಸೋಂಕಿನ ಭೀತಿಯಿಂದ ಅಕ್ಕಪಕ್ಕದವರು ಮತ್ತು ಸಂಬಂಧಿಕರು ಸದಾಶಿವ ಹಿರಟ್ಟಿಯ ಅಂತ್ಯಸಂಸ್ಕಾರ ನೆರವೇರಿಸಲು ಆಗಮಿಸಿರಲಿಲ್ಲ. ಆದರೂ ಧೃತಿಗೆಡದ ಸದಾಶಿವ ಅವರ ಪತ್ನಿ, ಪತಿಯ ಶವವನ್ನು ಬಟ್ಟೆಯಲ್ಲಿ ಸುತ್ತಿದರು. ತನ್ನ 14 ವರ್ಷದ ಮಗ ಹಾಗೂ ಇನ್ನೊಬ್ಬರ ಸಹಾಯದಿಂದ ತಳ್ಳುವ ಗಾಡಿಯಲ್ಲಿ ಶವ ಸಾಗಿಸಿ, ಗಂಡನ ಅಂತ್ಯಸಂಸ್ಕಾರ ನೆರವೇರಿಸಿದರು.
ತಳ್ಳುವ ಗಾಡಿಯಲ್ಲಿ ಪತಿಯ ಶವ ಸಾಗಿಸುತ್ತ ಅದರ ಹಿಂದಿಂದೆ ಪತ್ನಿ ಓಡುತ್ತಿದ್ದ ದೃಶ್ಯ ಮನಕಲಕುವಂತಿದೆ. ಮಾನವೀಯತೆ ಸತ್ತು ಹೋಗಿದೆಯಾ ಎಂಬ ಪ್ರಶ್ನೆ ಕಾಡುತ್ತದೆ. ಸಂಸ್ಕಾರಕ್ಕೂ ಹೆಗಲಿಲ್ಲದೆ ತಳ್ಳುವ ಗಾಡಿಯಲ್ಲಿ ಗಂಡನ ಶವ ಸಾಗಿಸಿ ಒಬ್ಬಳೇ ಅಂತ್ಯಸಂಸ್ಕಾರ ಮಾಡುವಂತಹ ದುಸ್ಥಿತಿಗೆ ದೂಡಿದ ಕರೊನಾ ಭೀತಿ ನಿಜಕ್ಕೂ ಭೀಕರ.
ಇದನ್ನೂ ಓದಿರಿvideo/ ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ…’ ಹಾಡಿಗೆ ಕುಣಿದು ಕುಪ್ಪಳಿದ ಕರೊನಾ ಸೋಂಕಿತರು
https://www.facebook.com/VVani4U/videos/567828487228695/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + one =
Remember me
