ಮೈಸೂರು:ಮದುವೆ ಆದರೂ ಪ್ರೇಯಸಿ ಮೇಲಿನ ಮೋಹ ಕಡಿಮೆ ಮಾಡಿಕೊಳ್ಳದ ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನೇ ಕೊಂದ ಘಟನೆ ಮೈಸೂರಿನ ಜಯನಗರದ ಚಿನ್ನಗಿರಿ ಕೊಪ್ಪಲಿನಲ್ಲಿ ಸಂಭವಿಸಿದೆ.
ರಾಘವೇಂದ್ರನ ಪತ್ನಿ ಕೀರ್ತನಾ(19) ಮೃತ ದುರ್ದೈವಿ. ಆರೋಪಿ ರಾಘವೇಂದ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಘವೇಂದ್ರಗೆ ಮದುವೆಗೂ ಮುನ್ನ ಸುಂದರಿ ಎಂಬ ಮಹಿಳೆ ಜತೆ ಅಕ್ರಮ ಸಂಬಂಧ ಇತ್ತು. ಒಂದು ವರ್ಷದ ಹಿಂದೆ ಚಾಮರಾಜನಗರ ಮೂಲದ ಕೀರ್ತನಾಳ ಮದುವೆ ಆಗಿದ್ದ ರಾಘವೇಂದ್ರಗೆ, ಪ್ರೇಯಸಿ ಮೇಲಿನ ಮೋಹ ಕಡಿಮೆ ಆಗಿರಲಿಲ್ಲ.ಇದನ್ನೂ ಓದಿರಿನಾಯಿ ಮೇಲೆ ಅತ್ಯಾಚಾರ! ಬೆಚ್ಚಿಬೀಳಿಸುತ್ತೆ ಮೈಸೂರಲ್ಲಿ ಕಾಮುಕನ ಪೈಶಾಚಿಕ ಕೃತ್ಯ
ಮದುವೆ ನಂತರವೂ ರಾಘವೇಂದ್ರ ಅಕ್ರಮ ಸಂಬಂಧ ಮುಂದುವರಿಸಿದ್ದ. ಇಬ್ಬರ ಖಾಸಗಿ ವಿಡಿಯೋವನ್ನು ತನ್ನ ಪತ್ನಿ ಕೀರ್ತನಾಗೆ ತೋರಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಇಂದು ಏಕಾಏಕಿ ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಾಘವೇಂದ್ರ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದ. ಆದರೆ, ರಾಘವೇಂದ್ರನಿಗೆ ಅಕ್ರಮ ಸಂಬಂಧ ಇರುವುದ ತಿಳಿದಿದ್ದ ನೆರೆಹೊರೆಯವರು ಇದು ಕೊಲೆ ಎಂದು ಶಂಕಿಸಿದ್ದಾರೆ.
ಇದೀಗಮೃತಳ ಕುಟುಂಬಸ್ಥರು ರಾಘವೇಂದ್ರನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಗರ್ಭಿಣಿ ಪತ್ನಿಯ ಕಪಾಳಕ್ಕೆ ಹೊಡೆದು ವೇಲ್‌ನಿಂದ ಕುತ್ತಿಗೆ ಬಿಗಿದು ಕೊಂದಿರುವ ಆರೋಪ ಕೇಳಿಬಂದಿದೆ. ಮೈಸೂರಿನ ಅಶೋಕಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕೊಳೆತ ಸ್ಥಿತಿಯಲ್ಲಿ ಪ್ರೇಮಿಗಳ ಶವ ಮರದಲ್ಲೇ ನೇತಾಡುತ್ತಿತ್ತು! ಬೆಚ್ಚಿಬಿದ್ದ ಸ್ಥಳೀಯರು

ನಾಯಿ ಮೇಲೆ ಅತ್ಯಾಚಾರ! ಬೆಚ್ಚಿಬೀಳಿಸುತ್ತೆ ಮೈಸೂರಲ್ಲಿ ಕಾಮುಕನ ಪೈಶಾಚಿಕ ಕೃತ್ಯ

3 ಮಕ್ಕಳ ತಾಯಿ ಜತೆ ಯುವಕನ ಕಾಮಪುರಾಣ: ತ್ರೀಕೋನ ವಿವಾಹೇತರ ಸಂಬಂಧಕ್ಕೆ ಇಬ್ಬರು ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − seven =
Remember me
