ಬೆಂಗಳೂರು:ಚಿಕನ್ ಫ್ರೈ ಸರಿಯಾಗಿ ಮಾಡಿಲ್ಲ ಎಂದು ಸಿಟ್ಟಾದ ಗಂಡ, ಹೆಂಡತಿಯನ್ನು ಕೊಂದಿದ್ದಲ್ಲದೆ ಆಕೆಯ ಶವವನ್ನು ಮೂಟೆ ಕಟ್ಟಿ ಕೆರೆಗೆ ಎಸೆದ ಪ್ರಕರಣವೊಂದು ವರದಿಯಾಗಿದೆ. ಬೆಂಗಳೂರು ಉತ್ತರ ತಾಲೂಕಿನ ತರಬನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪತಿ ಮುಬಾರಕ್ (32) ಈ ಕೃತ್ಯವೆಸಗಿದ್ದು, ಪತ್ನಿ ಶಿರಿನ್​ ಬಾನು (25) ಕೊಲೆಯಾದಾಕೆ. ಆರೋಪಿ ಪತಿ ಮೂರು ದಿನಗಳ ಹಿಂದೆ ವಕೀಲರ ಮೂಲಕ ಪೊಲೀಸ್​ ಠಾಣೆಯಲ್ಲಿ ಶರಣಾಗಿದ್ದು, ತಾನೇ ಪತ್ನಿಯನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಹಾಸಿಗೆ ವ್ಯಾಪಾರ ಮಾಡಿಕೊಂಡಿರುವ ಆರೋಪಿ ಮುಬಾರಕ್​, ಎರಡು ವರ್ಷಗಳ ಹಿಂದೆ ದಾವಣಗೆರೆಯಿಂದ ಬೆಂಗಳೂರಿಗೆ ಬಂದು ತರಬನಹಳ್ಳಿಯಲ್ಲಿ ನೆಲೆಸಿ ಜೀವನ ಸಾಗಿಸುತ್ತಿದ್ದ.
ಇದನ್ನೂ ಓದಿ:‘ರಾಣಿ’ಯನ್ನು ಕೊಂದು ಹೂತಿಟ್ಟ ಭೂಪ; ದೇವಸ್ಥಾನದಲ್ಲೂ ಕದ್ದು ಸಿಕ್ಕಿಬಿದ್ದ; ಇಂದು ಆಕೆಯ ಶವ ಹೊರತೆಗೆದ ಪೊಲೀಸರು..
ದೊಣ್ಣೆಯಿಂದ ಹೊಡೆದು ಹೆಂಡತಿಯನ್ನು ಹತ್ಯೆ ಮಾಡಿದ್ದಲ್ಲದೆ ಆಕೆಯ ಶವವನ್ನು ಚಿಕ್ಕಬಾಣಾವರ ಕೆರೆಗೆ ಕೊಂಡೊಯ್ದು ಎಸೆದಿದ್ದಾನೆ. ಪುತ್ರಿ 20 ದಿನಗಳಿಂದ ಕಾಣೆಯಾಗಿದ್ದಳು ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಶವವನ್ನು ಬೈಕ್​ನಲ್ಲಿ ಸಾಗಿಸಿ ಕೆರೆಗೆ ಎಸೆಯಲಾಗಿದೆ ಎಂಬ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಸೋಲದೇವನಹಳ್ಳಿ ಪೊಲೀಸರು ಶವದ ಹುಡುಕಾಟಕ್ಕೆ ಸಜ್ಜಾಗಿದ್ದಾರೆ.
ದೇಶಾದ್ಯಂತ ನಡೆಯುತ್ತಾ ಜಾತಿ ಆಧಾರಿತ ಜನಗಣತಿ?; ಪ್ರಧಾನಿಯನ್ನು ಭೇಟಿ ಆಗಿ ಚರ್ಚಿಸಿದರು 11 ಪಕ್ಷಗಳ ಮುಖಂಡರು

ಚಿತ್ರನಟಿಗೆ ಮನೆಯಲ್ಲೇ ತಾಳಿ ಕಟ್ಟಿ ಗಂಡನಂತೆ ನಟಿಸಿದ; ಬಳಿಕ ನಗ-ನಗದಿನೊಂದಿಗೆ ಪರಾರಿಯಾದ ರೌಡಿಯ ಅಣ್ಣ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
