ಬೆಂಗಳೂರು:ವಿಧಾನ ಪರಿಷತ್ತಿಗೆ ಸ್ಪರ್ಧಿಸಿರುವ ಟಿ.ಎನ್.ಜವರಾಯಿಗೌಡ ಗಿಂತ ಪತ್ನಿ ಟಿ.ಎ.ಗಾಯತ್ರಿ ಅವರು ಹೆಚ್ಚು ಆಸ್ತಿ ಹೊಂದಿದ್ದಾರೆ.
ಜವರಾಯಿಗೌಡ ಕೃಷಿ ಜಮೀನು, ಕೃಷಿಯೇತರ ಜಮೀನು, ವಾಣಿಜ್ಯ ಕಟ್ಟಡ, ವಸತಿ ಕಟ್ಟಡ, ನಿವೇಶನ ಸೇರಿದಂತೆ 64.40 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದರೆ, ಪತ್ನಿ ಗಾಯತ್ರಿ 106.72 ಕೋಟಿ ರೂ. ಬೆಲೆ ಬಾಳುವ ಆಸ್ತಿ ಹೊಂದಿದ್ದಾರೆ.
ಜವಾಯಿಗೌಡ ಕುಟುಂಬದ ಹೆಸರಿನಲ್ಲಿ 6.08 ಕೋಟಿ ರೂ. ಹಾಗೂ ಪಾಲುದಾರ ಸಂಸ್ಥೆ ಸಂತೋಷ್ ಎಂಟರ್ ಪ್ರೈಸಸ್‌ನ ಹೆಸರಿನಲ್ಲಿ 17.32 ಕೋಟಿ ರೂ. ಸ್ಥಿರಾಸ್ತಿ ಇದೆ.
ಜವರಾಯಿಗೌಡ 2.20 ಲಕ್ಷ ರೂ. ನಗದು, ಪತ್ನಿ 1,96 ಲಕ್ಷ ರೂ. ನಗದು ಕುಟುಂಬದ ಬಳಿ 2.29 ಲಕ್ಷ ರೂ. ನಗದು ಹಾಗೂ ಪಾಲುದಾರ ಸಂಸ್ಥೆಯಲ್ಲಿ 2,99 ಲಕ್ಷ ರೂ. ನಗದು ಇರುವುದಾಗಿ ನಾಮಪತ್ರದ ಜತೆ ಲಗತ್ತಿಸಿರುವ ಅಫಿಡೆವಿಟ್‌ನಲ್ಲಿ ೋಷಿಸಿದ್ದಾರೆ.
ಜವಾಯಿಗೌಡ 21.22 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ಹೊಂದಿದ್ದರೆ, ಪತ್ನಿ ಗಾಯತ್ರಿ 2.67 ಕೋಟಿ ರೂ. ಮೌಲ್ಯದ ಚಿನ್ನ ಹೊಂದಿದ್ದಾರೆ. ಜವರಾಯಿಗೌಡ 95 ಲಕ್ಷ ರೂ.ಬೆಲೆಯ ಮರ್ಸಿಡಿಸ್ ಬೆಂಜ್ , ಟಾಟಾ ಹಾಗೂ ಇನ್ನೋವಾ ಕಾರು ಹೊಂದಿದ್ದಾರೆ.ಹೊಣೆಗಾರಿಕೆ: ವಿವಿಧ ಬ್ಯಾಂಕ್‌ಗಳಲ್ಲಿ ಜವರಾಯಿಗೌಡ 19.47 ಕೋಟಿ ರೂ. ಹೊಣೆಗಾರಿಕೆ ಹೊಂದಿದ್ದರೆ, ಅವರ ಪತ್ನಿ ಗಾಯತ್ರಿ 33.30 ಕೋಟಿ ಹಾಗೂ ಕುಟುಂಬ 7.40 ಕೋಟಿ ಹಾಗೂ ಪಾಲುದಾರ ಸಂಸ್ಥೆ 13.64 ಕೋಟಿ ರೂ. ಹೊಣೆಗಾರಿಕೆಯನ್ನು ಹೊಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 7 =
Remember me
