ತುಮಕೂರು:ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಗೃಹಿಣಿಯೊಬ್ಬರು ರಾಜಿ ಮಾಡಿಸಿದ ಬಳಿಕವೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ.
ಗುಬ್ಬಿ ತಾಲೂಕಿನ ಸಂಪಿಗೆ ಮೂಲದ ಚೈತ್ರಾ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಚಿಕ್ಕನಾಯಕನಹಳ್ಳಿಯ ದೀಲಿಪ್ ಎಂಬಾತನನ್ನು 9 ವರ್ಷಗಳ ಹಿಂದೆ ಚೈತ್ರಾ ಮದುವೆಯಾಗಿದ್ದು, ಈ ದಂಪತಿಗೆ 7 ವರ್ಷದ ಮಗಳಿದ್ದಾಳೆ.
ಗಂಡ-ಹೆಂಡತಿಯ ಮಧ್ಯೆ ಆಗಾಗ ಜಗಳವಾಗುತ್ತಿದ್ದು, ಈ ಬಗ್ಗೆ ದೀಲಿಪ್ ಕುಟುಂಬಸ್ಥರ ಜೊತೆ ಇತ್ತೀಚೆಗೆ ಮಾತನಾಡಿದ್ದ ಚೈತ್ರಾ ಕುಟುಂಬಸ್ಥರು ರಾಜಿ ಮಾಡಿಸಿದ್ದರು. ಅದಾಗ್ಯೂ ಎರಡು ದಿನಗಳ ಹಿಂದೆ ದಂಪತಿ ಮಧ್ಯೆ ಮತ್ತೆ ಜಗಳವಾಗಿದೆ. ಇದರಿಂದ ತೀವ್ರವಾಗಿ ನೊಂದ ಚೈತ್ರಾ, ಪತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ:ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವಕನ ಮನೆಗೇ ಬೆಂಕಿ ಇಟ್ಟು ಧ್ವಂಸ!
ಗಂಡನ ಮನೆಯವರು ತಮ್ಮ ಮಗಳಿಗೆ ಮಾನಸಿಕ ಕಿರುಕುಳ ಕೊಟ್ಟು ಕೊಲೆ ಮಾಡಿದ್ದಾರೆಂದು ಆರೋಪಿಸಿ, ಚೈತ್ರಾ ಪಾಲಕರು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚೈತ್ರಾಳ ಪತಿ ದೀಲಿಪ್ ಹಾಗೂ ಅತ್ತೆ ಗಾಯತ್ರಮ್ಮ ಅವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಮತ್ತೊಂದು ಪಿಎಸ್​ಐ ನೇಮಕಾತಿಯಲ್ಲೂ ಅಕ್ರಮ?; ಇಲ್ಲೂ ದಿವ್ಯಾ ಹಾಗರಗಿ ಕೈವಾಡ!

ರಾಜಸ್ಥಾನ ಪೊಲೀಸರ ಮನಗೆದ್ದ ‘ಕೆಜಿಎಫ್​-2’ ‘ವಯಲೆನ್ಸ್​’!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 15 =
Remember me
