ಹಾಸನ:ಅನುಮಾನ ಮಿತಿ ಮೀರಿದ್ರೆ ಏನೆಲ್ಲ ಅವಾಂತರ ಸೃಷ್ಟಿಯಾಗುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಇಲ್ಲೊಬ್ಬ ಭೂಪ ರಾತ್ರೋರಾತ್ರಿ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಇತ್ತ ಏನೂ ಅರಿಯದ ಪುಟ್ಟ ಬಾಲಕ ಅನಾಥವಾಗಿದ್ದಾನೆ.
ಚನ್ನರಾಯಪಟ್ಟಣ ತಾಲೂಕಿನ ರಾಚೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ದುರ್ಘಟನೆಯಲ್ಲಿ ಪೂಜಾ(25) ಮೃತಪಟ್ಟಿದ್ದಾಳೆ. ಕೊಲೆ ಆರೋಪಿ ಗಂಗಾಧರ್(28) ತಲೆಮರೆಸಿಕೊಂಡಿದ್ದಾನೆ.
ಹೊಳೆನರಸೀಪುರದ ಕುರಬರಹಳ್ಳಿಯ ನಿಂಗೇಗೌಡ ಹಾಗೂ ಸಾವಿತ್ರಿ ದಂಪತಿಯ ಪೂಜಾಳ ಮದುವೆ 2014ರಲ್ಲಿ ಚನ್ನರಾಯಪಟ್ಟಣ ತಾಲೂಕಿನ ರಾಚೇನಹಳ್ಳಿಯ ಗಂಗಾಧರ ಎಂಬಾತನೊಂದಿಗೆ ಆಗಿತ್ತು. ಈ ದಂಪತಿಗೆ ಸುಮಾರು 5 ವರ್ಷದ ಗಂಡು ಮಗು ಇದೆ. ಮಂಗಳವಾರ ರಾತ್ರಿ ರಾಚೇನಹಳ್ಳಿಯಲ್ಲಿ ಹೆಂಡತಿಯನ್ನೇ ಮಚ್ಚಿನಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದ ಗಂಗಾಧರ್​ ತಲೆ ಮರೆಸಿಕೊಂಡಿದ್ದ.
ಗಂಗಾಧರ್​ಗೆ ಪತ್ನಿ ಪೂಜಾಳ ಮೇಲೆ ಅನುಮಾನ ಇತ್ತು. ಆಕೆ ಯಾರ ಜತೆ ಮಾತನಾಡಿರೂ ಅನುಮಾನಿಸಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ನನ್ನ ಅಕ್ಕನಿಗೆ ಭಾವ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಅವಳು ಯಾವುದೇ ಗಂಡಸರ ಜತೆ ಮಾತನಾಡಿದರೂ ಅನುಮಾನಗೊಂಡು‌ ಹಿಂಸೆ ನೀಡುತ್ತಿದ್ದ ಎಂದು ಮೃತ ಪೂಜಾಳ ತಂಗಿ ಪೂರ್ಣಿಮ ಆರೊಪ ಮಾಡಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.
ರಾತ್ರೋರಾತ್ರಿ ಮನೆಯಲ್ಲೇ ಪತ್ನಿಯನ್ನು ಕೊಚ್ಚಿ ಹಾಕಿದ ಭೂಪ! ಮಗನ ಕೃತ್ಯಕ್ಕೆ ಬೆಚ್ಚಿದ ತಾಯಿಯೂ ಬದುಕಲಿಲ್ಲ

ತಂಗಿ ಗಂಡನಿಂದಲೇ ನಡೆಯಿತು ಘೋರ ಕೃತ್ಯ, ರಕ್ತದ ಮಡುವಲ್ಲಿ ಒದ್ದಾಡುತ್ತಾ ಪ್ರಾಣಬಿಟ್ಟ ಅತ್ತಿಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
