ಶಿವಮೊಗ್ಗ:ಮಾವನ ಜತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಸೊಸೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈಕೆಯ ಗಂಡನೇ ಕೊಲೆ ಮಾಡಿದ್ದು, ರಕ್ತದ ಮಡುವಿನಲ್ಲಿ ಒದ್ದಾಡುತ್ತಾ ಪ್ರಾಣಬಿಟ್ಟಿದ್ದಾಳೆ.
ಇಲ್ಲಿನ ಮಲ್ಲಿಕಾರ್ಜುನ ನಗರದಲ್ಲಿ ಭಾನುವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಫಾತಿಮಾ (24) ಮೃತಪಟ್ಟಿದ್ದಾಳೆ. ಗುಜರಿ ವ್ಯಾಪಾರಿ ಸೈಯದ್​ ಫರ್ವೇಜ್​ (26) ಜತೆ 5 ವರ್ಷದ ಹಿಂದೆ ಫಾತಿಮಾಳ ಮದುವೆ ಆಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಫಾತಿಮಾಳ ತವರು ಮನೆಯಲ್ಲೇ ದಂಪತಿ ವಾಸವಿದ್ದರು.
ಈ ನಡುವೆ ಫಾತಿಮಾಳ ಮನೆಗೆ ಸೈಯದ್​ನ ತಂದೆ ಬಂದು ಹೋಗುತ್ತಿದ್ದ. ಮಗ ಕೆಲಸಕ್ಕೆ ಹೋದ ಸಮಯದಲ್ಲಿ ಮಾವ–ಸೊಸೆ ನಡುವೆ ಸಲುಗೆ ಬೆಳೆದು ಅಕ್ರಮ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ. ಈ ಬಗ್ಗೆ ಅಕ್ಕಪಕ್ಕದವರು ಸೈಯದ್​ ಗಮನಕ್ಕೆ ತಂದಿದ್ದರು. ಪತ್ನಿ ಮೇಲೆ ಅನುಮಾನಗೊಂಡ ಸೈಯದ್​ ನಿಗಾ ಇರಿಸಿದ್ದ. ಅಲ್ಲದೆ ತನ್ನ ತಂದೆ ಜತೆಗಿನ ಸಲುಗೆ ನಿಲ್ಲಿಸುವಂತೆಯೂ ಬುದ್ಧಿ ಹೇಳಿದ್ದ. ಆದರೂ ಆಕೆ ಕೇಳಿರಲಿಲ್ಲ ಎನ್ನಲಾಗಿದೆ.
ಇದೇ ವಿಚಾರವಾಗಿ ಕುಪಿತಗೊಂಡ ಸೈಯದ್​ ಭಾನುವಾರ ರಾತ್ರಿ ಚಾಕುವಿನಿಂದ ಫಾತಿಮಾಗೆ ಇರಿದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು 2 ಗಂಟೆಯೊಳಗೆ ತುಂಗಾ ನಗರ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಕ್ಕನ ಮನೆಗೆ ಬಾರದ ಬಾವ, ಸಿಟ್ಟಿಗೆದ್ದ ಬಾಮೈದ ಮಹಿಳೆಯನ್ನು ಕೊಂದುಬಿಟ್ಟ!

ತನ್ನದೇ ಸೆಕ್ಸ್​ ವಿಡಿಯೋ ಮಾರುತ್ತಿದ್ದ ಬಸ್​ ಕಂಡಕ್ಟರ್​! ಪರಸ್ತ್ರೀಯರೊಂದಿಗೂ ಲೈಂಗಿಕ ಸಂಪರ್ಕ, 65 ವಿಡಿಯೋ ವಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − three =
Remember me
