ಬೆಂಗಳೂರು:ಕೌಟುಂಬಿಕ ಕಲಹಕ್ಕೆ ಪತ್ನಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪತಿಯೇ ಕೊಲೆ ಮಾಡಿದ್ದಾನೆ. ಟಿ.ಸಿ. ಪಾಳ್ಯದ ನಿವಾಸಿ ನ್ಯಾನ್ಸಿ ಪ್ಲೇರಾ (30) ಮೃತ ಗೃಹಿಣಿ. ಈಕೆಯ ಪತಿ ಜಾನ್ ಸುಪ್ರೀತ್ (34) ಎಂಬಾತನನ್ನು ಬಂಧಿಸಲಾಗಿದೆ ಎಂದು ವೈಟ್‌ಫೀಲ್ಡ್ ವಿಭಾಗ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ಚಿತ್ರದುರ್ಗ ಮೂಲದ ಜಾನ್ ಸುಪ್ರೀತ್, 10 ವರ್ಷಗಳ ಹಿಂದೆ ನ್ಯಾನ್ಸಿಯನ್ನು ಪ್ರೀತಿಸಿ ಮದುವೆ ಆಗಿದ್ದು, ಈ ದಂಪತಿಗೆ 6 ಮತ್ತು 8 ವರ್ಷದ ಗಂಡು ಮಕ್ಕಳು ಇದ್ದಾರೆ. ಟಿ.ಸಿ.ಪಾಳ್ಯದಲ್ಲಿ ಎರಡು ಅಂತಸ್ತಿನ ಮನೆಯಲ್ಲಿ ನೆಲ ಮಹಡಿಯಲ್ಲಿ ಜಾನ್ ಪಾಲಕರು ನೆಲೆಸಿದ್ದರೆ, ಮೊದಲ ಮಹಡಿಯಲ್ಲಿ ಜಾನ್ ದಂಪತಿ ಇದ್ದರು. ಕೆ.ಆರ್.ಪುರದಲ್ಲಿ ಜಾನ್ ಸುಪ್ರೀತ್ ಶಾಮಿಯಾನ ಅಂಗಡಿ ನಡೆಸುತ್ತಿದ್ದು, ನ್ಯಾನ್ಸಿ ಗೃಹಿಣಿ ಆಗಿದ್ದರು.
ಕೆಲವು ತಿಂಗಳಿಂದ ದಂಪತಿ ನಡುವೆ ಜಗಳ ನಡೆಯುತ್ತಿದ್ದವು. ಪತ್ನಿಯ ಶೀಲ ಶಂಕಿಸಿ ಜಗಳ ಮಾಡುತ್ತಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಹಿರಿಯರು ರಾಜಿ ಸಂಧಾನ ನಡೆಸಿದ್ದರು. ಆದರೂ ಪ್ರಯೋಜನ ಆಗಿರಲಿಲ್ಲ. ಮಂಗಳವಾರ ಸಹ ದಂಪತಿ ನಡುವೆ ಜಗಳವಾಗಿದೆ. ಶಾಲೆಗೆ ಹೋಗಿದ್ದ ಮಕ್ಕಳು ನೆಲ ಮಹಡಿಯಲ್ಲಿ ತಾತ-ಅಜ್ಜಿಯ ಮನೆಯಲ್ಲಿ ಇದ್ದರು.
ಸಂಜೆ 6 ಗಂಟೆಗೆ ಮಚ್ಚು ತೆಗೆದುಕೊಂಡು ಬಂದ ಜಾನ್ ಸುಪ್ರೀತ್, ಏಕಾಏಕಿ ಮನೆಗೆ ಹೋಗಿ ಪತ್ನಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಚೀರಾಟ ಕೇಳಿ ಮನೆಗೆ ಹೋದಾಗ ಕೊಲೆ ಪ್ರಕರಣ ಗೊತ್ತಾಗಿದೆ. ವಿಷಯ ತಿಳಿದ ಕೆ.ಆರ್.ಪುರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆ.ಆರ್.ಪುರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
‘ಗರ್ಲ್​ ನಂ. 166’ ಗ್ರೇಟ್ ಎಸ್ಕೇಪ್​: 7ನೇ ವಯಸ್ಸಲ್ಲಿ ನಾಪತ್ತೆ, ಹದಿನಾರನೇ ವಯಸ್ಸಲ್ಲಿ ಮನೆಗೆ ಬಂದ್ಲು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 13 =
Remember me
