ಬೆಂಗಳೂರು:ಮಾರತ್ತಳ್ಳಿ ಠಾಣಾ ವ್ಯಾಪ್ತಿಯ ಮುನ್ನೇಕೊಳಲುನಲ್ಲಿ ಮಂಗಳವಾರ ತಡರಾತ್ರಿ ಮನೆಯಲ್ಲಿ ಮಲಗಿದ್ದ ಗೃಹಿಣಿಯೊಬ್ಬರು ಭೀಕರ ಹತ್ಯೆಗೀಡಾಗಿದ್ದು, ಕೊಲೆ ರಹಸ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ.
ಆಂಧ್ರಪದೇಶದ ಚಿತ್ತೂರು ಮೂಲದ ನಾಗೇಶ್​ನ ಪತ್ನಿ ಸಂಧ್ಯಾ ಕೊಲೆಯಾದ ದುರ್ಧೈವಿ. ಆಕೆಯನ್ನು ಕತ್ತು ಕೊಯ್ದು, ತಲೆ ಮೇಲೆ ಸಿಮೆಂಟ್​ ಹಿಟ್ಟಿಗೆ ಎತ್ತಿಹಾಕಿ ಭೀಕರವಾಗಿ ಕೊಂದಿದ್ದು, ಪ್ರಾಥಮಿಕ ತನಿಖೆ ವೇಳೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಕೆಲವೇ ಗಂಟೆಯಲ್ಲಿ ಪ್ರಕರಣ ಭೇದಿಸಿದ ಪೊಲೀಸರೇ ಕೊಲೆಯ ರಹಸ್ಯ ಕೇಳಿ ಬೆಚ್ಚಿಬಿದ್ದಿದ್ದಾರೆ. ಸಂಧ್ಯಾಳ ಗಂಡನೇ ಆಕೆಯನ್ನು ಕೊಂದಿದ್ದಾನೆ. ಪೊಲೀಸರ ದಾರಿ ತಪ್ಪಿಸಲು ಸಂಧ್ಯಾಳನ್ನು ಯಾರೋ ಅತ್ಯಾಚಾರ ಮಾಡಿ ಕೊಂದಂತೆ ಮೃತದೇಹದ ಬಟ್ಟೆ ಹರಿದು, ಸ್ಥಳದಲ್ಲಿ ಮಧ್ಯದ ಬಾಟಲಿ ಹಾಗೂ ಪ್ಲಾಸ್ಟಿಕ್ ಲೋಟ ತಂದಿಟ್ಟು ಊರಿಗೆ ಎಸ್ಕೇಪ್ ಆಗಿದ್ದ. ಅಷ್ಟಕ್ಕೂ ಕೈಹಿಡಿದ ಪತ್ನಿಯನ್ನೇ ಅಮಾನುಷವಾಗಿ ಕೊಂದದ್ದು ಯಾಕೆ ಗೊತ್ತಾ?
ಇದನ್ನೂ ಓದಿರಿಬೆಂಗಳೂರಲ್ಲಿ ವಿದೇಶಿಗರಿದ್ದ 35 ಮನೆಗಳ ಮೇಲೆ ರಾತ್ರೋರಾತ್ರಿ ಸಿಸಿಬಿ ರೇಡ್​… ಬೆಚ್ಚಿ ಬೀಳಿಸುತ್ತೆ ಅಲ್ಲಿನ ಅಕ್ರಮ
ಪತ್ನಿ ಕೊಲೆಗೆ ಸಂಚು:ಸಂಧ್ಯಾಳ ಗಂಡ ನಾಗೇಶನಿಗೆ ವಿಧೆವೆಯೊಬ್ಬಳ ಜೊತೆ ಅಕ್ರಮ ಸಂಬಂಧವಿತ್ತು. ಇದೇ ವಿಚಾರವಾಗಿ ಹೆಂಡತಿಯೊಂದಿಗೆ ನಿತ್ಯ ಜಗಳವಾಗುತ್ತಿತ್ತು. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿರುವ ಹೆಂಡತಿಯನ್ನೇ ಮುಗಿಸಲು ಸಂಚುರೂಪಿಸಿದ್ದ ನಾಗೇಶ, ಕೊಲೆ ಹಿಂದಿನ ದಿನವೇ ಊರಿಗೆ ಹೋಗುವುದಾಗಿ ಹೆಂಡತಿಗೆ ಹೇಳಿದ್ದ. ಅದರಂತೆ ತಾಯಿಯೊಂದಿಗೆ ಊರಿಗೆ ಹೊರಟಿದ್ದ. ನಂತರ ಮಾರ್ಗಮಧ್ಯೆ ಇಳಿದ ಆತ, ತಾಯಿಯನ್ನ ಊರಿಗೆ ಕಳುಹಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದ. ಮಧ್ಯರಾತ್ರಿ ಮನೆಗೆ ಬಂದ ನಾಗೇಶ, ನಿದ್ರೆಯಲ್ಲಿದ್ದ ಹೆಂಡತಿ ತಲೆ ಮೇಲೆ ಸಿಮೆಂಟ್ ಹಿಟ್ಟಿಗೆ ಎತ್ತಾಕಿ, ಚಾಕುವಿನಿಂದ ಕತ್ತು ಕೊಯ್ದು ಕೊಂದಿದ್ದ. ಯಾರೋ ಅತ್ಯಾಚಾರವೆಸಗಿ ಕೊಂದಂತೆ ಸೃಷ್ಟಿಸಲು ಮೃತ ದೇಹದ ಬಟ್ಟೆಯನ್ನೆಲ್ಲ ಹರಿದು ಊರಿಗೆ ಎಸ್ಕೇಪ್ ಆಗಿದ್ದ.
ಬುಧವಾರ ಬೆಳಗ್ಗೆ ಮಕ್ಕಳು ನಿದ್ರೆಯಿಂದ ಎಚ್ಚರವಾದಾಗ ಸಂಧ್ಯಾ ಕೊಲೆಯಾಗಿರುವುದು ಗೊತ್ತಾಗಿದೆ. ತನಗೇನೂ ಗೊತ್ತಿಲ್ಲದಂತೆ ನಾಟಕ ಮಾಡುತ್ತಿದ್ದ ನಾಗೇಶನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಾಯಿಬಿಟ್ಟಿದ್ದಾನೆ. ವಿಧವೆಯೊಬ್ಬಳ ಜೊತೆ ಅಕ್ರಮ ಸಂಬಂಧವಿದ್ದು, ಇದಕ್ಕೆ ಅಡ್ಡಿಯಾಗಿದ್ದ ಹೆಂಡತಿಯನ್ನು ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.
ಹಳೇ ಲವ್​ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 9 =
Remember me
