ಬಾಗಲಕೋಟೆ:ಗಂಡ ಬೇಕು.. ನನಗೆ ಗಂಡ ಬೇಕೇಬೇಕು, ನನಗೆ ಅನ್ಯಾಯ ಆಗಿದೆ.. ನ್ಯಾಯ ಬೇಕು ಎನ್ನುತ್ತ ತನ್ನ ಪುಟ್ಟ ಮಗಳೊಂದಿಗೆ ವಿಜಯಪುರ ಜಿಲ್ಲೆ ಗುಣಕಿಬೊಮ್ಮನಳ್ಳಿ ಗ್ರಾಮದ ನಿವಾಸಿ ಮಹಿಳೆಯೊಬ್ಬರು ಬನಹಟ್ಟಿ ಪಟ್ಟಣದ ಮುಪಗಾರ ಗಲ್ಲಿಯಲ್ಲಿ ಧರಣಿಗೆ ಕುಳಿತಿದ್ದಾರೆ.
ಧರಣಿ ಕೂತ ಮಹಿಳೆ ವಿದ್ಯಾ ಶಿಂದೋಳಿಮಠ. ಅತ್ತೆ ಸೊಸೆ ಜಗಳದಿಂದ ಆರು ತಿಂಗಳ ಹಿಂದೆ ವಿದ್ಯಾ ತವರು ಮನೆಗೆ ಹೋಗಿದ್ದಳು. ಬಳಿಕ ಗಂಡನೂ ಆಕೆಯನ್ನು ವಾಪಸ್​ ಕರೆದಿಲ್ಲ. ಕೊನೆಗೆ ಮನೆಗೆ ಬರುವೆ ಎಂದರೂ ಆತ ಒಪ್ಪಿಲ್ಲ. ಬೇರೆ ದಾರಿಕಾಣದ ಆಕೆ ತನ್ನ ತಂದೆ ಮತ್ತು ಚಿಕ್ಕ ಮಗಳೊಂದಿಗೆ ಗಂಡನ ಮನೆಗೆ ಗುರುವಾರ ಬೆಳಗ್ಗೆ ಬಂದಿದ್ದಾಳೆ.
ಇದನ್ನೂ ಓದಿರಿಹಸುಗೂಸನ್ನು ಬಾಳೆಎಲೆಯಲ್ಲಿ ಸುತ್ತಿ ಹೋಟೆಲ್​ನ ಕಸದ ತೊಟ್ಟಿಯಲ್ಲಿ ಎಸೆದರು!
ಪತ್ನಿ ವಿದ್ಯಾ ಬರುವ ವಿಷಯ ತಿಳಿಯುತ್ತಿದ್ದಂತೆ ಮನೆಗೆ ಬೀಗ ಹಾಕಿಕೊಂಡು ಆಕೆಯ ಪತಿ ಮತ್ತು ಕುಟುಂಬಸ್ಥರು ಹೊರಹೋಗಿದ್ದಾರೆ. ಗಂಡನ ಜತೆಯಲ್ಲೇ ಬಾಳಬೇಕು. ನನಗೆ ಅನ್ಯಾಯ ಆಗುತ್ತಿದೆ… ನ್ಯಾಯ ಕೊಡಿಸಿ ಎಂದು ಗೋಗರೆಯುತ್ತ ವಿದ್ಯಾ, ಗಂಡನ ಮನೆ ಬಾಗಿಲ ಮುಂದೆ ಕುಳಿತು ಧರಣಿ ನಡೆಸಿದರು. ಮಧ್ಯಾಹ್ನವಾದರೂ ಗಂಡ ಸ್ಥಳಕ್ಕೆ ಬಾರಲೇ ಇಲ್ಲ. ಪಟ್ಟು ಬಿಡದೆ ಕುಳಿತ ಆಕೆ ಧರಣಿ ಮುಂದುವರಿಸಿದ್ದಾಳೆ.
ಬೆಂಗಳೂರಿನಲ್ಲಿ ಗಲಭೆ ಕುರಿತು ಜಮೀರ್​ ಅಹ್ಮದ್​ ಸರಣಿ ಟ್ವೀಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + fourteen =
Remember me
