ಶಿವಮೊಗ್ಗ:ಮೂರು ವರ್ಷದ ಮುದ್ದಾದ ಮಗು, ಇಚ್ಛೆಯನರಿತು ನಡೆಯುವ ಪತ್ನಿ, ಸ್ವರ್ಗಕ್ಕೆ ಕಿಚ್ಚು ಹಚ್ಚುವಂಥ ಸುಖಿ ಕುಟುಂಬ. ಅವನಿಗೆ ಜರ್ಮನಿಯಲ್ಲಿ ಉತ್ತಮ ಉದ್ಯೋಗ. ಪುತ್ರನ ಜತೆ ಬೆಂಗಳೂರಿನಲ್ಲಿ ನೆಲೆಸಿರುವ ಪತ್ನಿ ಹರಿಣಿ 8 ತಿಂಗಳ ಹಿಂದಷ್ಟೇ ಜರ್ಮನಿಗೆ ತೆರಳಿ ಬದುಕು ರೂಪಿಸಿಕೊಂಡಿದ್ದ ಪತಿಯ ಬಳಿಗೆ ಕೆಲವೇ ದಿನಗಳಲ್ಲಿ ಹೋಗುವ ತಯಾರಿ ನಡೆಸಿದ್ದರು.
ಆದರೆ ಹರಿಣಿಗೆ ಕ್ಯಾನ್ಸರ್ ಇರುವುದು 3 ವಾರಗಳ ಹಿಂದೆ ಗೊತ್ತಾಗಿದೆ. ಪತ್ನಿಯನ್ನು ನೋಡಲು ಭಾರತಕ್ಕೆ ಬರಬೇಕು ಎಂದರೆ ವಿಮಾನ ಸಂಚಾರ ರದ್ದಾಗಿದೆ. ಅಲ್ಲಿಂದಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತಿರುವ ಪತಿ, ಜರ್ಮನಿಯ ಎಲ್ಲ ಕಾನ್ಸೊಲೇಟ್​ಗಳನ್ನು ಸಂರ್ಪಸಿ ಭಾರತಕ್ಕೆ ಹೋಗಲು ವಿಶೇಷ ವಿಮಾನಗಳ ವ್ಯವಸ್ಥೆ ಇದೆಯಾ ಎಂದು ಕೇಳುತ್ತಿದ್ದಾರೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ವಿಮಾನ ಸಂಚಾರ ಯಾವಾಗ ಆರಂಭವಾಗಲಿದೆಯೋ ಗೊತ್ತಿಲ್ಲ.
ಇದು ಬೆಂಗಳೂರಿನ ಇಂಜಿನಿಯರ್ ಹರ್ಷ ಅವರ ಕರುಣಾಜನಕ ಕತೆ. (ದಂಪತಿ ಹೆಸರು ಬದಲಿಸಲಾಗಿದೆ) ಸೆಪ್ಟೆಂಬರ್​ನಲ್ಲಿ ಜರ್ಮನಿಗೆ ತೆರಳಿದ್ದ ಹರ್ಷ, 2 ತಿಂಗಳ ನಂತರ ಅಲ್ಲಿ ಉದ್ಯೋಗ ಪಡೆದಿದ್ದು, ಇನ್ನೇನು ಪತ್ನಿ-ಪುತ್ರನನ್ನು ಜರ್ಮನಿಗೆ ಕರೆಸಿಕೊಳ್ಳಬೇಕಂತಿದ್ದರು.
ಜರ್ಮನಿಗೆ ತೆರಳುವ ಮುನ್ನ ಸಹಜ ಎನ್ನುವಂತೆ ಹರ್ಷ ಪತ್ನಿಯ ಹೆಲ್ತ್ ಚೆಕಪ್ ಮಾಡಿಸಿದ್ದರು. ಆಗ ಕ್ಯಾನ್ಸರ್​ನ ಲಕ್ಷಣಗಳು ಕಂಡು ಬಂದಿರಲಿಲ್ಲ. ಆದರೆ 3 ವಾರಗಳ ಹಿಂದೆ ಹರಿಣಿ ಅನಾರೋಗ್ಯದ ಕಾರಣ ಆಸ್ಪತ್ರೆಗೆ ತೆರಳಿದಾಗ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಒಂದು ಬಾರಿ ಕಿಮೋಥೆರಪಿ ಮಾಡಿದ ವೈದ್ಯರು, 4 ದಿನಗಳ ಹಿಂದೆ ಶಿವಮೊಗ್ಗದಲ್ಲೇ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇನ್ನು 2 ಕಿಮೋಥೆರಪಿಗೆ ಬೆಂಗಳೂರಿಗೆ ಹೋಗಲೇಬೇಕು, ಉಳಿದಂತೆ ಶಿವಮೊಗ್ಗದಲ್ಲೇ ಕಿಮೋಥೆರಪಿ ಮಾಡಬಹುದು. ಆರಂಭಿಕ ಹಂತವಾಗಿರುವುದರಿಂದ ಸಮಸ್ಯೆ ಇಲ್ಲ ಎಂದು ವೈದ್ಯರು ಭರವಸೆ ನೀಡಿದ್ದಾರೆ.
ಲಾಕ್​ಡೌನ್ ಕಾರಣ ಆಸ್ಪತ್ರೆಗೆ ಹೋಗಿ ಬರುವುದೇ ಸಮಸ್ಯೆ. ಆಸ್ಪತ್ರೆಗೆ ತೆರಳುವಾಗ ನಾಲ್ಕಾರು ಕಡೆ ತಡೆಯುವ ಪೊಲೀಸರಿಗೆ ಕಿಮೋಥೆರಪಿ ಆದ ಲಕ್ಷಣ ತೋರಿಸಿ, ಆರೋಗ್ಯದ ಸಮಸ್ಯೆ ಇದೆ ಎಂದು ವಿವರಿಸಿ ಹೋಗಬೇಕಾಗಿದೆ. ದಂಪತಿಯಲ್ಲಿ ಯಾರಿಗೇ ಅನಾರೋಗ್ಯ ಕಾಡಿದರೂ ಸಂಗಾತಿ ಸಮೀಪದಲ್ಲಿದ್ದರೆ ಏನೋ ಸಮಾಧಾನ. ಹೀಗಾಗಿ ಹರ್ಷ ಭಾರತಕ್ಕೆ ಮರಳಲು ಎಷ್ಟೆಲ್ಲ ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗುತ್ತಿಲ್ಲ.
ತನ್ನವರು ಯಾರೂ ಇಲ್ಲ: ಹರ್ಷ ಕಣ್ಣು ಬಿಡುವ ವೇಳೆಗೆ ಅವರ ತಂದೆ ಕಣ್ಣು ಮುಚ್ಚಿದ್ದರು. ಸರ್ಕಾರಿ ಉದ್ಯೋಗಿ ಆಗಿದ್ದ ತಾಯಿ ಅನಾರೋಗ್ಯದಿಂದ ಅಕಾಲ ಮರಣಕ್ಕೆ ತುತ್ತಾಗಿದ್ದಾರೆ. ಒಡಹುಟ್ಟಿದವರು ಯಾರೂ ಇರದ್ದರಿಂದ ಈಗ ತನ್ನವರು ಎನ್ನುವವರು ಪತ್ನಿ-ಪುತ್ರ ಮಾತ್ರ.
ಇನ್ನೂ 8 ಕಿಮೋಥೆರಪಿ
ಕರೊನಾ ಸೋಂಕು ಎಲ್ಲೆಡೆ ಹರಡಿರುವುದರಿಂದ ಶಸ್ತ್ರಚಿಕಿತ್ಸೆ ಸಮಯದಲ್ಲಿ ತುಂಬಾ ಎಚ್ಚರಿಕೆ ವಹಿಸುವ ಅಗತ್ಯವಿದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಿದ ವೈದ್ಯರು ಶಿವಮೊಗ್ಗದಲ್ಲಿ ಕಡಿಮೆ ರೋಗಿಗಳು ಇರುವ, ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ನಾಲ್ಕು ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದ್ದು, ಮನೆಗೆ ಕಳುಹಿಸಲಾಗಿದೆ. ಸಕಾಲಿಕವಾಗಿ ಚಿಕಿತ್ಸೆ ಲಭಿಸಿರುವುದರಿಂದ ಸಮಸ್ಯೆ ಇಲ್ಲ. ಎಂಟು ಕಿಮೋಥೆರಪಿಗಳಾದರೆ ಅವರು ಕ್ಯಾನ್ಸರ್​ನಿಂದ ಗುಣಮುಖರಾಗಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಮೊಸಳೆ ದವಡೆಗೆ ಸಿಲುಕಿದ್ದ ಮಗನನ್ನು ರಕ್ಷಿಸಲು ಪ್ರಾಣ ಪಣಕ್ಕಿಟ್ಟು ಕಾದಾಡಿದ ತಾಯಿ: ಮುಂದೇನಾಯ್ತು ಗೊತ್ತಾ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 7 =
Remember me
