ಬೆಂಗಳೂರು:ಮನೆಯ ಕೆಲಸದ ಆಳಿನ ಜತೆ ಸೇರಿ ಪತ್ನಿಯೇ ಪತಿಯ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆ ಆರು ತಿಂಗಳ ಹಿಂದೆಯೇ ನಡೆದಿದ್ದು, ಇದೀಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ:ಬಸ್ಸು ಲೇಟಾಗಿದ್ದರಿಂದ ಶಾಲೆಗೆ ತಡವಾಗುತ್ತಿದೆ ಎಂದು ದೂರಿತ್ತ ವಿದ್ಯಾರ್ಥಿ; ಆಮೇಲೆ ಆಗಿದ್ದಕ್ಕೆ ಪ್ರಶಂಸೆಯ ಸುರಿಮಳೆ
ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿಯಲ್ಲಿ ಇಂತಹ ಘಟನೆ ನಡೆದಿದೆ. ಶಿವಲಿಂಗಯ್ಯ(46) ಪತ್ನಿ ಶೋಭ (44) ಜತೆ ಜೀವನ ನಡೆಸುತ್ತಿದ್ದ. ಅವರ ಮನೆಯಲ್ಲಿ ರಾಮ (45) ಹೆಸರಿನ ವ್ಯಕ್ತಿ ಕೆಲಸದ ಆಳಾಗಿ ದುಡಿಯುತ್ತಿದ್ದ. ಜೂನ್​ 1ರಂದು ರಾಮ ಮತ್ತು ಶೋಭ ಇಬ್ಬರೂ ಜತೆಯಾಗಿ ಶಿವಲಿಂಗಯ್ಯನನ್ನು ಕೊಲೆ ಮಾಡಿದ್ದಾರೆ. ಅದಾದ ನಂತರ ಕೊಲೆ ವಿಚಾರ ಯಾರಿಗೂ ತಿಳಿಯಬಾರದೆಂದು ಮೃತ ದೇಹವನ್ನ ಕಸದ ರಾಶಿಯಲ್ಲಿ ಹೂತ್ತಿಟ್ಟಿದ್ದಾರೆ.
ಶಿವಲಿಂಗಯ್ಯ ಸಾಕಷ್ಟು ದಿನದಿಂದ ಕಾಣದ್ದನ್ನು ಗಮನಿಸಿದ ತಮ್ಮ ಪುಟ್ಟರಾಜು, ನವೆಂಬರ್​ನಲ್ಲಿ ಪೊಲೀಸ್​ ಠಾಣೆಯಲ್ಲಿ ಅಣ್ಣ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾನೆ. ನಾಪತ್ತೆ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರಿಗೆ ಶೋಭ ಮೇಲೆ ಅನುಮಾನ ಬಂದಿದ್ದು, ತನಿಖೆ ನಡೆಸಿದಾಗ ನಿಜಾಂಶ ಹೊರಬಿದ್ದಿದೆ. ಕೊಲೆ ಮಾಡಿದ್ದನ್ನು ಶೋಭ ಮತ್ತು ರಾಮ ಒಪ್ಪಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ವಾಟ್ಸ್​ಆ್ಯಪ್​ ಪ್ರೈವೇಟ್​ ಗ್ರೂಪ್​ ಸೇರೋಕೆ ಗೂಗಲ್​ನಲ್ಲೇ ಲಿಂಕ್​! ತಪ್ಪು ಮಾಡಿ ತಿದ್ದಿಕೊಂಡ ವಾಟ್ಸ್​ಆ್ಯಪ್​
ರಾಮ ಮತ್ತು ಶೋಭ ನಡುವೆ ಅಕ್ರಮ ಸಂಬಂಧವಿದ್ದು, ಅದೇ ಕಾರಣಕ್ಕೆ ಈ ಕೊಲೆ ಮಾಡಲಾಗಿದೆ ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ. (ದಿಗ್ವಿಜಯ ನ್ಯೂಸ್​)
ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × four =
Remember me
