ಚಾಮರಾಜನಗರ: ಕಾಡಂಚಿನ ಗ್ರಾಮಗಳಲ್ಲಿ ವನ್ಯಪ್ರಾಣಿಗಳ ದಾಳಿ ತಪ್ಪಿಸಲು ಎಷ್ಟೆಲ್ಲಾ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ ಜನರ ಜೀವಗಳಿಗೆ “ಗ್ಯಾರಂಟಿ” ಸಿಗುತ್ತಿಲ್ಲ. ಕತ್ತಲಿನ ಕಾರಣಕ್ಕೆ ದಾಳಿ ಮಾಡೋ‌ ಕಾಡು ಪ್ರಾಣಿ ಯಾವುದು ಎಂದು ತಿಳಿದುಕೊಳ್ಳೋಕೂ ಆಗುತ್ತಿಲ್ಲ.
ಹನೂರು ತಾಲೂಕಿನ, ಬಿಆರ್ ಟಿ ಅರಣ್ಯ ಸಮೀಪದ ಕಗ್ಗಲಿಗುಂಡಿ ಗ್ರಾಮದಲ್ಲಿ ನಡೆದಿರುವ ಅವಘಡ ಇದಕ್ಕೆ ಸಾಕ್ಷಿ. ಸೋಮವಾರ ರಾತ್ರಿ ರಾಮು ಮತ್ತು ಲಲಿತ ಮನೆ ಮುಂದೆ ಕುಳಿತಿದ್ದರು. ಇಲ್ಲೇ ಮೊಬೈಲ್​​​ನಲ್ಲಿ ಗೇಮ್ ಆಡುತ್ತಾ ಕುಳಿತ್ತಿದ್ದ ಸುಶೀಲಾ(6) ಮೇಲೆ‌ ಕಾಡು ಪ್ರಾಣಿಯೊಂದು ದಾಳಿ ಮಾಡಿದೆ.‌ ಕತ್ತಲಿದ್ದ‌ ಕಾರಣ ದಾಳಿ‌ ಮಾಡಿದ್ದು ಹುಲಿಯೋ ಅಥವಾ ಚಿರತೆಯೋ ಎನ್ನುವುದು ಗೊತ್ತಾಗಿಲ್ಲ. ಮಗು ಮೇಲೆ‌ ಪ್ರಾಣಿ ಎರಗಿದ್ದನ್ನು ಗಾಬರಿಯಿಂದ ಕಂಡ ಅಪ್ಪ-ಅಮ್ಮ ಚೀರಾಡಿದ್ದಾರೆ.‌‌ ಸದ್ದು ಕೇಳಿ ನೆರೆಹೊರೆವರು ಓಡಿ ಬಂದಿದ್ದಾರೆ.‌
ಇದನ್ನೂ ಓದಿ:ಬಡ ಮಹಿಳೆಗೆ ಸ್ವತಃ ಶಸ್ತ್ರಚಿಕಿತ್ಸೆ ಮಾಡಿ, ಮಾನವೀಯತೆ ಮೆರೆದ ಕುಣಿಗಲ್ ಶಾಸಕ ಡಾ.ರಂಗನಾಥ್
ಬಾಲಕಿಯನ್ನು ಎಳೆದೊಯ್ಯಲು ಯತ್ನಿಸಿದ‌ ಕಾಡು ಪ್ರಾಣಿ ಕಂದಕದ ಬಳಿ ಜಿಗಿದಿದೆ. ಬಾಲಕಿ ಕೆಳಕ್ಕೆ ಬಿದ್ದಿದ್ದಾಳೆ. ಪ್ರಾಣ ಉಳಿದುಕೊಂಡಿದೆ. ಕಾಡು ಪ್ರಾಣಿ‌‌ ಸ್ಥಳದಿಂದ‌‌ ಪರಾರಿಯಾಗಿದೆ. ತಕ್ಷಣ ಬಾಲಕಿಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಸೇರಿಸಲಾಗಿದೆ.
ದವಡೆ ಮೂಳೆ ಮುರಿದಿದೆ :ನನ್ನ ಮಗಳ ಮೇಲೆ ಹುಲಿ, ಚಿರತೆ ಗಾತ್ರದ ಪ್ರಾಣಿಯೊಂದು ದಾಳಿ‌ ಮಾಡಿತು. ಅದು ಯಾವ ಪ್ರಾಣಿ ಅನ್ನೋದು ಗಾಬರಿಯಲ್ಲಿ ಗೊತ್ತಾಗಲಿಲ್ಲ. ಮಗುವಿನ ಕತ್ತಿಗೆಗೆ ಬಾಯಿ ಹಾಕಿರೋದರಿಂದ ದವಡೆ ಮುರಿದಿದೆ. ಕತ್ತಿನ ಕೆಳಗೆ ಗಾಯಗಳಾಗಿವೆ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕೆಂದು ತಿಳಿಸಿದ್ದಾರೆ ಎಂದು ಬಾಲಕಿ ಸುಶೀಲಾ ತಂದೆ ರಾಮು ವಿಜಯವಾಣಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಮೊಮ್ಮಗನ ಮೃತದೇಹದೊಂದಿಗೆ 10 ದಿನಗಳಿಂದ ವಾಸವಾಗಿದ್ದ ಅಜ್ಜಿ..!
ಗ್ರಾಮಸ್ಥರಿಗೆ ಭಯದ ಜತೆ ಗೊಂದಲ:ದಾಳಿ ಮಾಡಿದ ಪ್ರಾಣಿ ಹುಲಿಯೋ ಅಥವಾ ಚಿರತೆಯೋ ಅನ್ನು ಗೊಂದಲದಲ್ಲಿ ಗ್ರಾಮಸ್ಥರಿದ್ದಾರೆ. ಕೆಲವರು ಚಿರತೆ ಎಂದರೆ, ಮತ್ತೆ‌‌ ಕೆಲವರು ಹುಲಿ ಎಂದು ವಾದ ಮಾಡುತ್ತಿದ್ದಾರೆ. ವನ್ಯಪ್ರಾಣಿ ದಾಳಿ ಇಡೀ ಗ್ರಾಮಸ್ಥರಲ್ಲಿ ತಲ್ಲಣ ಸೃಷ್ಟಿಸಿದೆ.‌ ಜಮೀನುಗಳಿಗೆ ಹೋಗುವುದಿರಲಿ‌ ಮನೆ ಮುಂದೆ ಕೂರುವುದಕ್ಕೂ ಹೆದರುತ್ತಿದ್ದಾರೆ.
PHOTOS | ಕಲಾವಿದನ ಕೈಯಲ್ಲಿ ತಯಾರಾಯ್ತು ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಕಲಾಕೃತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 8 =
Remember me
