ಮಂಡ್ಯ:ಮನುಷ್ಯನ ವಿಕೃತ ಸನ್ನಿವೇಶಗಳನ್ನು ಸೃಷ್ಟಿಸುತ್ತಿರುವ ಪರಿಣಾಮ ವನ್ಯಜೀವಿಗಳು ನಾಡಿನತ್ತ ಬರುವಂತಾಗಿವೆ ಎಂದು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಪ್ರಭಾರ ನಿರ್ದೇಶಕ ಡಾ.ಹರೀಶ್ ಹೇಳಿದರು.ನಗರದ ರೈತ ಸಭಾಂಗಣದ ಎದುರಿನ ನಿತ್ಯಸಚಿವ ಕೆ.ವಿ.ಶಂಕರಗೌಡ ಪ್ರತಿಮೆ ಬಳಿ ರೋಟರಿ 3190ರ ಸಹಕಾರದಲ್ಲಿ ಅಂತಾರಾಷ್ಟ್ರೀಯ ಫೆಲೋಶಿಪ್ ಆಫ್ ಸೈಕಲಿಂಗ್ ರೋಟರಿಯನ್(ಐಎಪ್‌ಸಿಆರ್) ಸದಸ್ಯರಿಂದ ವನ್ಯಜೀವಿ ಸಂರಕ್ಷಣೆ ಹಾಗೂ ಕೋವಿಡ್-19ರ ಬಗ್ಗೆ ಜಾಗೃತಿ ಮೂಡಿಸಲು ಮಂಡ್ಯ ನಗರದಿಂದ ಬಂಡಿಪುರದವರೆಗೆ ಹಮ್ಮಿಕೊಂಡಿರುವ ಸೈಕಲ್ ಜಾಥಾಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.ಕಾಡಿನ ಪ್ರಾಣಿಗಳು ನಾಡಿನತ್ತ ಮುಖಮಾಡಿವೆ. ಇದಕ್ಕೆ ಕಾರಣ ಮನುಷ್ಯರೇ ಆಗಿದ್ದಾರೆ. ಅರಣ್ಯದಲ್ಲಿ ನೀರು, ಆಹಾರ ಸಿಗದಂತೆ ಸೃಷ್ಟಿಸುತ್ತಿದ್ದಾರೆ. ಹೀಗಾದರೆ ಪ್ರಾಣಿಗಳು ಬದುಕಲಿಕ್ಕೆ ಇನ್ನೇಲಿಗೆ ಹೋಗುತ್ತವೆ. ನಾಡಿನತ್ತಲೇ ಬರುತ್ತಿವೆ ಎಂದರು.ಐಎಪ್‌ಸಿಆರ್ ಅಧ್ಯಕ್ಷ ಗಣಪತಿ, ರೋಟರಿ ಅಧ್ಯಕ್ಷ ಲೋಕೇಶ್, ಮಾಜಿ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ಪ್ರತೀಕ್, ನಿವೃತ್ತ ದೈಹಿಕ ತರಬೇತುದಾರ ಶಿವಲಿಂಗಯ್ಯ, ರೋಟರಿ ಪದಾಧಿಕಾರಿಗಳಾದ ಮಹೇಂದ್ರಬಾಬು, ಆನಂತಕುಮಾರ್, ಶಂಕರ ನಾರಾಯಣಶಾಸ್ತ್ರಿ, ಸೋಮಶೇಖರ್, ಸೂರಜ್, ಲಕ್ಷ್ಮೀ ನಾರಾಯಣ್ ಇತರರಿದ್ದರು.ಜಗದೀಶ್, ವಿನ್ಸಂಟ್, ಪ್ರದೀಪ್, ಶುಭಾ, ಸೋಮಶೇಖರ್, ಅರ್ಚನಾ, ಶ್ರೀಪಾದ್, ಶ್ರೀಕುಮಾರ್ ಅವರು ಬೈಸಿಕಲ್ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಂಡೀಪುರಕ್ಕೆ ತೆರಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
