ನವದೆಹಲಿ:ನಮ್ಮ ದೇಶ ಇದೀಗ ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಇರುವ ದೇಶವಾಗಿ ಹೊರಹೊಮ್ಮಿದ್ದು ಜನರ ವಾಸಕ್ಕಾಗಿ ಜಾಗದ ಕೊರತೆ ಉಂಟಾಗುವ ಸಾಧ್ಯತೆ ಇದ್ದು ಜನ ದಟ್ಟಣೆಯನ್ನೂ ಕಡಿಮೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಎಂಟು ಹೊಸ ನಗರಗಳ ಅಭಿವೃದ್ಧಿಯ ವಿಚಾರನ್ನು ಪರಿಗಣಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ಜಿ20 ಘಟಕದ ನಿರ್ದೇಶಕ ಎಂ.ಬಿ.ಸಿಂಗ್, 15ನೇ ಹಣಕಾಸು ಆಯೋಗ, ತನ್ನ ವರದಿಯೊಂದರಲ್ಲಿ ಹೊಸ ನಗರಗಳ ಅಭಿವೃದ್ಧಿಗೆ ಶಿಫಾರಸು ಮಾಡಿದೆ” ಎಂದು ಗುರುವಾರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಯಾರು ಈ ಸೆಹರ್​ ಶಿನ್ವಾರಿ? ಪ್ರಧಾನಿ ಮೋದಿ ವಿರುದ್ಧ ಮಾತನಾಡಿ ಮಂಗಳಾರತಿ ಮಾಡಿಸಿಕೊಂಡ ನಟಿ
ಹಣಕಾಸು ಆಯೋಗದ ಸಲಹೆಯ ಮೇರೆಗೆ ರಾಜ್ಯಗಳು 26 ಹೊಸ ನಗರಗಳನ್ನು ರಚಿಸಲು ಕೇಂದ್ರಕ್ಕೆ ಪ್ರಸ್ತಾವನೆಗಳನ್ನು ಕಳುಹಿದ್ದವು. ಈ ಪ್ರಸ್ತಾವನೆಗಳನ್ನು ಪರಿಶೀಲಿಸಿದ ನಂತರ ಎಂಟು ಹೊಸ ನಗರಗಳ ಅಭಿವೃದ್ಧಿಯನ್ನು ಅಂತಿಮಗೊಳಿಸಲಾಗಿದ್ದು ಅವುಗಳ ಸ್ಥಳಗಳು ಮತ್ತು ಅಭಿವೃದ್ಧಿ ಸಮಯವನ್ನು ಕೇಂದ್ರ ಸರ್ಕಾರವು ಪ್ರಕಟಿಸಲಿದೆ ಎಂದು ಎಂ.ಬಿ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ 9 ವರ್ಷ; ದೇಶದಾದ್ಯಂತ ವಿಶೇಷ ಅಭಿಯಾನ ನಡೆಸಲು ಮುಂದಾದ ಬಿಜೆಪಿ
ಅಸ್ತಿತ್ವದಲ್ಲಿರುವ ನಗರಗಳು ಜನರ ಅಗತ್ಯಗಳನ್ನು ಒಂದೇ ಜಾಗದಲ್ಲಿ ಪೂರೈಸಲು ಸಾಧ್ಯವಾಗದ ಕಾರಣ ದೇಶದಲ್ಲಿ ಹೊಸ ನಗರಗಳನ್ನು ನಿರ್ಮಿಸುವ ಅಗತ್ಯವನ್ನು ಒತ್ತಿ ಹೇಳಿದ ಸಿಂಗ್, “ಅಸ್ತಿತ್ವದಲ್ಲಿರುವ ನಗರಗಳ ಹೊರವಲಯದಲ್ಲಿ ಮಾಡುತ್ತಿರುವ ಆಕಸ್ಮಿಕ ವಿಸ್ತರಣೆಯಿಂದಾಗಿ ಆ ನಗರಗಳ ಮೂಲಭೂತ ಸೌಕರ್ಯಗಳ ಮೇಲೆ ಪರಿಣಾಮ ಬೀರುತ್ತಿದೆ.
ಹೊಸ ನಗರಗಳ ಸ್ಥಾಪನೆಗೆ ಹಣಕಾಸು ಮಾರ್ಗಸೂಚಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಆದರೆ ದೇಶದ ನಾಗರಿಕರಿಗೆ ಹೊಸ ನಗರಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿರುವುದರಿಂದ ಕೇಂದ್ರ ಸರ್ಕಾರವು ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಿಂಗ್ ಹೇಳಿದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + nine =
Remember me
