
ವಿಜಯಪುರ:ಇತ್ತೀಚೆಗೆ ನಾನೇ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳುತ್ತಿದ್ದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಇದೀಗ ಅವರ ಹೇಳಿಕೆಯನ್ನು ಬದಲಿಸಿದ್ದು, ಮುಖ್ಯಮಂತ್ರಿ ಯಾರಾದರೂ ತಮ್ಮ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಾಳಿಕೋಟೆ ತಾಲೂಕಿನ ಕೊಡಗನೂರು ಗ್ರಾಮದಲ್ಲಿ ಬೂದಹಾಳ ತೀರಾಪೂರ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೊಮ್ಮಾಯಿಯವರೇ ಸಿಎಂ ಆಗಲು ನಮ್ಮ ತಕರಾರು ಇಲ್ಲ. ಈ ರೀತಿ ಮಾಡುವ ಜನರು ನಾವಲ್ಲ. ಮುಂದಿನ ಮುಖ್ಯಮಂತ್ರಿಯೂ ನೀವೇ ಆಗಿ ಎಂದು ಹೇಳಿದರು.
ನಾವು ಏನೂ ಆಗುವುದಿಲ್ಲ ಎಂದಾದ ಮೇಲೆ ತಕರಾರು ಮಾಡಿ ಏನು ಪ್ರಯೋಜನ ಎಂದರು. ಯತ್ನಾಳ ಅವರ ಮಾತಿಗೆ ಸಿಎಂ ನಸುನಕ್ಕು ಸುಮ್ಮನಾದರು. ಇನ್ನು ವೇದಿಕೆಯಲ್ಲಿ ಭಾಷಣದ ವೇಳೆ ಯತ್ನಾಳ್​ ಅವರ ಕಡೆ ನೋಡಿ ಸಿಎಂ ಕೈ ಮುಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಸನಗೌಡ ಯತ್ನಾಳ್​ ನಾವೇನು ತಕರಾರು ಮಾಡಲ್ಲ. ಮುಂದೆಯೂ ಸಿಎಂ ಆಗಿಬಿಡಿ ಎಂದು ಹೇಳಿದರು.
ಪಬ್​ನಲ್ಲಿ ಬಿಲ್​ ವಿಚಾರಕ್ಕೆ ಆದ ಜಗಳ ಸಾವಿನಲ್ಲಿ ಅಂತ್ಯ!
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twelve − eleven =
Remember me
