ಬೆಂಗಳೂರು: ಕರೊನಾ ಸೋಂಕು ಹರಡುವುದನ್ನು ತಪ್ಪಿಸಲು ದೇಶವ್ಯಾಪಿ ಮಾಡಲಾದ ಲಾಕ್​ಡೌನ್​ನಿಂದಾಗಿ ನಾಲ್ಕೂವರೆ ತಿಂಗಳಿನಿಂದ ಸ್ಥಗಿತಗೊಂಡಿರುವ ಮೆಟ್ರೋ ರೈಲು ಸೇವೆ ಆ. 16ಕ್ಕೆ ಆರಂಭವಾಗುವ ಸಾಧ್ಯತೆಗಳಿವೆ.
ಹಂತಹಂತವಾಗಿ ಲಾಕ್​ಡೌನ್ ಸಡಿಲಿಕೆ ಮಾಡಿ ವಿಮಾನ, ರೈಲು, ಬಸ್ ಸೇರಿ ಇನ್ನಿತರ ಸಾರಿಗೆ ವ್ಯವಸ್ಥೆ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ, ಮೆಟ್ರೋ ರೈಲು ಸೇವೆ ಆರಂಭಕ್ಕೆ ಅನುಮತಿ ಸಿಗಬೇಕಿದೆ.
ಇದನ್ನೂ ಓದಿ:‘ನೀವು ಬುಕ್​ ಮಾಡಿದ ಬಟ್ಟೆ ಸ್ಟಾಕ್​ ಇಲ್ಲ, ಓಟಿಪಿ ಹೇಳಿ ಅಕೌಂಟ್ ನೋಡ್ಕೊಳ್ಳಿ..’ಎಂದು ಯುವತಿಯ ವಂಚಿಸಿದ್ರು!
15ರಂದು ನಿರ್ಧಾರ: ಲಾಕ್​ಡೌನ್​ನಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಹಂತಹಂತವಾಗಿ ತೆಗೆಯಲಾಗುತ್ತಿದೆ. ಮೆಟ್ರೋ ರೈಲು, ಚಿತ್ರಮಂದಿರಗಳು ಸೇರಿ ಇನ್ನಿತರ ಉದ್ಯಮಗಳ ಕಾರ್ಯಚಟುವಟಿಕೆಗೆ ಅನುಮತಿ ನೀಡಿಲ್ಲ. 15ರಂದು ಲಾಕ್​ಡೌನ್ ತೆರವಿನ ಕುರಿತ ಮಾರ್ಗಸೂಚಿ ಬಿಡುಗಡೆ ಸಾಧ್ಯತೆಗಳಿವೆ.
ಇದನ್ನೂ ಓದಿ:ಮನೆಗೆ ನುಗ್ಗಿ ಮಹಿಳೆಯನ್ನು ಕಟ್ಟಿ ಹಾಕಿ ನಗ, ನಗದು ಹಣ ದೋಚಿದವರ ಸೆರೆ
ಮೆಟ್ರೋ ರೈಲು ಸೇವೆ ಆರಂಭಿಸಲು ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇರುವುದರಿಂದ ಬಿಎಂಆರ್​ಸಿಎಲ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೆಲಸಕ್ಕೆ ಬರಲು ತಯಾರಿರುವಂತೆ ಸಿಬ್ಬಂದಿಗೆ ಈಗಾಗಲೆ ಸೂಚಿಸಿದೆ. ಪ್ರಯಾಣಿಕರು ಅನುಸರಿಸಬೇಕಾದ ನಿಯಮಗಳ ಪಟ್ಟಿಯನ್ನೂ ಸಿದ್ಧಪಡಿಸಿದೆ.
ಮೆಟ್ರೋ ನಿರ್ಮಾಣ ಹಂತದ ಮಾರ್ಗದಲ್ಲಿ ಬಿರುಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
