ಹಾಸನ:ಚಿಕ್ಕ ಮಕ್ಕಳಿಗೆ ಆನ್​ಲೈನ್​ ಶಿಕ್ಷಣ ಹೊರೆಯಾಗಲಿದೆ ಎಂದು ನಿಮ್ಹಾನ್ಸ್​ ಅಭಿಪ್ರಾಯಪಟ್ಟಿದ್ದು, ಈ ಕುರಿತು ವರದಿ ಬಂದ ಕೂಡಲೇ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ತಿಳಿಸಿದರು.
ಸಕಲೇಶಪುರ ತಾಲೂಕಿನ ದೇವಾಲದಕೆರೆ ಗ್ರಾಮದಲ್ಲಿ ಶನಿವಾರ ಮಾತನಾಡಿದ ಸಚಿವರು, ರಾಜ್ಯದಲ್ಲಿ ಕೆಲ ಖಾಸಗಿ ಶಾಲೆಗಳು ಆನ್​ಲೈನ್​ ಕ್ಲಾಸ್​ ಗೀಳಿಗೆ ಬಿದ್ದಿವೆ. ಎಲ್​ಕೆಜಿ ಮತ್ತು ಯುಕೆಜಿ ಮಕ್ಕಳಿಗೂ ಆನ್​ಲೈನ್​ನಲ್ಲೇ ಶಿಕ್ಷಣ ಕೊಡುವ ವಿಚಾರದ ನನಗೆ ಅಚ್ಚರಿಯಾಯ್ತು. ಇದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿರಿVIDEO: ಸಚಿನ್​ ತೆಂಡೂಲ್ಕರ್​ ನೀಡಿದ್ದ ಚಾಲೆಂಜ್ ಸ್ವೀಕರಿಸಿದ ವಿಜಯಪುರ ಬಾಲಕ; ಕ್ರಿಕೆಟ್​ ಪ್ರಿಯರು ಫುಲ್​ ಫಿದಾ…
ಚಿಕ್ಕ ಮಕ್ಕಳ ಕಲಿಕೆಗೆ ಆನ್​ಲೈನ್ ಶಿಕ್ಷಣ ಪೂರಕವೇ ಎಂದು ನಿಮ್ಹಾನ್ಸ್​ಗೆ ಪತ್ರ ಬರೆದೆವು. ಆದರೆ, ಪುಟ್ಟ ಮಕ್ಕಳಿಗೆ ಆನ್​ಲೈನ್ ಶಿಕ್ಷಣ ಹೊರೆಯಾಗಲಿದೆ ಎಂಬ ಅಭಿಪ್ರಾಯ ನಿಮ್ಹಾನ್ಸ್​ನಿಂದ ಬಂದಿದೆ. ಈ ಬಗ್ಗೆ ವರದಿ ಬಂದ ಬಳಿಕ ಆದೇಶ ಹೊರಡಿಸುತ್ತೇವೆ. ಸರ್ಕಾರದಿಂದ ಅಧಿಕೃತ ಆದೇಶ ಬರೋವರೆಗೆ ಯಾರೂ ಪ್ರವೇಶ ಪ್ರಕ್ರಿಯೆ ಆರಂಭಿಸಬಾರದು. ಇದನ್ನು ಉಲ್ಲಂಘಿಸುವ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವರು ಎಚ್ಚರಿಸಿದ್ದಾರೆ.
ಎಸ್​ಎಸ್​ಎಲ್​ಸಿ ಪರೀಕ್ಷಾರ್ಥಿಗಳಿಗೆ ಮಾಸ್ಕ್ ಕೊಡಲು ಸರ್ಕಾರವೇ ತೀರ್ಮಾನ ಮಾಡಿದೆ. ಆದರೆ, ರಾಜ್ಯದ ಎಲ್ಲ 8.5 ಲಕ್ಷ ವಿದ್ಯಾರ್ಥಿಗಳಿಗೂ ಮಾಸ್ಕ್ ಕೊಡಲು ಸ್ಕೌಟ್ಸ್ ಆ್ಯಂಡ್ ಗೈಡ್ಸ್​ ಮುಂದೆ ಬಂದಿದೆ. ಜತೆಗೆ ಸಂಘ-ಸಂಸ್ಥೆಗಳೂ ಮಾಸ್ಕ್ ವಿತರಿಸಲು ಮುಂದಾಗಿವೆ. ಹಾಗಾಗಿ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯ ಇಲ್ಲ. ಪರೀಕ್ಷಾ ಕೊಠಡಿಯಲ್ಲಿ ತಲಾ 18 ರಿಂದ 20 ವಿದ್ಯಾರ್ಥಿಗಳು ಕೂರಬೇಕು. ಯಾರಿಗಾದರೂ ಶೀತ, ಕೆಮ್ಮು, ಜ್ಚರ ಇದ್ದರೆ ಅಂತಹವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದು ಸುರೇಶ್​ ಕುಮಾರ್​ ವಿವರಿಸಿದರು.
ಇದನ್ನೂ ಓದಿರಿ8 ವರ್ಷಗಳಿಂದ ಭೇದಿಸಲಾಗದ ದರೋಡೆ ಪ್ರಕರಣವನ್ನು ಕ್ಷಣದಲ್ಲೇ ಪರಿಹರಿಸಿದ 6 ವರ್ಷದ ಬಾಲಕ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
