ಬೆಂಗಳೂರು:ಮೈಸೂರು-ಬೆಂಗಳೂರು ದಶಪಥದಲ್ಲಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸಿದ್ದು, ಬಹಳಷ್ಟು ಸಾವು-ನೋವುಗಳು ಉಂಟಾಗಿವೆ. ಅದರಲ್ಲೂ ಕಳೆದ ಒಂದು ತಿಂಗಳಲ್ಲೇ ಅಪಘಾತದಲ್ಲಿ 26 ಮಂದಿ ಸಾವಿಗೀಡಾಗಿದ್ದು, ಈ ತಿಂಗಳಲ್ಲಿ 45 ಮಂದಿ ಮೃತಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಬೆಂಗಳೂರು-ಮೈಸೂರು ದಶಪಥದ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದು, ಎಕ್ಸ್​ಪ್ರೆಸ್​ವೇ ಕಾಮಗಾರಿ ಕುರಿತಂತೆ ಸಿಎಂ ಜತೆ ಮಾತನಾಡಿ ತನಿಖೆ ಮಾಡಿಸಲಾಗುವುದು ಎಂದಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ರಸ್ತೆ ಮಾಡಿದ್ದಾರೆ. ಅಪಘಾತಗಳು ಹೆಚ್ಚಾಗುತ್ತಿದ್ದು, ಕಳೆದ ತಿಂಗಳು ಅಪಘಾತದಲ್ಲಿ 26 ಮಂದಿ ಸತ್ತಿದ್ದು, ಈ ತಿಂಗಳು 45 ಜನರು ಸಾವಿಗೀಡಾಗಿದ್ದಾರೆ. ದಶಪಥದಲ್ಲಿ ಹಲವು ನ್ಯೂನತೆಗಳಿವೆ. ಮದ್ದೂರು, ಮಂಡ್ಯ ನಗರದೊಳಗೆ ಅಭಿವೃದ್ಧಿ ಮಾಡಿಲ್ಲ. ಆ್ಯಂಬುಲೆನ್ಸ್ ಇಲ್ಲ, ಕ್ರೇನ್​ಗಳಿಲ್ಲ, ಟ್ರಾಮಾ ಸೆಂಟರ್​ಗಳಿಲ್ಲ. ಸಾಕಷ್ಟು ಲೋಪದೋಷಗಳಿದ್ದು, ಸರಿಪಡಿಸುವ ತನಕ ಶ್ರೀರಂಗಪಟ್ಟಣದಲ್ಲಿ ಟೋಲ್ ಸಂಗ್ರಹ ಮಾಡಬಾರದು ಅಂತ ಸೂಚಿಸಿದ್ದೇವೆ, ಅವರು ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದರು.
ಇದನ್ನೂ ಓದಿ:ಇದನ್ನು ಕುಡಿದರೆ ಹೃದಯಾಘಾತದ ಸಾಧ್ಯತೆ ತೀರಾ ಕಡಿಮೆ ಅಂತೆ!; ಏನಿದು, ಎಷ್ಟು ಕುಡಿಯಬೇಕು?
ಈ ದಶಪಥದ ಒಪ್ಪಂದವೇ ಸರಿ ಇಲ್ಲ. ಮೀಡಿಯನ್​ ಎತ್ತರ ಕಡಿಮೆ ಇದೆ, ಹೀಗಾಗಿ ಅಪಘಾತ ಪ್ರಮಾಣ ಹೆಚ್ಚಾಗಿದೆ. ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಶೀಘ್ರವೇ ತನಿಖೆಗೊಳಪಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇವೆ. ತಾಂತ್ರಿಕ ತಂಡ ರಚಿಸುವಂತೆ ಕೋರುತ್ತೇವೆ. ಸಿಎಂ ಸೂಚಿಸಿದ ಬಳಿಕ ಅಂತಿಮ ನಿರ್ಧಾರ ತಳೆಯುತ್ತೇವೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ:ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಬೆಂಗಳೂರು ಮೈಸೂರು ದಶಪಥ ಯಾವುದೋ ಹಳ್ಳಿ ರಸ್ತೆ ಮಾಡಿದಂತಿದೆ. ಬೆಂಗಳೂರು ಮಂಗಳೂರು ಹೆದ್ದಾರಿಯೇ ಇದಕ್ಕಿಂತ ಎಷ್ಟೋ ಉತ್ತಮವಾಗಿದೆ. ಪಾಪ ಪ್ರತಾಪ್ ಸಿಂಹ ಅವರಿಗೆ ಇದೆಲ್ಲ ಗೊತ್ತಿಲ್ಲ. ಆಗ ರಾಜ್ಯದಲ್ಲೂ ಕೇಂದ್ರದಲ್ಲೂ ಅವರದೇ ಸರ್ಕಾರ ಇತ್ತು. ಗುತ್ತಿಗೆದಾರರು ಯಾರೋ ಅವರಿಗೂ ಬೇಕಾದವರು ಅಂತ ಹೇಳ್ತಾರಪ್ಪ, ಅದೆಲ್ಲ ನಮಗೆ ಸದ್ಯಕ್ಕೆ ಬೇಡ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಹಿನ್ನೆಲೆಯಲ್ಲಿ ತನಿಖೆ ಆಗಬೇಕಿದೆ ಎಂದು ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.
ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ, ಭೂಸ್ವಾಧೀನ, ಪರಿಹಾರ ವಿತರಣೆ, ಟೋಲ್ ಸಂಗ್ರಹಣೆ ಬಗ್ಗೆ ತನಿಖೆ‌ ಮಾಡಿಸುತ್ತೇವೆ. ಹೆದ್ದಾರಿ ಕಾಮಗಾರಿ ಅಕ್ರಮದ ಬಗ್ಗೆ ತನಿಖೆಗೆ ಮಂಡ್ಯ ಜಿಲ್ಲೆ ಶಾಸಕರು ಕೂಡ ಒತ್ತಾಯಿಸಿದ್ದಾರೆ ಎಂದು ಸಚಿವರು ತಿಳಿಸಿದರು.
ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!

ಮೊನ್ನೆ ಜಗ್ಗೇಶ್​ಗೆ ಕನ್ನಡ ಪಾಠ ಮಾಡಿದ್ದ ‘ಮೇಷ್ಟ್ರು’, ಇಂದು ಸಚಿವರು-ಸರ್ಕಾರಿ ಅಧಿಕಾರಿಗಳಿಗೂ ಕಿವಿಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 10 =
Remember me
