ಕೋಲಾರ:ಕರೊನಾ ಸೋಂಕಿನ ಸರಪಳಿ ಕಳಚಲು ಘೊಷಿಸಿರುವ ಎರಡನೇ ಹಂತದ ಲಾಕ್​ಡೌನ್ ಮುಂದುವರಿದಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವುದೋ ಇಲ್ಲವೋ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳಿದ್ದಾರೆ.
ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ರಿಂಗಣಿಸಿದ 178 ಕರೆಗಳಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ನಡೆಯುತ್ತದೆಯೇ ಎಂದು ಅನುಮಾನದಿಂದಲೇ ಪ್ರಶ್ನಿಸಿದರು. ರಾಜ್ಯದಲ್ಲೂ
ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಲಾಕ್​ಡೌನ್ ಮೇ 3ಕ್ಕೆ ಮುಗಿಯದೆ ಜೂನ್​ವರೆಗೂ ವಿಸ್ತರಣೆಯಾದೀತೇ ಎಂಬ ಆತಂಕ ಹೊರಹಾಕಿದರು.
ಕರೆ ಮಾಡಿದ ವಿದ್ಯಾರ್ಥಿಗಳಲ್ಲಿ ಬಹುತೇಕರು ಗ್ರಾಮೀಣರೇ ಆಗಿದ್ದರು. ಅದರಲ್ಲೂ ಸರ್ಕಾರಿ, ಅನುದಾನಿತ ಶಾಲೆ ಮಕ್ಕಳೇ ಹೆಚ್ಚು ಭಾಗವಹಿಸಿದ್ದು ವಿಶೇಷವಾಗಿತ್ತು. 112 ಪ್ರಶ್ನೆಗಳು ಪಠ್ಯಕ್ಕೆ ಸಂಬಂಧಿಸಿದಂತೆ ಇತ್ತು. ಅದರಲ್ಲಿ ಗಣಿತಕ್ಕೆ 40, ವಿಜ್ಞಾನಕ್ಕೆ 30, ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ 14 ಪ್ರಶ್ನೆ
ಹಾಗೂ 28 ಮಕ್ಕಳು ಉಳಿದ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆ ಕೇಳಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.
ವಿದ್ಯಾರ್ಥಿಗಳ ಸಂದೇಹಕ್ಕೆ ಉತ್ತರಿಸಿದ ಡಿಡಿಪಿಐ ಕೆ.ರತ್ನಯ್ಯ, ಲಾಕ್​ಡೌನ್ ಮುಗಿದ ನಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲೇ ವೇಳಾಪಟ್ಟಿ ಪ್ರಕಟವಾಗಲಿದೆ. ನಂತರ 10 ದಿನಗಳ ಪುನರ್​ವುನನ ತರಗತಿ ನಡೆಸಲಾಗುವುದು. ಪ್ರತಿ ವಿಷಯದ ಪರೀಕ್ಷೆ ನಡುವೆ ಓದಲು ಅವಕಾಶ ಸಿಗಲಿದೆ. ಇದರಲ್ಲಿ ಯಾವುದೇ ಆತಂಕ ಬೇಡ, ಮನೆಯಿಂದ ಹೊರಬರದೆ ಅಭ್ಯಾಸ ಮುಂದುವರಿಸಿ ಎಂದು ಧೈರ್ಯ ತುಂಬಿದರು.
ಏ.29 ಚಂದನದಲ್ಲಿ ಪರೀಕ್ಷಾ ಮಾಹಿತಿ: ಏ.29ರಿಂದ ಪ್ರತಿದಿನ ಮಧ್ಯಾಹ್ನ 3ರಿಂದ 4-30ರವರೆಗೂ 45 ನಿಮಿಷಗಳ ಎರಡು ಅವಧಿ ಪಠ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ನಡೆಯಲಿದೆ. ಗಣಿತ, ವಿಜ್ಞಾನ, ಸಮಾಜವಿಜ್ಞಾನ, ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲೀಷ್ ವಿಷಯಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ಹೇಗೆ ಎದುರಿಸಬೇಕು ಎಂಬುದರ ಕುರಿತು ತಜ್ಞರು ಮಾಹಿತಿ ನೀಡುತ್ತಾರೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು ಎಂದರು.
ಪಠ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ನಿಮ್ಮ ಶಿಕ್ಷಕರನ್ನು ದೂರವಾಣಿಯಲ್ಲಿ ಸಂರ್ಪಸಿ ಉತ್ತರ ಪಡೆಯಿರಿ. ಇಲಾಖೆ ನೀಡಿರುವ ಆರು ಸೆಟ್ ಪ್ರಶ್ನೆಪತ್ರಿಕೆ, ‘ನನ್ನನ್ನೊಮ್ಮೆ ಗಮನಿಸಿ’ ಅಭ್ಯಾಸ ಮಾಡಿ, ಅದರ ಪ್ರತಿ ಇಲ್ಲವಾದಲ್ಲಿ ದೂರವಾಣಿಯಲ್ಲಿ ತಿಳಿಸಿದಲ್ಲಿ ಸಾಫ್ಟ್ ಪ್ರತಿ ಕಳುಹಿಸುವುದಾಗಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದರು.
ವಿಷಯವಾರು ಸಮಸ್ಯೆಗಳಿಗೆ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಅನಂತಪದ್ಮನಾಭ್, ಬಿ.ಕೆ. ನಾಗರಾಜ್,ಬಿ.ಎ.ಕವಿತಾ, ಎನ್.ಎಸ್.ಭಾಗ್ಯಾ, ನರಸಿಂಹಪ್ರಸಾದ್, ಬಸವರಾಜ್, ಶೋಭಾ ಉತ್ತರಿಸಿ ಆತಂಕ ನಿವಾರಿಸಿದರು. ಪರೀಕ್ಷಾ ಸಿದ್ಧತೆ, ವೇಳಾಪಟ್ಟಿ ಮತ್ತಿತರ ಸಮಸ್ಯೆಗಳಿಗೆ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಬಿಇಒ ಕೆ.ಎಸ್.ನಾಗರಾಜಗೌಡ, ಡಿವೈಪಿಸಿ ಮೋಹನ್ ಬಾಬು, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ ಉತ್ತರಿಸಿದರು.
30ರಂದು ಮತ್ತೆ ಫೋನ್​ಇನ್:ಫೋನ್​ಇನ್ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಏ.30ರಂದು ಮತ್ತೆ ಕಾರ್ಯಕ್ರಮ ನಡೆಸಿ ಮಕ್ಕಳ ಆತಂಕ ನಿವಾರಿಸಲಾಗುವುದು ಎಂದು ರತ್ನಯ್ಯ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 5 =
Remember me
